ಪ್ರಯಾಗ್ ರಾಜ್: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಶುಕ್ರವಾರ ಕುಂಭ ಮೇಳಕ್ಕೆ ಭೇಟಿ ನೀಡಿದ್ದು, ನಾಗ ಸಾಧುಗಳು ಮತ್ತು ಅಘೋರಿಗಳೊಂದಿಗೆ ಆಧ್ಯಾತ್ಮಿಕತೆ ಬಗ್ಗೆ ಚರ್ಚೆ ನಡೆಸಿದರು.
ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡುವ ಯು.ಟಿ.ಖಾದರ್ ಸಾಧುಗಳೊಂದಿಗೆ ಬೆರೆತರು. ದಕ್ಷಿಣ ಕನ್ನಡದ ಆಪ್ತ ಸ್ನೇಹಿತರ ಜೊತೆಗೂಡಿ ಕುಂಭಮೇಳದ ಮಹಾನುಭವವನ್ನು ಪಡೆದರು.
ಎಲ್ಲರಲ್ಲೂ ಬೆರೆಯುವ ಮತ್ತು ಪರಸ್ಪರ ಧರ್ಮಗಳನ್ನು ಗೌರವಿಸುವ ಖಾದರ್ ಅವರ ನಿದರ್ಶನ ಇದೇ ಮೊದಲಲ್ಲ. ಮಂಗಳೂರಿನಲ್ಲಿ ಹಿಂದೂ ದೇವಾಲಯಗಳು, ಕ್ರಿಶ್ಚಿಯನ್ ಚರ್ಚ್ಗಳು ಮತ್ತು ಜೈನ ಆರಾಧನಾ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಹೆಸರುವಾಸಿಯಾಗಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx