nammatumakuru

    Subscribe to Updates

    Get the latest creative news from FooBar about art, design and business.

    What's Hot

    ಶಿಕ್ಷಕಿ ಡಿ.ಆರ್.ಶಿಲ್ಪಶ್ರೀ ಅವರಿಗೆ ವೀರ ರಾಣಿ ಬೆಳವಾಡಿ ಮಲ್ಲಮ್ಮ ಪ್ರಶಸ್ತಿ: ನಿಸ್ವಾರ್ಥ ಸೇವೆಗೆ ವಿಜಯ ಸೇನೆಯಿಂದ ಗೌರವ

    April 30, 2026

    ಅಸಮರ್ಪಕ ವಿದ್ಯುತ್ ಸರಬರಾಜು: ರೈತರಿಂದ ಕುಣಿಗಲ್ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ

    April 30, 2026

    ತುಮಕೂರು: ಮೇ 1ರಂದು ಜಿಲ್ಲಾ ಮಟ್ಟದ ಬುದ್ಧ ಜಯಂತಿ ಆಚರಣೆ

    April 30, 2026
    Facebook Twitter Instagram
    ಟ್ರೆಂಡಿಂಗ್
    • ಶಿಕ್ಷಕಿ ಡಿ.ಆರ್.ಶಿಲ್ಪಶ್ರೀ ಅವರಿಗೆ ವೀರ ರಾಣಿ ಬೆಳವಾಡಿ ಮಲ್ಲಮ್ಮ ಪ್ರಶಸ್ತಿ: ನಿಸ್ವಾರ್ಥ ಸೇವೆಗೆ ವಿಜಯ ಸೇನೆಯಿಂದ ಗೌರವ
    • ಅಸಮರ್ಪಕ ವಿದ್ಯುತ್ ಸರಬರಾಜು: ರೈತರಿಂದ ಕುಣಿಗಲ್ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ
    • ತುಮಕೂರು: ಮೇ 1ರಂದು ಜಿಲ್ಲಾ ಮಟ್ಟದ ಬುದ್ಧ ಜಯಂತಿ ಆಚರಣೆ
    • ಮುಂಗಾರು ಹಂಗಾಮಿನ ಋತುಮಾನ ಪರಿಶೀಲಿಸಿ, ಮುನ್ನೆಚ್ಚರಿಕೆ ಕ್ರಮವಹಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ
    • ತುಮಕೂರು: ಕ್ಷುಲ್ಲಕ ಕಾರಣಕ್ಕೆ ಜಗಳ; ತಮ್ಮನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಅಣ್ಣ!
    • ಬಿರುಗಾಳಿಗೆ ಅಲೆಮಾರಿಗಳ ಟೆಂಟ್ ಛಿದ್ರ: ಸುರಕ್ಷಿತ ಸ್ಥಳಕ್ಕೆ ಕುಟುಂಬಗಳ ಸ್ಥಳಾಂತರ
    • ಅಪ್ರಾಪ್ತ ಗರ್ಭಿಣಿಯರಿಗೆ ಅಕ್ರಮ ಸ್ಕ್ಯಾನಿಂಗ್; ಮೂವರು ವೈದ್ಯರ ಬಂಧನ, 12 ಎಫ್‌ ಐಆರ್ ದಾಖಲು
    • ತುಮಕೂರು: ರಸ್ತೆ ದಾಟುವಾಗ ಕಾರು ಡಿಕ್ಕಿ: ಚಿಕಿತ್ಸೆ ಫಲಕಾರಿಯಾಗದೆ ಗಾರೆ ಕಾರ್ಮಿಕ ಸಾವು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವಿದ್ಯಾರ್ಥಿಗಳು ಬೆಳೆದು ಬಂದ ದಾರಿ ಮರೆಯಬಾರದು: ಡಿಸಿಎಂ ಡಿ.ಕೆ. ಶಿವಕುಮಾರ್
    ರಾಜ್ಯ ಸುದ್ದಿ October 24, 2023

    ವಿದ್ಯಾರ್ಥಿಗಳು ಬೆಳೆದು ಬಂದ ದಾರಿ ಮರೆಯಬಾರದು: ಡಿಸಿಎಂ ಡಿ.ಕೆ. ಶಿವಕುಮಾರ್

    By adminOctober 24, 2023No Comments3 Mins Read
    dk shivakumar

    ಬೆಂಗಳೂರು: ವಿದ್ಯಾರ್ಥಿಗಳು ಎಂದಿಗೂ ತಾವು ಬೆಳೆದು ಬಂದ ಹಾಗೂ ಬೆಳೆಯುವ ದಾರಿ ಮರೆಯಬಾರದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಿವಿಮಾತು ಹೇಳಿದರು.

