ಬೆಳಗಾವಿ: ಗಾಂಜಾ ವಿಚಾರಕ್ಕೆ ಸಹೋದರಿಬ್ಬರ ನಡುವೆ ನಡೆದ ಗಲಾಟೆ ತಮ್ಮನ ಸಾವಿನಲ್ಲಿ ಅಂತ್ಯಗೊಂಡ ಘಟನೆ ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಸುಶಾಂತ ಸುಭಾಷ್ ಪಾಟೀಲ (20) ಮೃತಪಟ್ಟ ಯುವಕನಾಗಿದ್ದು, ಈತನ ಅಣ್ಣ ಓಂಕಾರ ಸುಭಾಷ ಪಾಟೀಲ (23) ಎಂಬಾತನಿಗೆ ಗಂಭೀರವಾಗಿ ಗಾಯವಾಗಿದೆ.
ಸಹೋದರರಿಬ್ಬರೂ ಕೆಲ ವರ್ಷಗಳಿಂದ ಗಾಂಜಾ ಸೇವನೆ ಚಟ ಬೆಳೆಸಿಕೊಂಡಿದ್ದು, ಮತ್ತಿತನಲ್ಲಿ ಪೋಷಕರೊಂದಿಗೆ ಹಾಗೂ ಪರಸ್ಪರ ಜಗಳವಾಡುತ್ತಿದ್ದರು, ಶುಕ್ರವಾರ ಮನೆಕೆಲಸದ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಈ ವೇಳೆ ನೂಕಾಟ–- ತಳ್ಳಾಟದಲ್ಲಿ ಮನೆಯ ಎರಡನೇ ಮಹಡಿಯಿಂದ ಇಬ್ಬರೂ ಕೆಳಕ್ಕೆ ಬಿದ್ದಿದ್ದು, ಸುಶಾಂತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಓಂಕಾರ್ ಪಾಟೀಲ್ ಅವರ ಕಾಲುಗಳು ಮತ್ತು ಒಂದು ಕೈ ಮುರಿದಿದ್ದು, ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx