ತುಮಕೂರು: ಒಬ್ಬ ವ್ಯಕ್ತಿಯ ದೇಹಕ್ಕೆ ಸಾವಿರುತ್ತದೆ ಆದರೆ ಆತ್ಮಕ್ಕೆ ಎಂದಿಗೂ ಸಾವಿರುವುದಿಲ್ಲ. ಅದು ಅವರ ಸಾಧನೆಗಳಲ್ಲಿ ಅಡಗಿರುತ್ತದೆ. ಎಚ್.ಎಸ್.ವೆಂಕಟೇಶಮೂರ್ತಿ ಯವರು ಅವರ ಸಾಹಿತ್ಯ ನಮ್ಮೊಂದಿಗೆ ಸದಾ ಇರುತ್ತದೆ ಎಂದು ವಿಶ್ವವಿದ್ಯಾಲಯ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ದಾಕ್ಷಾಯಿಣಿ ತಿಳಿಸಿದರು.
ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನಲ್ಲಿ ಕನ್ನಡ ವಿಭಾಗದಿಂದ ಹಮ್ಮಿಕೊಂಡಿದ್ದ ಎಚ್.ಎಸ್.ವೆಂಕಟೇಶಮೂರ್ತಿಯವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಗಿನ ವಿದ್ಯಾರ್ಥಿಗಳು ಎಚ್.ಎಸ್.ವೆಂಕಟೇಶಮೂರ್ತಿ ಅವರ ಸಾಹಿತ್ಯ ಕಲೆಯನ್ನು ಮತ್ತು ತತ್ವದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇಂಗ್ಲಿಷ್ ವಿಭಾಗದ ಸಹಪ್ರಾಧ್ಯಾಪಕ ಡಾ.ಬಿ.ಎನ್.ವೇಣುಗೋಪಾಲ ಮಾತನಾಡಿ, ಆಕೃತಿ ಅಳಿದಿದೆ ಆತ್ಮ ಉಳಿದಿದೆ. ಎಚ್.ಎಸ್.ವೆಂಕಟೇಶಮೂರ್ತಿ ಯವರ ಸಾಧನೆ ಹಲುವು ಕ್ಷೇತ್ರಗಳಲ್ಲಿ ಜೀವಂತವಾಗಿದೆ.ಅವರು ರಚಿಸಿರುವಂತಹ ಭಾವಗೀತೆಗಳು ನಾಟಕಗಳು ಹಾಡುಗಳು ಸಿನಿಮಾದ ಮೇಲಿನ ಒಲವು ಅಪಾರವಾದದ್ದು ಎಂದರು.
ಕನ್ನಡ ಸಹಪ್ರಾಧ್ಯಾಪಕ ಡಾ.ಶಿವಣ್ಣ ಬೆಳವಾಡಿ ಮಾತನಾಡಿ, ಎಚ್.ಎಸ್.ವೆಂಕಟೇಶಮೂರ್ತಿ ಯವರು ಸಾಹಿತಿಗಳು ಅಷ್ಟೇ ಅಲ್ಲ ಒಳ್ಳೆಯ ಹಾಡುಗಾರರು ಕೂಡ ಹೌದು. ಎಲ್ಲರೊಡಗಿನ ಅವರ ಒಡೆನಾಟ ಯಾರೂ ಕೂಡ ಮರೆಯಲಾಗದಂತಹದು. ಅವರಸಾಹಿತ್ಯದಲ್ಲಿ ವೈಚಾರಿಕ ಭಾವನೆಗಳನ್ನು ತುಂಬಿದಂತಹ ಮಹಾನ್ ವ್ಯಕ್ತಿ ಮತ್ತು ಜೊತೆಗಿರುವ ಶಿಷ್ಯರನ್ನು ಉನ್ನತಮಟ್ಟಕ್ಕೆ ಬೆಳೆಸಿದ ಗುರುಗಳು ಎಚ್.ಎಸ್.ವೆಂಕಟೇಶಮೂರ್ತಿ ಎಂದರು.
ಈ ಕಾರ್ಯಕ್ರಮದಲ್ಲಿ ಡಾ.ರೇಣುಕಾ ಎಚ್.ಆರ್., ಡಾ.ನಿರಂಜನರಾನ, ಚನ್ನಬಸವಎಂ.ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW