ಬೆಂಗಳೂರು: ಖಾಸಗಿ ಕಂಪನಿಯ ಎಲೆಕ್ಟ್ರಿಕ್ ಬೈಕ್ ನ್ನು ಸಚಿವ ಶ್ರೀರಾಮುಲು ಅವರು ಉದ್ಘಾಟಿಸಿ, ಪರಿಸರ ಸ್ನೇಹಿ ಬೈಕ್ ಗಳ ಸಂಖ್ಯೆ ಹೆಚ್ಚಿಸಲು ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ಅವರು, ಮೇಡ್ ಇನ್ ಕರ್ನಾಟಕ, ಮೇಡ್ ಇನ್ ಇಂಡಿಯಾ ಅಡಿಯಲ್ಲಿ ನಮ್ಮದೇ ಸ್ಟಾರ್ಟ್ ಆಪ್ ಗಳು ದೇಶದಾದ್ಯಂತ ಅರಿವು ಮೂಡಿಸಲು ದಾಖಲೆ ಯಾತ್ರೆ ಕೈಗೊಳ್ಳುತ್ತಿರುವುದು ಒಳ್ಳೆಯ ವಿಷಯ ಎಂದರು.
ಎಲೆಕ್ಟ್ರಿಕ್ ಬೈಕ್ ಗಳಲ್ಲಿ 54 ದಿನಗಳಲ್ಲಿ 4,216 ಕಿ.ಮೀ ಪ್ರಯಾಣ ಮಾಡಿ ಅರಿವು ಮೂಡಿಸುವ ಜೊತೆಗೆ ದಾಖಲೆ ಪ್ರಯಾಣ ಕೈಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಖಾಸಗಿ ಸಂಸ್ಥೆಗಳು ಹಾಗೂ ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪೆಟ್ರೋಲ್, ಡಿಸೇಲ್ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಲು ಎಲೆಕ್ಟ್ರಿಕ್ ಗೆ ಬದಲಾಗಬೇಕಿದೆ ಎಂದು ಅವರು ತಿಳಿಸಿದರು.
ಇತ್ತೀಚೆಗೆ ಸುಮಾರು 50 ಕೋಟಿ ವೆಚ್ಚದಲ್ಲಿ ಎಲೆಕ್ಟ್ರಿಕ್ ಬಸ್ ಗಳನ್ನು ಸೇವೆಗೆ ಅರ್ಪಿಸಲಾಗಿದೆ ಹಾಗೆಯೇ ಹಲವು ಸಂಸ್ಥೆಗಳು ತಮ್ಮ ಎಲೆಕ್ಟ್ರಿಕ್ ಟು ವೀಲರ್ , ಫೋರ್ ವೀಲರ್ ಹಾಗೂ ಆಟೋಗಳನ್ನು ಮಾರುಕಟ್ಟೆಗೆ ತರುತ್ತಿವೆ ಎಂದು ಅವರು ಮಾಹಿತಿ ನೀಡಿದರು.
2030 ರ ವೇಳೆಗೆ ಶೇ. 30 ಖಾಸಗಿ ಕಾರ್ ಗಳನ್ನು ಎಲೆಕ್ಟ್ರಿಕ್ ಮಾಡುವ ಗುರಿ ಇದೆ, ಶೇ. 70 ಕಮರ್ಷಿಯಲ್ ವಾಹನಗಳನ್ನು ಎಲೆಕ್ಟ್ರಿಕ್ ಮಾಡುವ ಗುರಿ ಹೊಂದಲಾಗಿದೆ, ಶೇ. 40 ಬಸ್ ಗಳನ್ನು ಎಲೆಕ್ಟ್ರಿಕ್ ಮಾಡುವ ಗುರಿ ಇದೆ. ಶೇ. 80 2-3 ವೀಲರ್ ಗಳನ್ನು ಎಲೆಕ್ಟ್ರಿಕ್ ಮಾಡುವ ಗುರಿ ಇದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy