ಸತತ 16 ವರ್ಷಗಳಿಂದಲೂ ಹೀನಾಯ ಪ್ರದರ್ಶನ ನೀಡುತ್ತಿರುವ, ಐಪಿಎಲ್ ಇತಿಹಾಸದಲ್ಲಿ ಒಮ್ಮೆಯೂ ಗೆಲ್ಲದ, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗುತ್ತಿರುವ ಆರ್ ಸಿಬಿ ತಂಡ ಈ ಬಾರಿಯ ಐಪಿಎಲ್ ನಲ್ಲೂ ಮತ್ತೊಮ್ಮೆ ಮುಗ್ಗರಿಸಿ ಬೀಳುವ ಹಾಗೆ ಕಾಣುತ್ತಿದೆ. ಈ ಬಾರಿಯ ಐಪಿಎಲ್ ನ ಮೂರು ಪಂದ್ಯಗಳಲ್ಲಿ ಆರ್ ಸಿಬಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಇದರಿಂದ ಅಭಿಮಾನಿಗಳು ಆರ್ ಸಿಬಿ ಯ ಆಡಳಿತ ಮಂಡಳಿ ವಿರುದ್ಧ ತಿರುಗಿ ಬೀದಿದ್ದಾರೆ. ಆರ್ ಸಿಬಿಯ ದುರಂತವೆಂದರೆ ಈ ಬಾರಿ ಅದರ ಬಳಿ ಉತ್ತಮ ಬೌಲರ್ ಗಳು ಇಲ್ಲದೆ ಇರುವುದು. ಆದರೆ ಈ ನಡುವೆ ಒಂದು ಅಚ್ಚರಿಯ ಸುದ್ದಿ ಕೇಳಿ ಬರುತ್ತಿದ್ದು ಈ ಬಾರಿ ಪುರುಷರ ಐಪಿಎಲ್ ತಂಡಕ್ಕೆ, ಮಹಿಳಾ ತಂಡದ ಆಟಗಾರ್ತಿ ಕನ್ನಡತಿ ಶ್ರೇಯಾಂಕ ಪಾಟೀಲ್ ಎಂಟ್ರಿ ಕೊಡ್ತಾರೆ ಅನ್ನೋ ಸುದ್ದಿಗಳು ಹರಿದಾಡುತ್ತಿದ್ದು, ಇದೀಗ ಈ ಸುದ್ದಿ ಎಲ್ಲೆಡೆ ಸಂಚಲನ ಮೂಡಿಸಿದೆ.
ಇತ್ತೀಚೆಗೆ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಕೊಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ 182 ರನ್ ಗಳಿಸಿತ್ತು ಆದರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಅದನ್ನು ಕೇವಲ 16.5 ಓವರ್ ಗೆ ಭರ್ಜರಿ 186 ರನ್ ಗಳಿಸಿ ಗೆದ್ದು ಬೀಗಿತ್ತು. ಹೀಗೆ ಆರ್ ಸಿಬಿ ಮತ್ತೊಮ್ಮೆ ಸೋತಾಗಿನಿಂದ ಈ ಮಾತು ಕೇಳಿಬರುತ್ತಿದೆ. ಅದು ಏನೆಂದರೆ ಸರಿಯಾದ ಬೌಲರ್ ಗನ್ನೇ ಹೊಂದಿರದ, ಅದರಲ್ಲಿಯು ಪ್ರಮುಖವಾಗಿ ಸ್ಪಿನ್ ಬೌಲರ್ ಇಲ್ಲದೆ ನರಳಾಡುತ್ತಿರುವ ಆರ್ ಸಿಬಿ ತಂಡಕ್ಕೆ ಕರ್ನಾಟಕದ ಟಗರು ಪುಟ್ಟಿ ಶ್ರೇಯಾಂಕಾ ಪಾಟೀಲ್ ಐಪಿಎಲ್ ಇತಿಹಾಸದಲ್ಲೇ, ಪುರುಷರ ತಂಡಕ್ಕೆ ಮಹಿಳಾ ಆಟಗಾರ್ತಿಯಾಗಿ ಎಂಟ್ರಿ ಕೊಡ್ತಾರಾ? ಎಂಬ ಊಹಾಪೋಹಗಳು ಎದ್ದಿವೆ.
ನಿಜವಾಗಲಿದೆಯ ಆರ್ ಸಿಬಿ ಅಭಿಮಾನಿಗಳ ಕನಸು?:
ಐಪಿಎಲ್ ನಿಯಮಗಳ ಪ್ರಕಾರ ಮಹಿಳಾ ಆಟಗಾರ್ತಿಯೊಬ್ಬರನ್ನು ಪುರುಷರ ತಂಡಕ್ಕೆ ಸೇರ್ಪಡೆ ಗೊಳಿಸುವ ಯಾವುದೇ ಅವಕಾಶಗಳು ಇಲ್ಲ. ಆದರೆ ಆರ್ ಸಿಬಿ ಅಭಿಮಾನಿಗಳು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಶ್ರೇಯಾಂಕ ಪಾಟೀಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಬೇಡಿಕೆ ಇಟ್ಟಿದ್ದಾರೆ. ಆರ್ ಸಿಬಿ ಮಹಿಳಾ ಆಟಗಾರ್ತಿಯರ ತಂಡ ಈ ಬಾರಿಯ ಐಪಿಎಲ್ ಕಪ್ ಗೆಲ್ಲಲು ಮುಖ್ಯ ಕಾರಣವಾಗಿರುವ ಶ್ರೇಯ ಪಾಟೀಲ್ ಅವರನ್ನ ತಂಡಕ್ಕೆ ಸೇರಿಸಿ ತಂಡವನ್ನು ಬಲಿಷ್ಠಗೊಳಿಸುವಂತೆ ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296