ತುಮಕೂರು: ತುಮಕೂರು ನಗರದಲ್ಲಿ ನಡೆಯುತ್ತಿರುವ ತುಮಕೂರು ದಸರಾ ಮಹೋತ್ಸವದಲ್ಲಿ ರೋಬೋಟ್ ಭಕ್ತರನ್ನು ಸೆಳೆಯುತ್ತಿದೆ.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗಿರುವ ವೇದಿಕೆಯಲ್ಲಿ ಶಕ್ತಿ ದೇವತೆಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು ಅದರ ಪಕ್ಕದಲ್ಲಿ ರೋಬೋಟ್ ಆನೆಯನ್ನು ಕೂಡ ಇರಿಸಲಾಗಿದೆ. ಸ್ವಿಚ್ ಮೂಲಕ ಆನೆಯ ಕಿವಿ ಹಾಗೂ ಸೊಂಡಿಲನ್ನು ಆಪರೇಟ್ ಮಾಡಲಾಗುತ್ತಿದೆ.
ಜಿಲ್ಲೆಯ ಕುಣಿಗಲ್ ತಾಲೂಕಿನ ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಈ ರೋಬೋಟ್ ಆನೆಯನ್ನು ಪೇಟಾ ಸಂಸ್ಥೆಯು ದಾನವಾಗಿ ನೀಡಿದೆ.
ತುಮಕೂರು ದಸರಾ ದೇವಿಗೆ ಚಂದ್ರಗಂಟಿ ಅಲಂಕಾರವನ್ನು ಮಾಡಿ ಪೂಜಿಸಲಾಗುತ್ತಿದೆ. ಕಳೆದ ಮೂರು ದಿನಗಳಿಂದ ದೇವಿಗೆ ವಿವಿಧ ಅಲಂಕಾರಗಳನ್ನು ಮಾಡಿ ಶಾಸ್ತ್ರೋಕ್ತವಾಗಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತಿದೆ.
ಈ ನಡುವೆ ಈ ವೇದಿಕೆಯಲ್ಲಿ ಬಹು ಆಕರ್ಷಣೀಯವಾಗಿ ಯಡಿಯೂರು ಸಿದ್ದಲಿಂಗೇಶ್ವರ ದೇಗುಲದಿಂದ ತರಿಸಲಾಗಿರುವ ರೋಬೋಟ್ ಆನೆಯು ಭಕ್ತರನ್ನು ಸೆಳೆಯುತ್ತಿದೆ. ಈ ಮೂಲಕ ಈ ಮಹೋತ್ಸವದಲ್ಲಿ ಒಂದು ಕೊರತೆಯನ್ನು ಈ ರೋಬೋಟ ಆನೆ ನೀಗಿಸಿದೆ ಎಂದೇ ಹೇಳಬಹುದಾಗಿದೆ ಎನ್ನುತ್ತಾರೆ ಅರ್ಚಕರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296