nammatumakuru

    Subscribe to Updates

    Get the latest creative news from FooBar about art, design and business.

    What's Hot

    ಎಚ್ಚರ! ಗೂಗಲ್ ಪ್ಲೇ ಸ್ಟೋರ್‌ ನಲ್ಲೇ ನಕಲಿ ವಾಟ್ಸಾಪ್; 5 ಲಕ್ಷಕ್ಕೂ ಹೆಚ್ಚು ಡೌನ್‌ ಲೋಡ್, ನಿಮ್ಮ ಫೋನ್‌ ಗೂ ಅಪಾಯವೇ?

    October 18, 2026

    ದೃಷ್ಟಿ ದೋಷ ನಿವಾರಣೆಗೆ ಉಪ್ಪು, ಒಣ ಮೆಣಸಿನಕಾಯಿ ಬಳಕೆ! ಈ ಸಂಪ್ರದಾಯದ ಹಿಂದಿನ ನಂಬಿಕೆ ಏನು?

    October 18, 2026

    ತುಮಕೂರು ದಸರಾದಲ್ಲಿ ಗಮನ ಸೆಳೆದ ಮಹಿಳಾ ಬೈಕ್ ರೈಡ್: ಬೈಕ್ ಚಲಾಯಿಸಿ ಗಮನ ಸೆಳೆದ ಮಹಿಳಾ ಅಧಿಕಾರಿಗಳು

    October 18, 2026
    Facebook Twitter Instagram
    ಟ್ರೆಂಡಿಂಗ್
    • ಎಚ್ಚರ! ಗೂಗಲ್ ಪ್ಲೇ ಸ್ಟೋರ್‌ ನಲ್ಲೇ ನಕಲಿ ವಾಟ್ಸಾಪ್; 5 ಲಕ್ಷಕ್ಕೂ ಹೆಚ್ಚು ಡೌನ್‌ ಲೋಡ್, ನಿಮ್ಮ ಫೋನ್‌ ಗೂ ಅಪಾಯವೇ?
    • ದೃಷ್ಟಿ ದೋಷ ನಿವಾರಣೆಗೆ ಉಪ್ಪು, ಒಣ ಮೆಣಸಿನಕಾಯಿ ಬಳಕೆ! ಈ ಸಂಪ್ರದಾಯದ ಹಿಂದಿನ ನಂಬಿಕೆ ಏನು?
    • ತುಮಕೂರು ದಸರಾದಲ್ಲಿ ಗಮನ ಸೆಳೆದ ಮಹಿಳಾ ಬೈಕ್ ರೈಡ್: ಬೈಕ್ ಚಲಾಯಿಸಿ ಗಮನ ಸೆಳೆದ ಮಹಿಳಾ ಅಧಿಕಾರಿಗಳು
    • ಆಕಾಶ ನೀಲಿಯಾಗಿ ಕಾಣುವುದೇಕೆ? ಆಕಾಶ ಕೆಂಪಾಗುವುದೇಕೆ?
    • ಸೈಕಲ್ ಗೆ ಹಾಲಿನ ಟ್ಯಾಂಕರ್ ಡಿಕ್ಕಿ:  5 ವರ್ಷದ ಮಗು ಸಾವು
    • ಟ್ರೆಕ್ಕಿಂಗ್ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಅಪಘಾತ: ಯುವತಿ ಸಾವು
    • ಪ್ರತಿ ಗ್ರಾಮ ಪಂಚಾಯತಿಗೊಂದು ಆಟದ ಮೈದಾನ ಅವಶ್ಯ: ಕೊರಟಗೆರೆಯಲ್ಲಿ ಎಂ.ಎನ್.ಜೆ. ಮಂಜುನಾಥ್ ಆಗ್ರಹ
    • ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಮೊಬೈಲ್‌ ನಲ್ಲೇ ಕೆಲವೇ ನಿಮಿಷಗಳಲ್ಲಿ ಹೀಗೆ ಪರಿಶೀಲಿಸಿ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮದ್ಯಪಾನ ಬಿಡಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರ ಸಹಕಾರಿ: ಡಾ.ಶ್ರೀಶಿವಾನಂದಶಿವಾಚಾರ್ಯಸ್ವಾಮೀಜಿ
    Uncategorized August 12, 2024

    ಮದ್ಯಪಾನ ಬಿಡಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರ ಸಹಕಾರಿ: ಡಾ.ಶ್ರೀಶಿವಾನಂದಶಿವಾಚಾರ್ಯಸ್ವಾಮೀಜಿ

    By adminAugust 12, 2024No Comments2 Mins Read
    Dharamsthala project

    ತುಮಕೂರು: ಮದ್ಯಪಾನ ಬಿಟ್ಟು ತಮ್ಮ ಕುಟುಂಬದ ಸದಸ್ಯರೊಂದಿಗೆ ಹೊಸ ಜೀವನ ಪ್ರಾರಂಭಿಸಿ, ಡಾ.ಡಿ.ವಿರೇಂದ್ರ ಹೆಗ್ಗಡೆರವರು ಸಮಾಜವನ್ನು ದೃಷ್ಟಿಯಲ್ಲಿಟ್ಟುಕೊಂಡು ಮದ್ಯ ಸೇವಿಸಿ ತಮ್ಮ ಜೀವನವನ್ನು ಹಾಳುಮಾಡಿಕೊಂಡ ಜನರನ್ನು ಒಂದೆಡೆ ಸೇರಿಸಿ 8 ದಿನಗಳ ಕಾಲ ಸಾರ್ವಜನಿಕರು, ದಾನಿಗಳ ಸಹಕಾರದೊಂದಿಗೆ ಶಿಬಿರ ಏರ್ಪಡಿಸಿ ಕುಡಿತವನ್ನು ಬಿಡಿಸಿ ಲಕ್ಷಾಂತರ ಜನರಿಗೆ ಉತ್ತಮ ಜೀವನವನ್ನು ಕಟ್ಟಿಕೊಟ್ಟವರು.

    ಜೀವನದಲ್ಲಿ ಆರೋಗ್ಯವೇ ಭಾಗ್ಯ, ಎಲ್ಲರೂ ಸೇವಾ ಕಾರ್ಯಗಳನ್ನು ಸದಾ ಮಾಡುತ್ತಿರಿ, ಈ ಶಿಬಿರದಿಂದ ಮಾನಸಿಕವಾಗಿ ಪರಿವರ್ತನೆ ಆಗಿದ್ದೀರಿ, ಈ ದೇಶಕ್ಕೆ ಆಸ್ತಿಯಾಗಿ ಉತ್ತಮ ಜೀವನವನ್ನು ನಡೆಸಿ ತಂದೆ ತಾಯಿಗೆ ಉತ್ತಮ ಮಗನಾಗಿ, ಹೆಂಡತಿಗೆ ಒಳ್ಳೆಯ ಜವಾಬ್ದಾರಿ ಗಂಡನಾಗಿ, ತಂದೆಯಾಗಿ ತಮ್ಮ ಮಕ್ಕಳೊಂದಿಗೆ ಜೀವನ ನಡೆಸಿ ಎಂದು ಹಿರೇಮಠದ ಡಾ.ಶ್ರೀ ಶ್ರೀ ಶಿವನಾಂದಶಿವಾಚಾರ್ಯಸ್ವಾಮೀಜಿಗಳು ಆಶೀರ್ವದಿಸಿದರು.

    ಭೀಮಸಂದ್ರ ಗಣಪತಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ೧೮೩೩ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವಾರಾಧ್ಯರವರು ಎಲ್ಲರೂ ಜೀವನದಲ್ಲಿ ಮದ್ಯಪಾನ ಬಿಟ್ಟು ಹೊಸ ಜೀವನ ಕಟ್ಟಿಕೊಳ್ಳಿ, ಆರ್ಥಿಕ ಸಾಮಾಜಿಕ ಜೀವನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮುಂದಿನ ಜೀವನ ನಡೆಸಿ ಎಂದು ಕಿವಿಮಾತು ಹೇಳಿದರು.

    ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಪ್ರಾದೇಶಿಕ ನಿರ್ದೇಶಕರಾದ ಎಂ.ಶೀನಪ್ಪ, ನವರು ಪೂಜ್ಯ ವೀರೇಂದ್ರ ಹೆಗ್ಗಡೆರವರ ದೂರದೃಷ್ಠಿತ್ವದಿಂದ ಸಮಾಜದಲ್ಲಿ ಹಲವಾರು ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಮದ್ಯವರ್ಜನ ಶಿಬಿರದಿಂದ ಇಲ್ಲಿವರೆವಿಗೂ ೧.೩ಲಕ್ಷ ಜನ ಕುಡಿತ ಬಿಟ್ಟು ಉತ್ತಮ ದಾರಿಯಲ್ಲಿ ಸಾಗುತ್ತಿದ್ದಾರೆ. ಸ್ವಾಭಿಮಾನದಿಂದ ಬದುಕಿ ತೋರಿಸಿ, ನೀವೆಲ್ಲರೂ ಸಮಾಜದ ಮುಖ್ಯ ವಾಹಿನಿಗೆ ಬರಬೇಕು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಸಾರ್ವಜನಿಕರಿಗೆ ಸರ್ಕಾರದ ಎಲ್ಲ ಯೋಜನೆಗಳನ್ನು ತಲುಪಿಸುತ್ತಿದ್ದೇವೆ, ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಸುಜ್ಞಾನ ನಿಧಿಯಿಂದ ತಲಾ ೧ ಸಾವಿರ ವಿದ್ಯಾರ್ಥಿವೇತನ ನೀಡುತ್ತಿದ್ದೇವೆ. ನೂರಾರು ಯೋಜನೆಯ ಮೂಲಕ ರಾಜ್ಯದ ಎಲ್ಲ ಜನರಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಕಳಕಳಿ ಇಟ್ಟುಕೊಂಡು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸೇವೆ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.

    ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣರವರು ಮಾತನಾಡುತ್ತಾ, ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಜನರಿಗೆ ಅಭಯದಾನ, ಶಿಕ್ಷಣ ದಾನ, ಅನ್ನದಾನ, ಔಷಧ ದಾನ ಹೀಗೆ ನಾನಾ ದಾನಗಳನ್ನು ನೀಡುತ್ತಾ ಬರುತ್ತಿದ್ದಾರೆ, 8 ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ಶಿಬಿರಾರ್ಥಿಯಾಗಿ ಪಾಲ್ಗೊಂಡ ಗಂಡನನ್ನು ಇಂದು ಹೆಂಡತಿಗೆ ಒಪ್ಪಿಸುತ್ತಿದ್ದೇವೆ, ಅನ್ಯೋನ್ಯವಾಗಿ ಮುಂದಿನ ಜೀವನ ನಡೆಸಿ ಎಂದು ದಂಪತಿಗಳಿಗೆ ತಿಳಿಸಿದರು.

    ವೇದಿಕೆಯಲ್ಲಿ ಮುರಳೀಧರ ಹಾಲಪ್ಪ, ಅಮರನಾಥಶೆಟ್ಟಿ, ಈಶ್ವರಯ್ಯ, ಉಪ್ಪಾರಹಳ್ಳಿ ಕುಮಾರ್, ಗಣೇಶ್ ಪ್ರಸಾದ್, ತಿಮ್ಮಯ್ಯ ನಾಯಕ್ ಮುಂತಾದವರು ಉಪಸ್ಥಿತರಿದ್ದರು. ತಾಲ್ಲೂಕು ಯೋಜನಾಧಿಕಾರಿ ಪಿ.ಬಿ.ಸಂದೇಶ್ ರವರು ಸ್ವಾಗತಿಸಿ,ಹೇಮಂತ್ ಕುಮಾರ್ ವಂದಿಸಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    admin
    • Website

    Related Posts

    ಪ್ರತಿ ಗ್ರಾಮ ಪಂಚಾಯತಿಗೊಂದು ಆಟದ ಮೈದಾನ ಅವಶ್ಯ: ಕೊರಟಗೆರೆಯಲ್ಲಿ ಎಂ.ಎನ್.ಜೆ. ಮಂಜುನಾಥ್ ಆಗ್ರಹ

    October 17, 2026

    50 ಸಾವಿರ ಲಂಚ ಸ್ವೀಕಾರ: ಎಫ್‌ ಡಿಎ ಸಹಾಯಕ ಲೋಕಾ ಬಲೆಗೆ

    October 17, 2026

    ಸ್ಟ್ಯಾನ್‌ ಫೋರ್ಡ್– ಎಲ್ಸೆವಿಯರ್ ವಿಶ್ವದ ಟಾಪ್ 2% ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ಸರ್ಕಾರಿ ಕಾಲೇಜಿನ ಪ್ರೊ. ಡಾ. ಯೋಗೀಶ್ ಎನ್. ಸೇರ್ಪಡೆ

    October 16, 2026

    Comments are closed.

    Our Picks

    ಎಚ್ಚರ! ಗೂಗಲ್ ಪ್ಲೇ ಸ್ಟೋರ್‌ ನಲ್ಲೇ ನಕಲಿ ವಾಟ್ಸಾಪ್; 5 ಲಕ್ಷಕ್ಕೂ ಹೆಚ್ಚು ಡೌನ್‌ ಲೋಡ್, ನಿಮ್ಮ ಫೋನ್‌ ಗೂ ಅಪಾಯವೇ?

    October 18, 2026

    ಎಲ್ ನಿನೋ ಭೀತಿ: 10 ತಿಂಗಳು ನೀರಿನ ಬಿಕ್ಕಟ್ಟು? ರೈತರಿಗೆ ಇಲ್ಲಿದೆ ಮುಖ್ಯ ಸೂಚನೆ

    October 17, 2026

    ಜಗನ್ನಾಥನ ರಥದ ಚಕ್ರ ಮನೆಗೆ ತರಬೇಕಾ? ಖರೀದಿಸಲು ಎಷ್ಟು ಹಣ ಕೊಡಬೇಕು?

    October 14, 2026

    ನಿಮ್ಮ ಮೊಬೈಲ್ ರೀಚಾರ್ಜ್‌ನಿಂದ ಟೆಲಿಕಾಂ ಕಂಪನಿಗಳಿಗೆ ಎಷ್ಟು ಲಾಭ?

    October 14, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಎಚ್ಚರ! ಗೂಗಲ್ ಪ್ಲೇ ಸ್ಟೋರ್‌ ನಲ್ಲೇ ನಕಲಿ ವಾಟ್ಸಾಪ್; 5 ಲಕ್ಷಕ್ಕೂ ಹೆಚ್ಚು ಡೌನ್‌ ಲೋಡ್, ನಿಮ್ಮ ಫೋನ್‌ ಗೂ ಅಪಾಯವೇ?

    October 18, 2026

    ವಿಶ್ವದ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಹೆಸರಿನಲ್ಲಿ ನಕಲಿ ಆ್ಯಪ್‌ ವೊಂದು ಗೂಗಲ್ ಪ್ಲೇ ಸ್ಟೋರ್‌ ನಲ್ಲಿ ಕಾಣಿಸಿಕೊಂಡಿರುವುದು ಆತಂಕಕ್ಕೆ…

    ದೃಷ್ಟಿ ದೋಷ ನಿವಾರಣೆಗೆ ಉಪ್ಪು, ಒಣ ಮೆಣಸಿನಕಾಯಿ ಬಳಕೆ! ಈ ಸಂಪ್ರದಾಯದ ಹಿಂದಿನ ನಂಬಿಕೆ ಏನು?

    October 18, 2026

    ತುಮಕೂರು ದಸರಾದಲ್ಲಿ ಗಮನ ಸೆಳೆದ ಮಹಿಳಾ ಬೈಕ್ ರೈಡ್: ಬೈಕ್ ಚಲಾಯಿಸಿ ಗಮನ ಸೆಳೆದ ಮಹಿಳಾ ಅಧಿಕಾರಿಗಳು

    October 18, 2026

    ಆಕಾಶ ನೀಲಿಯಾಗಿ ಕಾಣುವುದೇಕೆ? ಆಕಾಶ ಕೆಂಪಾಗುವುದೇಕೆ?

    October 18, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.