ತುಮಕೂರು: ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನಲ್ಲಿ 2025–26ನೇ ಶೈಕ್ಷಣಿಕ ಸಾಲಿಗೆ ಪ್ರಥಮ ಬಿ.ಎಸ್ಸಿ., ಬಿ.ಸಿ.ಎ ಮತ್ತು ಬಿ.ಸಿ.ಎ((Data Science) ಪದವಿಗಳಿಗೆ ಪ್ರವೇಶ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು B.Sc(PCM, PMCs, PME, CBZ, CZMB, CBBt, EMCs., ZBcBt., ZBcMb.), BCA ಹಾಗೂ BCA(Data Science) ಕೋರ್ಸುಗಳ ಪ್ರವೇಶಕ್ಕಾಗಿ ಜಾಲತಾಣ tumkuruniversity.ac.in ಅಥವಾ ucst.ac.in ನಲ್ಲಿ U.U.C.M.S.ಮೂಲಕ ಮೇ 19 ರಿಂದ ಅರ್ಜಿ ಸಲ್ಲಿಸಬಹುದಾಗಿದೆ.
ಬಿ.ಸಿ.ಎ. ಕೋರ್ಸಿಗಾಗಿ ಜೂನ್ 6ರಂದು ಕಾಲೇಜು ಆವರಣದಲ್ಲಿ ಕೌನ್ಸಿಲಿಂಗ್ ನಡೆಯಲಿದೆ. ಜೂನ್ 2ರವರೆಗೆ ಸಲ್ಲಿಸಿರುವ ಅರ್ಜಿಗಳನ್ನು ಮಾತ್ರ ಕೌನ್ಸಿಲಿಂಗ್ಗೆ ಪರಿಗಣಿಸಲಾಗುವುದು.
ಬಿ.ಎಸ್ಸಿ. ಕೋರ್ಸಿಗಾಗಿ ಜೂನ್ 10ರಂದು ಕಾಲೇಜು ಆವರಣದಲ್ಲಿ ಕೌನ್ಸಿಲಿಂಗ್ ನಡೆಯಲಿದ್ದು, ಜೂನ್ 5ರವರೆಗೆ ಸಲ್ಲಿಸಿರುವ ಅರ್ಜಿಗಳನ್ನು ಮಾತ್ರ ಕೌನ್ಸಿಲಿಂಗ್ಗೆ ಪರಿಗಣಿಸಲಾಗುವುದು.
ಆನ್ಲೈನ್ ಅರ್ಜಿ ಸಲ್ಲಿಸಿದ ಪ್ರತಿಯೊಂದಿಗೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ( ಪ್ರಾಂಶುಪಾಲರ ಸಹಿಯೊಂದಿಗೆ), ಜಾತಿ/ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಇತ್ತೀಚಿನ ಒಂದು ಭಾವಚಿತ್ರ ಲಗತ್ತಿಸಿ ಕಾಲೇಜಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ವೆಬ್ಸೈಟ್ ucst.ac.in ನಲ್ಲಿ ವೀಕ್ಷಿಸಬಹುದಾಗಿದೆ ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW