ತುಮಕೂರು: ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ಸೋಮಣ್ಣ ಇಂದು ಚಿಕ್ಕನಾಯಕನಹಳ್ಳಿ ತಾಲೂಕು, ಹುಳಿಯಾರು ಹೋಬಳಿ ಮತ್ತು ಕಂದಿಕೆರೆ ಹೋಬಳಿಗಳಲ್ಲಿ 10 ಪಂಚಾಯಿತಿಗಳ ದಿವ್ಯಾಂಗ ಫಲಾನುಭವಿಗಳಿಗೆ ಭಾರತ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ADIP ಯೋಜನೆಯಡಿಯಲ್ಲಿ ದಿವ್ಯಾಂಗ ಫಲಾನುಭವಿಗಳಿಗೆ ಸಹಾಯಕ ಸಲಕರಣೆ ವಿತರಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರ ಆಹವಾಲು ಸ್ವೀಕರಿಸಿ ಸ್ಥಳದಲ್ಲಿಯೇ ಇಲಾಖಾ ಅಧಿಕಾರಿಗಳಿಗೆ ಪರಿಹಾರ ಕ್ರಮಕೈಗೊಳ್ಳಲು ಆದೇಶಿಸಿದರು. ಬಡವನಹಳ್ಳಿ ಪಂಚಾಯಿತಿ ಆವರಣದಲ್ಲಿ ನೂರಾರು ಸಾರ್ವಜನಿಕರ ಆಹವಾಲುಗಳನ್ನು ಇಲಾಖೆ ಅಧಿಕಾರಿಗಳೊಂದಿಗೆ ಸ್ವೀಕರಿಸಿದರು.
ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನಕಣಿವೆ ಜಲಾಶಯಕ್ಕೆ ಮೀನು ಬಿಡುಗಡೆ ಕಾರ್ಯಕ್ರಮ ಹಾಗೂ ಕಂದಿಕೆರೆ ಪ್ರಾಥಮಿಕ ಆರೋಗ್ಯ ಘಟಕದ ಸಿಬ್ಬಂದಿಗಳ ವಸತಿ ಗೃಹ ಉದ್ಘಾಟನೆ ಮತ್ತು ಕಂದಿಕೆರೆ – ಚಿಕ್ಕಬಿದರೆ ರಸ್ತೆಗೆ ಕಸವೇಹಟ್ಟಿಯಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು. ಶಾಸಕ ಸುರೇಶ್ ಬಾಬು ಮತ್ತು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx