ನಮ್ಮತುಮಕೂರು: ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ತುಮಕೂರು ತಾಲೂಕಿನ ಹೆಗ್ಗೆರೆಯಲ್ಲಿ ನಡೆದಿದೆ.
ಎರಡೂವರೆ ವರ್ಷದ ಹೆಣ್ಣು ಮಗು ಹಲೀಜಾ ಖಾನಂ ಬೀದಿನಾಯಿಗಳಿಂದ ದಾಳಿಗೊಳಗಾದ ಬಾಲಕಿಯಾಗಿದ್ದಾಳೆ. ಬಾಲಕಿಯ ಕಣ್ಣು ಹಾಗೂ ತಲೆಯ ಭಾಗಕ್ಕೆ ಬೀದಿನಾಯಿ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ.
ಬೀದಿನಾಯಿಯ ದಾಳಿಯಿಂದಾಗಿ ಬಾಲಕಿಯ ಎಡಗಣ್ಣಿಗೆ ಗಂಭೀರವಾಗಿ ಹಾನಿಯಾಗಿದೆ. ಬಾಲಕಿಗೆ ತುಮಕೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬೆಂಗಳೂರಿನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತುಮಕೂರು ಜಿಲ್ಲೆಯಲ್ಲಿ ಬೀದಿನಾಯಿಗಳ ಹಾವಳಿ ಮುಂದುವರಿದಿದ್ದು, ಸಂಬಂಧಪಟ್ಟ ಅಧಿಕಾರಿಗಳು ಬೀದಿನಾಯಿಗಳ ನಿಯಂತ್ರಣಕ್ಕೆ ವಿಫಲರಾಗಿದ್ದಾರೆ. ಬೀದಿನಾಯಿಗಳ ಹಾವಳಿಗೆ ಹೆಗ್ಗೆರೆ ಗ್ರಾಮಸ್ಥರು ರೋಸಿಹೋಗಿದ್ದಾರೆ.
ಮಕ್ಕಳು ಶಾಲೆಗೆ ಹೋಗುವಾಗ ಬರುವಾಗ ಹಾಗೂ ಮನೆ ಮುಂದೆ ಆಟವಾಡುವಾಗ ಬೀದಿ ನಾಯಿಗಳ ಹಿಂಡು ದಾಳಿ ಮಾಡುತ್ತಿದೆ. ಬೀದಿನಾಯಿಗಳ ಸೆರೆಹಿಡಿಯುವಂತೆ ಹಲವು ಬಾರಿ ಹೆಗ್ಗೆರೆ ಗ್ರಾಪಂ ಮನವಿ ಮಾಡಿದರೂ ಹೆಗ್ಗೆರೆ ಗ್ರಾಪಂ ಹಾಗೂ ಜಿಲ್ಲಾಡಳಿತ ತಲೆಕೆಡಿಸಿಕೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದಿ ನಾಯಿಗಳನ್ನ ಸೆರೆ ಹಿಡಿದು ಮಹಿಳೆಯರನ್ನು ಮಕ್ಕಳನ್ನ ರಕ್ಷಿಸಿ ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296