ಅನೇಕ ಜನರಿಗೆ ಮಾಂಸ ಅಂದ್ರೆ ಬಹಳ ಇಷ್ಟ. ಇದರಲ್ಲಿ ಪ್ರೊಟೀನ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸತುವಿನಂತಹ ಅನೇಕ ಪೋಷಕಾಂಶಗಳು ಹೇರಳವಾಗಿರುತ್ತದೆ.
ಇದೀಗ ವಿಜ್ಞಾನಿಗಳು ಪೂರ್ತಿಯಾಗಿ ಮಾಂಸದ್ದೇ ರುಚಿಯನ್ನು ಹೊಂದಿರುವ ಅಕ್ಕಿಯನ್ನು ತಯಾರಿಸಿದ್ದಾರೆ. ನೀವು ಇದನ್ನು ಬಿರಿಯಾನಿಯಂತೆ ತಿನ್ನಬಹುದು. ಇದು ಇದ್ದರೆ ಮಟನ್, ಚಿಕನ್ ನ ಅಗತ್ಯನೇ ಇಲ್ಲ. ಇದರ ರುಚಿಯೂ ಅದ್ಭುತವಾಗಿದೆ. ಇದರಲ್ಲಿ ಪ್ರೋಟಿನ್ ಮತ್ತು ಕೊಬ್ಬು ಕೂಡ ಅಧಿಕವಾಗಿದೆ ಎಂದು ಹೇಳಲಾಗಿದೆ.
ದಕ್ಷಿಣ ಕೊರಿಯಾದ ಯೋನ್ಸೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಹೈಬ್ರಿಡ್ ಅಕ್ಕಿಯನ್ನು ಪ್ರಯೋಗಾಲಯದಲ್ಲಿ ಸಿದ್ಧಪಡಿಸಿದ್ದಾರೆ. ಇದಕ್ಕೆ ಅನೇಕ ರೀತಿಯ ಮಾಂಸವನ್ನು ಸೇರಿಸಲಾಗಿದೆ. ಇದು ನೋಡಲು ಸಾಮಾನ್ಯ ಅಕ್ಕಿಯಂತೆ ಇದ್ದರೂ ರುಚಿ ಮಾತ್ರ ಸಾಮಾನ್ಯ ಮಾಂಸಕ್ಕಿಂತಲು ಹೆಚ್ಚಾಗಿರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದು 11 ದಿನಗಳ ದಿನಗಳವರೆಗೆ ಸಂಗ್ರಹಿಸಲು ಯೋಗ್ಯವಾಗಿದ್ದು, ಮಾಂಸದ ಅಕ್ಕಿಯ ಉತ್ಪಾದನಾ ವಿಧಾನವು ಸರಳವಾಗಿದೆ ಎಂದು ತಿಳಿಸಿದ್ದಾರೆ. ಆದಷ್ಟು ಬೇಗ ಮಾಂಸದ ಅಕ್ಕಿ ಮಾರುಕಟ್ಟೆಗೆ ಬರಲೆಂದು ಮಾಂಸಪ್ರಿಯರು ಆಶಿಸುತ್ತಿದ್ದಾರೆ.


