nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕಾವೇರಿ ನೀರು ಹಂಚಿಕೆ ವಿವಾದ: ತಮಿಳುನಾಡು ಸಿಎಂ ಕರ್ನಾಟಕ ಭೇಟಿ ಮುಂದೂಡಿಕೆ

    July 31, 2026

    ಬೀದರ್: ಬಸವಕಲ್ಯಾಣದಲ್ಲಿ ಕೆರೆಯಂತಾದ ರಸ್ತೆಗಳು; ಗುಂಡಿಗಳಲ್ಲಿ ಈಜಾಡಿದ ಮಕ್ಕಳು!

    July 31, 2026

    ಸರಗೂರು: ತಾಯಿ ಚಿಕ್ಕದೇವಮ್ಮ ಬೆಟ್ಟದಲ್ಲಿ ಮೂರನೇ ಆಷಾಢ ಶುಕ್ರವಾರದ ಸಂಭ್ರಮ; ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ

    July 31, 2026
    Facebook Twitter Instagram
    ಟ್ರೆಂಡಿಂಗ್
    • ಕಾವೇರಿ ನೀರು ಹಂಚಿಕೆ ವಿವಾದ: ತಮಿಳುನಾಡು ಸಿಎಂ ಕರ್ನಾಟಕ ಭೇಟಿ ಮುಂದೂಡಿಕೆ
    • ಬೀದರ್: ಬಸವಕಲ್ಯಾಣದಲ್ಲಿ ಕೆರೆಯಂತಾದ ರಸ್ತೆಗಳು; ಗುಂಡಿಗಳಲ್ಲಿ ಈಜಾಡಿದ ಮಕ್ಕಳು!
    • ಸರಗೂರು: ತಾಯಿ ಚಿಕ್ಕದೇವಮ್ಮ ಬೆಟ್ಟದಲ್ಲಿ ಮೂರನೇ ಆಷಾಢ ಶುಕ್ರವಾರದ ಸಂಭ್ರಮ; ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ
    • ಸರಗೂರು: ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ: ಅಹಮದ್ ಖಾನ್ ಸೆರ್
    • ತಿಪಟೂರು: ಆ.12ರಿಂದ ಭೀಮನ ಅಮಾವಾಸ್ಯೆ ಮಹೋತ್ಸವ
    • ಆ.3 ರಿಂದ ಕೋಟೆ ಗ್ರಾಮ ದೇವತೆ ಅಮ್ಮನವರ ಜಾತ್ರಾ ಮಹೋತ್ಸವ
    • ತುಮಕೂರು:  ಆ.3ರಿಂದ ಕೊಲ್ಲಾಪುರದಮ್ಮ, ಕರುಗಳಮ್ಮ ಜಾತ್ರಾ ಮಹೋತ್ಸವ
    • ಪಾವಗಡ: ವಸತಿ ಶಾಲೆಯಿಂದ ಓಡಿ ಹೋಗಿದ್ದ ವಿದ್ಯಾರ್ಥಿಗಳು ಪತ್ತೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » 32 ಪ್ರಕರಣಗಳಲ್ಲಿ ಬೇಕಾಗಿದ್ದ ಕಳ್ಳನನ್ನು ಸಾಹಸಮಯವಾಗಿ ಹಿಡಿದ ಪೊಲೀಸ್ ಪೇದೆ! | ವಿಡಿಯೋ ನೋಡಿ
    ತುಮಕೂರು August 8, 2024

    32 ಪ್ರಕರಣಗಳಲ್ಲಿ ಬೇಕಾಗಿದ್ದ ಕಳ್ಳನನ್ನು ಸಾಹಸಮಯವಾಗಿ ಹಿಡಿದ ಪೊಲೀಸ್ ಪೇದೆ! | ವಿಡಿಯೋ ನೋಡಿ

    By adminAugust 8, 2024No Comments2 Mins Read

    ತುಮಕೂರು:  ಜಿಲ್ಲೆಯ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಸೇರಿದಂತೆ 32  ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಮಂಜೇಶ ಎಂಬಾತನನ್ನು  ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಆತನನ್ನು ಬಂಧಿಸುವ ಸಂದರ್ಭದಲ್ಲಿ ಸಾಹಸಮಯವಾಗಿ ಪೊಲೀಸ್ ಪೇದೆ ದೊಡ್ಡಲಿಂಗಯ್ಯ ತೆಗೆದುಕೊಂಡ ಕ್ರಮದ ಬಗ್ಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.

    ಕೊರಟಗೆರೆ ಠಾಣಾ ವ್ಯಾಪ್ತಿಯಲ್ಲಿನ ಕೊರಟಗೆರೆ ಟೌನ್ ಡಿಸಿಸಿ ಬ್ಯಾಂಕ್‌ ಹತ್ತಿರ ಮನೆಯೊಂದರಲ್ಲಿ ಆರೋಪಿ ಮಂಜೇಶ ಕಳ್ಳತನ ಮಾಡಿದ್ದನು.  ಆರೋಪಿ ಪತ್ತೆಯ ಬಗ್ಗೆ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಲಾಗಿತ್ತು ಹಾಗೂ ತುಮಕೂರು ಸ್ಮಾರ್ಟ್ ಸಿಟಿ ಕಮ್ಯಾಂಡ್ ಸೆಂಟರ್‌ ನಲ್ಲಿ ವಾಹನಗಳನ್ನು ಪರಿಶೀಲನೆ ಮಾಡಿದಾಗ ಆರೋಪಿಯು ತುಮಕೂರು ನಗರದಲ್ಲಿ ಸಂಚರಿಸಿ ನಂತರ ದಾಬಸ್‌ ಪೇಟೆ, ನೆಲಮಂಗಲ ಮೂಲಕ ಬೆಂಗಳೂರು ತಲುಪಿದ್ದು ಆರೋಪಿ ಪತ್ತೆಗಾಗಿ ಅರೋಪಿತನ ವಾಹನ ನಂಬರ್‌ ನ್ನು ಬೆಂಗಳೂರು ನಗರದ ಟಿ.ಎಂ.ಸಿ. ಯ ಅಲರ್ಟ್ ವಾರ್ನಿಂಗ್ ಸೆಂಟರ್‌ ಗೆ ತಿಳಿಸಲಾಗಿತ್ತು.

    ಆಗಸ್ಟ್ 6ರಂದು  ಟಿ.ಎಂ.ಸಿ.ಯ ಇಂಜಿನಿಯರ್ ಅಶೋಕ್ ರವರು, ಕೊರಟಗೆರೆ ಪೊಲೀಸ್ ಠಾಣಾ ದೊಡ್ಡಲಿಂಗಯ್ಯ ರವರಿಗೆ ಸದಾಶಿವನಗರ ಟ್ರಾಫಿಕ್ ಜಂಕ್ಷನ್ ಬಳಿ ಆರೋಪಿ ಮಂಜೇಶ ದ್ವಿಚಕ್ರ ವಾಹನದಲ್ಲಿ ಬರುತ್ತಿರುವ ಬಗ್ಗೆ ನೀಡಿದ ಮಾಹಿತಿಯ ಮೇರೆಗೆ ಮಂಜೇಶ ನನ್ನ ದ್ವಿ ಚಕ್ರ ವಾಹನ ಸಮೇತ ಅಡ್ಡಗಟ್ಟಿದ್ದರು.

    ಆದರೆ ಆರೋಪಿ ಮಂಜೇಶ ವಾಹನವನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದನು.  ಈ ವೇಳೆ ಆತನ ಕಾಲನ್ನು ಹಿಡಿದು ಜಗ್ಗಿದ್ದು, ಸುಮಾರು 20 ಮೀಟರ್ ದೂರ ಎಳೆದು ಕೊಂಡು ಹೋಗಿರುತ್ತಾನೆ. ನಂತರ ಅಲ್ಲೆ ಇದ್ದ ಸದಾಶಿವನಗರ ಟ್ರಾಫಿಕ್‌ ಠಾಣಾ ಮಹಿಳಾ ಎಎಸ್‌ ಐ ನಾಗಮ್ಮ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಶ್ರೀಧರ್ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಲಾಗಿದೆ.

    ಆರೋಪಿಯಿಂದ ಒಟ್ಟು 10,000/- ರೂ ನಗದು ಹಣ, ಹಾಗೂ 6,75,000/- ರೂ ಬೆಲೆ ಬಾಳುವ 135 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಜೇಶ್ ಒಬ್ಬನೆ ದ್ವಿಚಕ್ರ ವಾಹನದಲ್ಲಿ ಬಂದು ವಯಸ್ಸಾದ ಹೆಂಗಸರಿಗೆ ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್ ಗಳ ಹತ್ತಿರ ವೃದ್ಧಾಪ್ಯ ವೇತನ ಮತ್ತು ಪೆನ್ಶನ್ ಕೊಡಿಸುವುದಾಗಿ ನಂಬಿಸಿ ಅವರ ಆಧಾರ್ ಕಾರ್ಡ, ರೇಷನ್ ಕಾರ್ಡ್ ಇತ್ಯಾದಿ ದಾಖಲಾತಿಗಳನ್ನು ಕೇಳಿ ಅವನ್ನು ಜೆರಾಕ್ಸ್ ಮಾಡಿಕೊಂಡು ಬರಲು ಆಸಾಮಿಯ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಹೋಗಿ ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್‌ ಗಳಲ್ಲಿ ಮೈಮೇಲಿನ ಒಡವೆಗಳನ್ನು ನೋಡಿದರೆ ವೃದ್ಧಾಪ್ಯ ವೇತನ ಮತ್ತು ಪೆನ್ಶನ್  ಕೊಡುವುದಿಲ್ಲ ಎಂದು ಅವರ ಮೈ ಮೇಲೆ ಇದ್ದ ಆಭರಣಗಳನ್ನು ಬಿಚ್ಚಿಸಿಕೊಂಡು ಅಥವ ಬಲವಂತವಾಗಿ ಕಿತ್ತುಕೊಂಡು ಹೋಗುವ ಪ್ರವೃತ್ತಿ ಉಳ್ಳವನಾಗಿದ್ದಾನೆ.

    ಈ ಆಭರಣಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಗೋವಾ/ಮಂಗಳೂರು ಕಡೆಗಳಿಗೆ ಹೋಗಿ ಮೋಜು ಮಸ್ತಿ ಮಾಡುತ್ತಿದ್ದನು.

     

    ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರೋಪಿ ಮಂಜೇಶ್ ನ ಮೇಲೆ ಪ್ರಕರಣ ದಾಖಲಾಗಿದೆ:

    1)  ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಮೊನಂ:56/2024 ಕಲಂ:420 ಐಪಿಸಿ

    2)  ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಮೊನಂ:75/2024 ಕಲಂ:420 ಐಪಿಸಿ

    3)  ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಮೊನಂ:135/2024 ಕಲಂ:379 ಐಪಿಸಿ

    4)  ಕೊರಟಗೆರೆ ಪೊಲೀಸ್ ಠಾಣೆ ಮೊನಂ:182/2024 ಕಲಂ:420 ಐಪಿಸಿ

    5)  ಹೆಬ್ಬರು ಠಾಣೆಯಲ್ಲಿ 229/2023 ಕಲಂ:420 ಐಪಿಸಿ

    6)  ಮಧುಗಿರಿ ಪೊಲೀಸ್ ಠಾಣೆಯಲ್ಲಿ ಮೊನಂ:21/2024 ಕಲಂ:420 ಐಪಿಸಿ

    7)  ಕೋಳಾಲ ಪೊಲೀಸ್ ಠಾಣೆಯಲ್ಲಿ ಮೊನಂ:25/2024 ಕಲಂ:379 ಐಪಿಸಿ

    ಇವುಗಳಲ್ಲದೆ ಆರೋಪಿಯು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಮೈಸೂರು ಸಿಟಿ ಪೊಲೀಸ್ ಠಾಣೆಗಳ ವ್ಯಾಪ್ತಿಗಳ ಸುಮಾರು 32 ಪ್ರಕರಣಗಳಲ್ಲಿ ಆರೋಪಿಯಾಗಿರುತ್ತಾನೆ.

    32 ಪ್ರಕರಣಗಳಲ್ಲಿ ಬೇಕಾಗಿದ್ದ ಕಳ್ಳನನ್ನು ಸಾಹಸಮಯವಾಗಿ ಹಿಡಿದ ಪೊಲೀಸ್ ಪೇದೆ! pic.twitter.com/tiLjVgZgiN

    — Namma Tumakuru (@namma_tumakuru) August 8, 2024


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    admin
    • Website

    Related Posts

    ಆ.3 ರಿಂದ ಕೋಟೆ ಗ್ರಾಮ ದೇವತೆ ಅಮ್ಮನವರ ಜಾತ್ರಾ ಮಹೋತ್ಸವ

    July 31, 2026

    ತುಮಕೂರು:  ಆ.3ರಿಂದ ಕೊಲ್ಲಾಪುರದಮ್ಮ, ಕರುಗಳಮ್ಮ ಜಾತ್ರಾ ಮಹೋತ್ಸವ

    July 31, 2026

    ವಾಣಿಜ್ಯ ಬಳಕೆಗೆ ಗೃಹ ಬಳಕೆ ಸಿಲಿಂಡರ್ ಬಳಕೆ: 8 ವಶ

    July 30, 2026

    Comments are closed.

    Our Picks

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಕಾವೇರಿ ನೀರು ಹಂಚಿಕೆ ವಿವಾದ: ತಮಿಳುನಾಡು ಸಿಎಂ ಕರ್ನಾಟಕ ಭೇಟಿ ಮುಂದೂಡಿಕೆ

    July 31, 2026

    ಬೆಂಗಳೂರು: ಕರ್ನಾಟಕದಲ್ಲಿ ಕಾವೇರಿ ನೀರು ಹಂಚಿಕೆ ವಿವಾದ ಮತ್ತು ತೀವ್ರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಆಗಸ್ಟ್ 3ರಂದು ಬೆಂಗಳೂರಿಗೆ ನಿಗದಿಯಾಗಿದ್ದ ತಮಿಳುನಾಡು…

    ಬೀದರ್: ಬಸವಕಲ್ಯಾಣದಲ್ಲಿ ಕೆರೆಯಂತಾದ ರಸ್ತೆಗಳು; ಗುಂಡಿಗಳಲ್ಲಿ ಈಜಾಡಿದ ಮಕ್ಕಳು!

    July 31, 2026

    ಸರಗೂರು: ತಾಯಿ ಚಿಕ್ಕದೇವಮ್ಮ ಬೆಟ್ಟದಲ್ಲಿ ಮೂರನೇ ಆಷಾಢ ಶುಕ್ರವಾರದ ಸಂಭ್ರಮ; ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ

    July 31, 2026

    ಸರಗೂರು: ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ: ಅಹಮದ್ ಖಾನ್ ಸೆರ್

    July 31, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.