ತುಮಕೂರು: ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆಯು ವಿಕಲಚೇತನರಿಗಾಗಿ ನವೆಂಬರ್ 20ರಂದು ಬೆಳಿಗ್ಗೆ 10:30 ಗಂಟೆಗೆ ನಗರದ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿದೆ.
ದೈಹಿಕ ವಿಕಲಚೇತನರ ವಿಭಾಗದಲ್ಲಿ 6–18ವರ್ಷದವರಿಗಾಗಿ ಚೆಂಡು ಎಸೆತ, 100 ಮೀ. ನಡಿಗೆ, ಗಾಯನ ಸ್ಪರ್ಧೆ ಹಾಗೂ 18-45 ವರ್ಷದವರಿಗಾಗಿ ಗುಂಡು ಎಸೆತ, ಜಾವಲಿನ್ ಥ್ರೋ, ಗಾಯನ ಸ್ಪರ್ಧೆ; ದೃಷ್ಟಿದೋಷವುಳ್ಳವರ ವಿಭಾಗದಲ್ಲಿ 6–18ವರ್ಷದವರಿಗಾಗಿ ಚೆಂಡು ಎಸೆತ, ಮ್ಯೂಸಿಕಲ್ ಛೇರ್, ಗಾಯನ ಸ್ಪರ್ಧೆ ಹಾಗೂ 18–45 ವರ್ಷದವರಿಗಾಗಿ ಗುಂಡು ಎಸೆತ, ಮ್ಯೂಸಿಕಲ್ ಛೇರ್, ಗಾಯನ ಸ್ಪರ್ಧೆ; ಶ್ರವಣದೋಷವುಳ್ಳವರ ವಿಭಾಗದಲ್ಲಿ 6-18 ಹಾಗೂ 18–45 ವರ್ಷದವರಿಗಾಗಿ ಗುಂಡು ಎಸೆತ, 100 ಮೀ. ಓಟ, ಚಿತ್ರಕಲಾ ಸ್ಪರ್ಧೆ; ಬುದ್ದಿಮಾಂಧ್ಯರ ವಿಭಾಗದಲ್ಲಿ 6–18 ಹಾಗೂ 18–45 ವರ್ಷದವರಿಗಾಗಿ ಮ್ಯೂಸಿಕಲ್ ಛೇರ್, ಚೆಂಡು ಎಸೆತ, ವೇಷ ಭೂಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಆಸಕ್ತ ವಿಕಲಚೇತನರು ಸ್ಪರ್ಧೆಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಶಿಲ್ಪ ಎಂ ದೊಡ್ಡಮನಿ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q