ಶ್ರೀಲಂಕಾ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರವಾಗಿ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ದೇಶವು ಹಲವಾರು ಕ್ರಮಗಳನ್ನು ತೆಗೆದುಕೊಂಡರು ಪರಿಸ್ಥಿತಿ ಮಾತ್ರ ಇನ್ನೂ ಹತೋಟಿಗೆ ಬಂದಿಲ್ಲ.
ಪೆಟ್ರೋಲ್ ಗಾಗಿ ಸಾಲುಗಟ್ಟಿ ನಿಂತವರಿಗೆ ಟೋಕನ್ ನೀಡಲಾಗಿದೆ. ಶಾಲೆಗಳನ್ನು ಮುಚ್ಚಲಾಗಿದೆ. ಸರ್ಕಾರಿ ನೌಕರರನ್ನು ಮನೆಯಿಂದಲೇ ಕೆಲಸ ಮಾಡಲು ಹೇಳಲಾಗುತ್ತಿದೆ.
ಶ್ರೀಲಂಕಾವು ಒಟ್ಟು 22 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಆಹಾರ, ಔಷಧ, ಇಂಧನ ಖರೀದಿಸಲು ಹಣದ ಮೊರೆ ಹೋಗುವ ಪರಿಸ್ಥಿತಿ ಬಂದಿದೆ.ಜನರು ಇಂಧನಕ್ಕಾಗಿ ಹಲವರು ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದಾರೆ.
ನಾಲ್ಕು ದಿನಗಳಿಂದ ಪಂಪ್ ಮುಂದೆ ಸರದಿಯಲ್ಲಿ ನಿಂತಿದ್ದೇನೆ. ಚೆನ್ನಾಗಿ ನಿದ್ದೆ ಮಾಡಲಿಲ್ಲ ಮತ್ತು ಸರಿಯಾಗಿ ಊಟನೂ ಮಾಡಿಲ್ಲ. ಇದು 67 ವರ್ಷದ ಆಟೋರಿಕ್ಷಾ ಚಾಲಕನ ಮಾತು. ನಮ್ಮ ಬಳಿ ಹಣವಿಲ್ಲ ಮತ್ತು ಕುಟುಂಬವನ್ನು ಪೋಷಿಸಲು ಸಾಧ್ಯವಿಲ್ಲ. 5 ಕಿ.ಮೀ ದೂರದ ಮನೆಗೆ ಹೋಗಲು ಇಂಧನವೂ ಇಲ್ಲ.ಈ ಸರದಿ ಸಾಲಿನಲ್ಲಿ 24 ನೇ ಸ್ಥಾನದಲ್ಲಿ ನಿಂತಿದ್ದ ಶೆಲ್ಟನ್ ಅವರ ಮಾತು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ವಾಣಿಜ್ಯ ರಾಜಧಾನಿ ಕೊಲಂಬೊ ಮತ್ತು ಸುತ್ತಮುತ್ತಲಿನ ಶಾಲೆಗಳನ್ನು ಒಂದು ವಾರದವರೆಗೆ ಮುಚ್ಚಲಾಗಿದೆ. ಮುಂದಿನ ಸೂಚನೆ ಬರುವವರೆಗೂ ಮನೆಯಿಂದಲೇ ಕೆಲಸ ಮಾಡುವಂತೆ ಸರ್ಕಾರಿ ನೌಕರರಿಗೂ ಸೂಚಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz