ಚಾಣಕ್ಯ ತನ್ನ ಜೀವಿತಾವಧಿಯಲ್ಲಿ ಅನೇಕ ನೀತಿಗಳನ್ನು ರಚಿಸಿದ್ದಾರೆ. ಇದು ಚಾಣಕ್ಯನ ನೀತಿಗಳು ಎಂದೇ ಪ್ರಸಿದ್ಧಿ ಪಡೆದಿವೆ. ಚಾಣಕ್ಯನ ನೀತಿಯ ಪ್ರಕಾರ ಈ 5 ಗುಣಗಳೇ ಮನುಷ್ಯನ ವಿನಾಶಕ್ಕೆ ಕಾರಣವಂತೆ, ಆ ಗುಣಗಳು ಯಾವುದು ತಿಳಿದುಕೊಳ್ಳೋಣ ಬನ್ನಿ…
ಸೋಮಾರಿತನ:
ಯಾವುದೇ ವ್ಯಕ್ತಿ ಯಶಸ್ವಿ ಮತ್ತು ಸಮೃದ್ಧ ಜೀವನ ನಡೆಸಲು ಮೊದಲು ಸೋಮಾರಿತನದಿಂದ ಬಿಡುಗಡೆ ಹೊಂದಬೇಕಂತೆ. ಸೋಮಾರಿ ತನ ನಿಮ್ಮನ್ನು ಜೀವನದಲ್ಲಿ ಮುಂದೆ ಹೋಗಲು ಬಿಡುವುದಿಲ್ಲ. ಅದು ವಿನಾಶದತ್ತ ನಿಮ್ಮನ್ನು ಕೊಂಡೊಯ್ಯುತ್ತದೆ.
ಅಹಂಕಾರ:
ಅಹಂಕಾರಿ ವ್ಯಕ್ತಿ ಎಂದಿಗೂ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಯಾಕೆಂದರೆ, ಜೀವನದಲ್ಲಿ ಯಶಸ್ಸು ಪಡೆಯಲು ಅಹಂಕಾರವೇ ಅಡ್ಡಿಯಾಗಬಹುದು. ನಾನು ಎನ್ನುವ ಅಹಂಕಾರ, ನನ್ನಿಂದಲೇ ಎಲ್ಲ ಎನ್ನುವ ಅಹಂಕಾರ ಇರುವ ಮನುಷ್ಯರಿಂದ ಪ್ರತಿಯೊಬ್ಬರೂ ದೂರವಿರುತ್ತಾರೆ. ಹಾಗಾಗಿ ಆತ ಯಶಸ್ಸು ಪಡೆಯುವುದು ತುಂಬಾನೇ ಕಷ್ಟವಂತೆ.
ದುರಾಸೆ:
ಚಾಣಕ್ಯನ ಪ್ರಕಾರ ದುರಾಸೆ ಹೊಂದಿದ ವ್ಯಕ್ತಿ ಬೇಗನೇ ನಾಶವಾಗುತ್ತಾನಂತೆ. ಜೀವನದಲ್ಲಿ ಯಶಸ್ಸು, ಸಂತೋಷ ಬೇಕಾದರೆ, ದುರಾಸೆಯಿಂದ ದೂರವಿರಬೇಕು. ಎಲ್ಲರನ್ನೂ ಸಮಾನವಾಗಿ ನೋಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು.
ಸುಳ್ಳು ಹೇಳುವ ಅಭ್ಯಾಸ:
ಸುಳ್ಳು ಹೇಳುವ ಅಭ್ಯಾಸವನ್ನು ನೀವು ಹೊಂದಿದ್ದರೆ, ಈಗಲೇ ಬಿಟ್ಟು ಬಿಡಿ. ಸುಳ್ಳು ನಿಮ್ಮ ಮೇಲಿನ ನಂಬಿಕೆಯನ್ನು ಶಾಶ್ವತವಾಗಿ ಅಳಿಸಿ ಹಾಕಿ ಬಿಡುತ್ತದೆ. ನಿಮ್ಮ ಮೇಲೆ ಯಾರೂ ಕೂಡ ನಂಬಿಕೆ, ವಿಶ್ವಾಸ ವಿಡಲು ಸಾಧ್ಯವಿಲ್ಲ. ಇದರಿಂದಾಗಿ ನೀವು ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಿಲ್ಲ.
ಆಡಂಬರದ ಅಭ್ಯಾಸ:
ಸಾಕಷ್ಟು ಜನರು ಆಡಂಬರದ ಜೀವನ ನಡೆಸುತ್ತಿರುತ್ತಾರೆ. ಆದರೆ ಯಾವುದರಲ್ಲೂ ಹೆಚ್ಚು ಆಡಂಬರ ತೋರಿಸಿಕೊಳ್ಳದ ಜನರು ಬೇಗನೇ ಯಶಸ್ಸನ್ನು ಪಡೆಯುತ್ತಾರಂತೆ, ಬೇರೆಯವರಿಗೆ ತನ್ನ ಶ್ರೀಮಂತಿಕೆ, ತನ್ನ ಯಶಸ್ಸನ್ನು ಪ್ರದರ್ಶಿಸಿ ತಾನು ದೊಡ್ಡವ ಎಂದು ತೋರಿಸಿಕೊಳ್ಳುವ ಅಭ್ಯಾಸ ಮನುಷ್ಯನನ್ನು ವಿನಾಶದ ಅಂಚಿಗೆ ದೂಡುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx