ಮುಂಬರುವ ದಿನಗಳಲ್ಲಿ ಕಾಣಿಸಿಕೊಳ್ಳಲಿರುವ ಕೊರೊನಾ ನಾಲ್ಕನೇ ಅಲೆಯಿಂದ ಬಚಾವಾಗಬೇಕಾದರೆ ಬೂಸ್ಟರ್ ಡೋಸ್ ಪಡೆದುಕೊಳ್ಳುವುದು ಅನಿವಾರ್ಯ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ಸಿಗದಿರುವುದು ಆತಂಕಕ್ಕೆ ಕಾರಣವಾಗಿದೆ.ಬಿಬಿಎಂಪಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ಸಿಗುತ್ತಿಲ್ಲ. ಬದಲಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಎಷ್ಟು ಬೇಕೋ ಅಷ್ಟು ಬೂಸ್ಟರ್ ಡೋಸ್ ಸಿಗುತಿದೆ. ಬೂಸ್ಟರ್ ಡೋಸ್ ಹೆಸರಿನಲ್ಲಿ ಲೂಟಿಗೆ ಇಳಿದಿರುವ ಖಾಸಗೀ ಆಸ್ಪತ್ರೆಗಳು ಡೋಸ್‍ಗಳನ್ನು ಹಣಕ್ಕೆ ಮಾರಾಟ ಕೊಳ್ಳುತ್ತಿವೆ. ಉಳ್ಳವರು ಖಾಸಗೀ ಆಸ್ಪತ್ರೆಗಳಿಗೆ ತೆರಳಿ ನಿಗಪಡಿಸಿರುವ ಹಣ ಪಾವತಿಸಿ ಬೂಸ್ಟರ್ ಡೋಸ್ ಪಡೆದುಕೊಳ್ಳುತ್ತಿದ್ದಾರೆ. ಹಣ ಇಲ್ಲದವರು ಬೂಸ್ಟರ್ ಡೋಸ್ ಸಿಗದೆ ಪರದಾಡುವಂತಾಗಿದೆ.
ಕೊರೊನಾ ನಾಲ್ಕನೆ ಅಲೆ ಕಾಣಿಸಿಕೊಳ್ಳುತ್ತಿರುವ ಸಂದರ್ಭದಲ್ಲೆ ಸರ್ಕಾರ ಬೂಸ್ಟರ್ ಡೋಸ್‍ಗಳನ್ನು ಖಾಸಗೀ ಆಸ್ಪತ್ರೆಗಳಿಗೆ ನೀಡಿ ಸಾಮಾನ್ಯ ನಾಗರೀಕರಿಗೆ ಉಚಿತ ಬೂಸ್ಟರ್ ನೀಡದಿರುವುದು ಜನ ಸಾಮಾನ್ಯರನ್ನು ಕಂಗೇಡಿಸಿದೆ. ಒಂದು ಹಾಗೂ ಎರಡನೆ ಹಂತದ ಕೊರೊನಾ ಸಂದರ್ಭದಲ್ಲಿ ಉಚಿತ ಕೊರೊನಾ ಲಸಿಕೆ ನೀಡಿದ್ದ ಸರ್ಕಾರ ಈಗ ಮಾತ್ರ ಮೂರನೇ ಡೋಸ್‍ಗೆ ಹಣ ನಿಗ ಮಾಡುವುದು ಎಷ್ಟು ಸರಿ ಎನ್ನುವುದು ಪ್ರಜ್ಞಾವಂತ ನಾಗರೀಕರ ಪ್ರಶ್ನೆಯಾಗಿದೆ.ಈ ಹಿಂದೆ ಸರ್ಕಾರ ಎರಡು ಡೋಸ್ ಉಚಿತ ಲಸಿಕೆ ನೀಡಿದ್ದ ಪರಿಣಾಮ ಕೊರೊನಾ ಸೋಂಕು ಇಳಿಮುಖವಾಗಿತ್ತು. ಇದೀಗ ನಾಲ್ಕನೆ ಅಲೆ ಸಂದರ್ಭದಲ್ಲೂ ಸರ್ಕಾರ ಉಚಿತ ಬೂಸ್ಟರ್ ಡೋಸ್ ಲಸಿಕೆ ನೀಡಿದರೆ ಸೋಂಕಿನ ಪರಿಣಾಮ ತೀವ್ರಗೊಳ್ಳುವುದಿಲ್ಲ. ಹೀಗಾಗಿ ಸರ್ಕಾರ ಉಚಿತ ಬೂಸ್ಟರ್ ಡೋಸ್ ನೀಡಬೇಕು ಎಂದು ನಾಗರೀಕರು ಒತ್ತಾಯಿಸಿದ್ದಾರೆ.
ಉಚಿತ ಬೂಸ್ಟರ್ ಡೋಸ್ ಗೆ ಒತ್ತಾಯ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರಕ್ಕೆ ಉಚಿತ ಬೂಸ್ಟರ್ ಡೋಸ್ ನೀಡುವಂತೆ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶಕ್ಕೆ ಬಿಬಿಎಂಪಿ ಅಕಾರಿಗಳು ಕಾದು ಕುಳಿತಿದ್ದು, ಉಚಿತ ಬೂಸ್ಟರ್ ನೀಡುವಂತೆ ಆದೇಶ ಬಂದರೆ ನಾವು ನೀಡಲು ಸಿದ್ದ ಎಂದು ಅಕಾರಿಗಳು ತಿಳಿಸಿದ್ದಾರೆ.ಸಿದ್ದತೆ: ಕೊರೊನಾ ನಾಲ್ಕನೆ ಅಲೆ ಎದುರಿಸಲು ಬಿಬಿಎಂಪಿ ಸಕಲ ಸಿದ್ದತೆ ಮಾಡಿಕೊಂಡಿದೆ. ಭಷ್ಯದಲ್ಲಿ ಕಾಡಬಹುದಾದ ನಾಲ್ಕನೆ ಅಲೆ ಎದುರಿಸಲು ಬಿಬಿಎಂಪಿಯ ಎಲ್ಲಾ ಭಾಗಗಳ ಅಕಾರಿಗಳು ಸೈನಿಕರಂತೆ ಸನ್ನದ್ಧರಾಗಿರಬೇಕು ಎಂಬ ಸೂಚನೆ ರವಾನಿಸಲಾಗಿದೆ. ಲಸಿಕೆ ಹಾಕಿಸುವುದು, ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್ ಸಿದ್ದತೆ ಮಾಡಿಕೊಳ್ಳುವಂತೆ ವ್ಯಾಕ್ಸಿನೇಷನ್ ತಂಡಕ್ಕೆ ಸೂಚಿಸಲಾಗಿದೆ.
ನಾಲ್ಕನೆ ಅಲೆ ಕಾಣಿಸಿಕೊಳ್ಳುವ ಭೀತಿ ಆರಂಭವಾಗುತ್ತಿದ್ದಂತೆ ನಗರದಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಳ್ಳುವವರ ಪ್ರಮಾಣವೂ ಏರಿಕೆಯಾಗುತ್ತಿದೆ.
ಇದುವರೆಗೂ ಮೊದಲ ಹಾಗೂ ಎರಡನೆ ಲಸಿಕೆ ಹಾಕಿಸಿಕೊಳ್ಳದವರು ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆಗಳಿಗೆ ದೌಡಾಯಿಸುತ್ತಿದ್ದಾರೆ. ಆದರೆ, ಬೂಸ್ಟರ್ ಡೋಸ್ ಲಸಿಕೆಗಳನ್ನು ಕೇವಲ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ 600 ಹಣ ಪಾವತಿಸಿ ತೆಗೆದುಕೊಳ್ಳಬೇಕಿರುವುದರಿಂದ ಬೂಸ್ಟರ್ ಡೋಸ್ ಹಾಕಿಸಿಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy