nammatumakuru

    Subscribe to Updates

    Get the latest creative news from FooBar about art, design and business.

    What's Hot

    “ಹೌದು ನಾನು ಏಜೆಂಟ್, ಆದರೆ ಮಾಫಿಯಾ ಕಮಿಷನ್ ಏಜೆಂಟ್ ಅಲ್ಲ”: ಸಿಎಂ ಡಿಕೆಶಿಗೆ ಆರ್. ಅಶೋಕ್ ತಿರುಗೇಟು

    June 11, 2026

    26 ವರ್ಷಗಳ ಹಿಂದೆ ಸರ್ಕಸ್ ಕಂಪನಿ ಜೊತೆ ಓಡಿಹೋಗಿದ್ದ ಸತೀಶ್ ‘ಸಲೀಂ’ ಆಗಿ ಮನೆಗೆ ವಾಪಸ್!

    June 11, 2026

    ಅಕ್ರಮ ಸಂಬಂಧಕ್ಕೆ ಮಹಿಳೆ ಬಲಿ; ಪ್ರಿಯಕರನ ಬಂಧನ!

    June 11, 2026
    Facebook Twitter Instagram
    ಟ್ರೆಂಡಿಂಗ್
    • “ಹೌದು ನಾನು ಏಜೆಂಟ್, ಆದರೆ ಮಾಫಿಯಾ ಕಮಿಷನ್ ಏಜೆಂಟ್ ಅಲ್ಲ”: ಸಿಎಂ ಡಿಕೆಶಿಗೆ ಆರ್. ಅಶೋಕ್ ತಿರುಗೇಟು
    • 26 ವರ್ಷಗಳ ಹಿಂದೆ ಸರ್ಕಸ್ ಕಂಪನಿ ಜೊತೆ ಓಡಿಹೋಗಿದ್ದ ಸತೀಶ್ ‘ಸಲೀಂ’ ಆಗಿ ಮನೆಗೆ ವಾಪಸ್!
    • ಅಕ್ರಮ ಸಂಬಂಧಕ್ಕೆ ಮಹಿಳೆ ಬಲಿ; ಪ್ರಿಯಕರನ ಬಂಧನ!
    • ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ: KRS ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ ವಿರುದ್ಧ ಕೇಸು ದಾಖಲು
    • ಸಿರಾ: ಟಿ.ಬಿ.ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಲು ಬ್ಲಾಕ್ ಕಾಂಗ್ರೆಸ್ ಒತ್ತಾಯ
    • ತುಮಕೂರು ವಿಶ್ವವಿದ್ಯಾನಿಲಯ: ವಿವಿಧ ಪದವಿಗಳ ಉಳಿಕೆ ಸೀಟುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ
    • ದೆಹಲಿಯಲ್ಲಿ ತಿಪಟೂರು ಕಾಂಗ್ರೆಸ್ ಶಾಸಕ ಷಡಕ್ಷರಿ ದಿಢೀರ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
    • ರಾಜ್ಯ ಮಟ್ಟದ ಚರ್ಮ ಪಾದರಕ್ಷೆ ತಯಾರಿಕಾ ಸ್ಪರ್ಧೆ: ಜುಲೈ 6 ರಂದು ಬೆಂಗಳೂರಿನಲ್ಲಿ ಆಯೋಜನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಎತ್ತಿನಹೊಳೆ ಯೋಜನೆಯ ಭೂಸ್ವಾಧೀನಕ್ಕೆ ವೇಗ, ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಗೆ ರಾಷ್ಟ್ರ ಮಟ್ಟದ ಪ್ರಶಸ್ತಿ
    ತುಮಕೂರು June 16, 2025

    ಎತ್ತಿನಹೊಳೆ ಯೋಜನೆಯ ಭೂಸ್ವಾಧೀನಕ್ಕೆ ವೇಗ, ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಗೆ ರಾಷ್ಟ್ರ ಮಟ್ಟದ ಪ್ರಶಸ್ತಿ

    By adminJune 16, 2025No Comments2 Mins Read
    koratagere

    ತುಮಕೂರು: ತುಮಕೂರು ಜಿಲ್ಲಾಧಿಕಾರಿಯಾದ ಶುಭ ಕಲ್ಯಾಣ್, (ಭಾ.ಆ.ಸೇ.) ISDA Infracon National Awards — 2025 (IINA) ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಹಾಗೂ  ಮಹತ್ವದ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ಬೇಕಾದ ಭೂಸ್ವಾಧೀನ ಪ್ರಕ್ರಿಯೆಗೆ ಇವರು ತೆಗೆದುಕೊಂಡ ಕ್ರಮಗಳಿಗೆ ಈ ಪ್ರಶಸ್ತಿ ಲಭಿಸಿದೆ.

    ತುಮಕೂರು ಜಿಲ್ಲೆಯ ಸರಾಸರಿ ವಾರ್ಷಿಕ ಮಳೆಯ ಪ್ರಮಾಣ ಕೇವಲ 590 ಮಿ.ಮೀ. ಆಗಿದ್ದು, ಈ ಹಿನ್ನಲೆಯಲ್ಲಿ,  ಕುಡಿಯುವ ನೀರಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿರುವುದು ಅತ್ಯವಶ್ಯಕವಾಗಿದ್ದು. ಈ ಸಮಸ್ಯೆಯ ತೀವ್ರತೆಯನ್ನು ಅರಿತುಕೊಂಡ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ರವರು ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕಾಗಿ ಹೆಚ್ಚಿನ ಪ್ರಾಮುಖ್ಯತೆ ನೀಡಿರುತ್ತಾರೆ. ಎತ್ತಿನಹೊಳೆ ಯೋಜನೆಗೆ ಅವಶ್ಯಕವಾಗಿ ಬೇಕಾದ 1335 ಎಕರೆ ಭೂಮಿ ಸ್ವಾಧೀನ ಪಡಿಸಿಕೊಂಡು, ರೂ. 365 ಕೋಟಿ ಪರಿಹಾರ ಹಣವನ್ನು ಕೇವಲ ಒಂದು ವರ್ಷದ ಅವಧಿಯಲ್ಲಿ ಭೂ-ಮಾಲೀಕರಿಗೆ ಪಾರದರ್ಶಕವಾಗಿ ಪಾವತಿಸಿ ಭೂ ಸ್ವಾಧೀನಕ್ಕೆ ಹೆಚ್ಚಿನ ಒತ್ತು ನೀಡಿರುತ್ತಾರೆ.


    Provided by
    Provided by

    ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 75ಕ್ಕೂ ಹೆಚ್ಚು ಪರಿಶೀಲನಾ ಸಭೆಗಳನ್ನು ಕೈಗೊಂಡು, ಭೂಸ್ವಾಧೀನ ಪ್ರಕ್ರಿಯೆ ವೇಗ ನೀಡಿದ್ದಲ್ಲದೆ, ಎಲ್ಲಾ ತಾಲ್ಲೂಕುಗಳಲ್ಲಿ ದಾಖಲೆ ಶುದ್ಧೀಕರಣ ಶಿಬಿರಗಳನ್ನು ನಡೆಸಿ ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕಾಗಿ ಅವಶ್ಯಕತೆ ಇರುವ 1335 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು, ರೂ. 365 ಕೋಟಿ ಪರಿಹಾರ ಹಣವನ್ನು ಭೂ-ಮಾಲೀಕರಿಗೆ ಪಾರದರ್ಶಕವಾಗಿ ನೀಡಿ ಸಂಬಂಧಿಸಿದ ತಾಂತ್ರಿಕ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ತಾಲ್ಲೂಕು ಮಟ್ಟದ ಸಭೆಗಳನ್ನು ನಡೆಸಿರುತ್ತಾರೆ.

    ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಎತ್ತಿನಹೊಳೆ ಯೋಜನೆಯ ಪ್ರಮುಖ ಹಂತವಾದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿರುವುದರಿಂದ ತುಮಕೂರು ಜಿಲ್ಲೆಗೆ ಸುಮಾರು 5 ಟಿಎಂಸಿ ನೀರಿನ ಲಾಭ ದೊರೆಯಲಿದ್ದು, ಸಮಗ್ರ ಹಾಗೂ ಪರಿಣಾಮಕಾರಿಯಾಗಿ ಆಡಳಿತಾತ್ಮಕ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿದ ಸೇವೆಯನ್ನು ಪರಿಗಣಿಸಿ ಶ್ರೀಮತಿ ಶುಭ ಕಲ್ಯಾಣ್‌ ರವರಿಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಗಣ್ಯರು ಅಭಿನಂದನೆ ಸಲ್ಲಿಸಿರುತ್ತಾರೆ.

    ಎತ್ತಿನಹೊಳೆ ಯೋಜನೆಯ ವಿಶೇಷತೆಗಳೆನೆಂದರೆ ಈ ಯೋಜನೆಯಡಿಯಲ್ಲಿ 10.47 ಕಿ.ಮೀ ಉನ್ನತ ಗುರುತ್ವಾಕರ್ಷಣ ಕಾಲುವೆ ಮತ್ತು 520 ವಿಶೇಷ ಸೇತುಬಂಧಗಳನ್ನು ನಿರ್ಮಿಸುವ ಮೂಲಕ ಆಕ್ವಡಕ್ಟ್ ಎಂಜಿನಿಯರಿಂಗ್ ತಂತ್ರಜ್ಞಾನವನ್ನು ಬಳಸಲಾಗಿದೆ. ಈ ಯೋಜನೆ ಬರಪೀಡಿತ ಪ್ರದೇಶಗಳಲ್ಲಿ ಕಣಿವೆಗಳ ನಡುವೆ ನೀರಿನ ವರ್ಗಾವಣೆ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಅವಳಿ ತೊಟ್ಟಿಗಳು ಮತ್ತು ಸರ್ವಿಸ್ ರಸ್ತೆಗಳ ಸಮನ್ವಯವು ನಿರ್ವಹಣೆ ಮತ್ತು ಕಾರ್ಯಾಚರಣೆಯ ದಕ್ಷತೆಗಾಗಿ ಹೊಸ ವಿನ್ಯಾಸದ ಉದಾಹರಣೆಯಾಗಿದೆ.

    ಬಹು–ಏಜೆನ್ಸಿ ಸಹಯೋಗ ಮತ್ತು 3ನೇ ವ್ಯಕ್ತಿಯ ಗುಣಮಟ್ಟ ನಿಯಂತ್ರಣದ ಬಳಕೆ ಮೂಲಸೌಕರ್ಯ ನಿರ್ವಹಣೆಯಲ್ಲಿ ಉತ್ತಮ ಪ್ರಕ್ರಿಯೆಗಳ ಪ್ರತಿಬಿಂಬವಾಗಿದೆ.

    ಈ ಕಾರಣಕ್ಕಾಗಿ ISDA ಸಂಸ್ಥೆ ವತಿಯಿಂದ ಆಯೋಜಿಸಲಾದ “Infracon National Awards – 2025” New Delhiಯಲ್ಲಿ ದಿನಾಂಕ: 14.06.2025ರಂದು ನಡೆದ ಕಾರ್ಯಕ್ರಮದಲ್ಲಿ ಮೂಲಭೂತ ಸೌಲಭ್ಯಗಳ ಅಧಿವೃದ್ಧಿ, ಕೃಷಿಸ್ಥಿರತೆ ಹಾಗೂ ತುಮಕೂರು ಜಿಲ್ಲೆಯ ನಾಗರೀಕರ ಕಲ್ಯಾಣಕ್ಕಾಗಿ ಶ್ರಮಿಸಿದ ಜಿಲ್ಲಾಧಿಕಾರಿ ಶ್ರೀಮತಿ ಶುಭ ಕಲ್ಯಾಣ್ ಇವರಿಗೆ ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳು, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವರಾದ ಮಾನ್ಯ ಶ್ರೀ ಹರ್ಷ ಮಲ್ಲೋತ್ರಾ ರವರು ಮತ್ತು ಇತರೆ ಗಣ್ಯರ ಸಮ್ಮುಖದಲ್ಲಿ ಪಾರಿತೋಷಕ ಮತ್ತು ಪ್ರಶಸ್ತಿ ಪ್ರಧಾನವನ್ನು ನೀಡಿ ಗೌರವಿಸಲಾಯಿತು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

    admin
    • Website

    Related Posts

    ತುಮಕೂರು ವಿಶ್ವವಿದ್ಯಾನಿಲಯ: ವಿವಿಧ ಪದವಿಗಳ ಉಳಿಕೆ ಸೀಟುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

    June 11, 2026

    ತುಮಕೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ

    June 10, 2026

    ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ವೃದ್ಧೆಯ ಕೊಲೆ: ಮುಖ್ಯ ಆರೋಪಿಗೆ ಜೀವಾವಧಿ, ಮತ್ತೊಬ್ಬಳಿಗೆ 3 ವರ್ಷ ಜೈಲು

    June 10, 2026

    Comments are closed.

    Our Picks

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    “ಹೌದು ನಾನು ಏಜೆಂಟ್, ಆದರೆ ಮಾಫಿಯಾ ಕಮಿಷನ್ ಏಜೆಂಟ್ ಅಲ್ಲ”: ಸಿಎಂ ಡಿಕೆಶಿಗೆ ಆರ್. ಅಶೋಕ್ ತಿರುಗೇಟು

    June 11, 2026

    ಬೆಂಗಳೂರು: ಬೆಂಗಳೂರಿನ ಕಸದ ಟೆಂಡರ್‌ನಲ್ಲಿ 10 ಸಾವಿರ ಕೋಟಿ ರೂಪಾಯಿ ಕಿಕ್ ಬ್ಯಾಕ್ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ…

    26 ವರ್ಷಗಳ ಹಿಂದೆ ಸರ್ಕಸ್ ಕಂಪನಿ ಜೊತೆ ಓಡಿಹೋಗಿದ್ದ ಸತೀಶ್ ‘ಸಲೀಂ’ ಆಗಿ ಮನೆಗೆ ವಾಪಸ್!

    June 11, 2026

    ಅಕ್ರಮ ಸಂಬಂಧಕ್ಕೆ ಮಹಿಳೆ ಬಲಿ; ಪ್ರಿಯಕರನ ಬಂಧನ!

    June 11, 2026

    ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ: KRS ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ ವಿರುದ್ಧ ಕೇಸು ದಾಖಲು

    June 11, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.