ಪ್ರೇಮಾಂಜಲಿ ಕನ್ನಡ ಪ್ರೌಢಶಾಲೆ, ಉಜನಿ ವತಿಯಿಂದ ಹಮ್ಮಿಕೊಂಡಿದ್ದ ಅಂತರ್ ಶಾಲಾ ಸಾಂಸ್ಕೃತಿಕ ಮತ್ತು ಸಾಹಿತ್ಯ ಉತ್ಸವ ಮತ್ತು ಸ್ಪೋರ್ಟ್ ಕಾರ್ಯಕ್ರಮದಲ್ಲಿ 10 ಶಾಲೆಗಳಿಂದ 500 ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತಿರಂಗಾ ಕಾರ್ಯಕ್ರಮದಲ್ಲಿ ಅಂತರ್ ಶಾಲಾ ಕ್ರೀಡೋತ್ಸವ, ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಕ್ರೀಡಾ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಎಸ್ ಎಲ್ ಸಿ ನೋಡಲ್ ಅಧಿಕಾರಿ ECO ಬಲ ಭೀಮ್ ಕುಲಕರ್ಣಿ ಮಾತನಾಡಿ, ಕಾರ್ಯಕ್ರಮವು ಸಹಯೋಗ ತತ್ವ, ಸಕಾರಾತ್ಮಕ ಮನೋಭಾವ, ಕೌಶಲ ಪ್ರದರ್ಶನ, ಆರೋಗ್ಯಕರ ಸ್ಪರ್ಧೆ, ಸಹಿಷ್ಣುತೆ, ಸಂಯಮ, ಬುದ್ಧಿವಂತಿಕೆ, ಶಕ್ತಿ ಪ್ರದರ್ಶನ, ಕ್ರೀಡಾ ಮನೋಭಾವ, ಎಲ್ಲದಕ್ಕಿಂತ ಹೆಚ್ಚಾಗಿ ಸೌಹಾರ್ದ ಮನೋಭಾವಕ್ಕೆ ಸಾಕ್ಷಿಯಾಗಿತ್ತು ಎಂದು ಹೇಳಿದರು.
ಅದೇ ರೀತಿ ದೈಹಿಕ ಶಿಕ್ಷಣ ಪರಿವಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ TPO ಜೋಯಲ್ ಜಯರಾಜ್ ಇವರು ಮಾತನಾಡಿ, ಮಕ್ಕಳಿಗೆ ದೈಹಿಕ ಆಟಗಳ ಬಗ್ಗೆ ಮಾರ್ಗದರ್ಶನವನ್ನು ನೀಡಿದರು ಹಾಗೂ ಆಟಗಳು ಆಧುನಿಕಯುಗದಲ್ಲಿ ಬಹಳಷ್ಟು ಮಹತ್ವ ಎಂದು ಈ ರೀತಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಂಪನ್ಮೂಲ ವ್ಯಕ್ತಿ ಸಿಆರ್ ಪಿ ಆದ MD ಗಪ್ಪರ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಅಧಿಕಾರಿಗಳಾದ EC0 ರಾಜಕುಮಾರ್ ಹಾಗೂ ಕ್ರೀಡಾಕೂಟದ ಅಧ್ಯಕ್ಷರು ಪ್ರೇಮಾಂಜಲಿ ಪ್ರೌಢಶಾಲೆ ಉಜನಿ, ಸಿ. ಲಿನೀಟ್, ಮದರ್ ತೆರೇಸಾ ಸ್ಕೂಲ್ ವಡಗಂವ್ ಸಂಚಾಲಕರಾದ ಜೈವಂತ್ ಉಜನಿಕರ್, ಗ್ರಾಮ ಪಂಚಾಯತಿ ಗುಡಪಳ್ಳಿ ಅಧ್ಯಕ್ಷರಾದ ರವೀಂದ್ರ ರೆಡ್ಡಿ, ಸದಸ್ಯರು ಸಂಗರೆಡ್ಡಿ, ನರಸರೆಡ್ಡಿ, ಮಾಣಿಕ್ ಅನಿಲ್ ರೆಡ್ಡಿ ಊರಿನ ಜನರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296