    ನಗರದ ಯಲಹಂಕದಲ್ಲಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಆವರಣದಲ್ಲಿ ಡಾ. ರಾಮದಾಸ್ ಎಂ ಪೈ ಸಮ್ಮೇಳನ ಸಭಾಂಗಣ ಹಾಗೂ ಫುಡ್ ಕೋರ್ಟ್ ಉದ್ಘಾಟಿಸಿ ಮಾತನಾಡಿದ ಅವರು ಹೇಳಿದ್ದಿಷ್ಟು , “ಜೀವನದಲ್ಲಿ ಶಿಸ್ತು, ಸಂಯಮ, ಶ್ರದ್ಧೆ ಮೈಗೂಡಿಸಿಕೊಂಡರೆ ಯಾವುದೇ ಕೆಲಸಗಳು ಕಠಿಣವಲ್ಲ.‌ ಸುಲಭವಾಗಿ ಗುರಿ ಮುಟ್ಟಬಹುದು. ಕೇವಲ ಧನಾತ್ಮಕ ಚಿಂತನೆಗಳ ಬಗ್ಗೆ ಯೋಚಿಸಬೇಕೆ ಹೊರತು, ನಕಾರಾತ್ಮಕ ಚಿಂತನೆಗಳ ಕುರಿತು ಒಂದು ಕ್ಷಣವೂ ಯೋಚಿಸಬಾರದು.


    Provided by
    Provided by

    ಮಹಾತ್ಮ ಗಾಂಧಿ ಅವರು ಹೇಳುತ್ತಾರೆ, “ನೀವು ನಿಮ್ಮನ್ನು ನಿಯಂತ್ರಣ ಮಾಡಿಕೊಳ್ಳಲು ನಿಮ್ಮ ಮೆದುಳನ್ನು ಬಳಸಿ, ಇತರರನ್ನು ನಿಯಂತ್ರಿಸಲು ಹೃದಯವನ್ನು ಬಳಸಿ” ಎಂದು. ಯಾವುದೇ ಕಾರಣಕ್ಕೂ ಇತರೇ ವಿಚಾರಗಳಿಂದ ಕಲುಷಿತರಾಗಬೇಡಿ, ಸ್ವಂತ ಆಲೋಚನೆ ಬೆಳೆಸಿಕೊಳ್ಳಿ. ಈ ದೇಶದಲ್ಲಿ ಹುಟ್ಟಿರುವುದು ನಮ್ಮೆಲ್ಲರ ಪುಣ್ಯ.

    ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನ ಸಂಪದಂ. ಶತ್ರುಬುದ್ಧಿವಿನಾಶಾಯ ದೀಪಜ್ಯೋತಿ ನಮೋಸ್ತುತೇ ಎನ್ನುವ ಶ್ಲೋಕವನ್ನು ಹೇಳಿ ದೀಪ ಬೆಳಗಿಸುತ್ತೇವೆ.

    ಇಂದಿನ ವಿದ್ಯಾರ್ಥಿಗಳು ಹುಟ್ಟುಹಬ್ಬ ಆಚರಣೆ ವೇಳೆ,  ದೀಪವನ್ನು ಆರಿಸುವ ಮೂಲಕ ಸಂಭ್ರಮಿಸುತ್ತಿದ್ದಾರೆ. ನಾವು ದೀಪ ಬೆಳಗುವವರಾಗಬೇಕೆ ಹೊರತು, ದೀಪ ಆರಿಸುವವರಾಗಬಾರದು.

    ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಸಹಕಾರ ಸಚಿವನಾಗಿ ಕೆಲಸ ಮಾಡುತ್ತಿದ್ದೆ. ಆ ವೇಳೆ ಅಂತರರಾಷ್ಟ್ರೀಯ ಮಟ್ಟದ ಸಹಕಾರಿ ಸಮ್ಮೇಳನ ಆಯೋಜಿಸಲಾಗಿತ್ತು. ನಾನು ಈ ಸಭೆಗೆ ಆಹ್ವಾನಿತನಾಗಿ ಹೋಗಿದ್ದ ನಾನು, ಸಮ್ಮೇಳದ ಪ್ರಮುಖರೊಬ್ಬರಿಗೆ ನನ್ನ ಪರಿಚಯ ಮಾಡಿಕೊಂಡು ಮಾತನಾಡುತ್ತಿದ್ದೆ, ಅವರಿಗೆ ನನ್ನ 39 ನೇ ಹುಟ್ಟುಹಬ್ಬ ಎಂದು ಗೊತ್ತಾಯಿತು. ಕೂಡಲೇ ಹುಟ್ಟುಹಬ್ಬ ಆಚರಿಸಲೇ ಬೇಕು ಎಂದು, ನನಗೆ ಗೊತ್ತಾಗದಂತೆ ಆಯೋಜನೆ ಮಾಡಿದರು.

    ಕೇಕ್ ಆರ್ಡರ್ ಮಾಡಿ, ಕ್ಯಾಂಡಲ್ ಇಟ್ಟು, ನನ್ನ ಕರೆದರು, ನಾನು ಕ್ಯಾಂಡಲ್‌ಅನ್ನು ಆರಿಸಬೇಕು ಎಂದು ಹೋಗುವಷ್ಟರಲ್ಲಿ, ವ್ಯಕ್ತಿಯೊಬ್ಬ  ‘ಇದು ನಮ್ಮ ಸಂಸ್ಕೃತಿಯಲ್ಲ’ ಎಂದು ಜೋರಾಗಿ ಕೂಗಿಕೊಂಡನು.  ಅಂದು ನನ್ನ ಅರಿವಿಗೆ ಬಂದಿತು, ನಮ್ಮದು ದೀಪವನ್ನು ಹಚ್ಚುವ ಸಂಸ್ಕೃತಿ, ಆರಿಸುವ ಸಂಸ್ಕೃತಿಯಲ್ಲ ಎಂದು.

    ಮಣಿಪಾಲ್ ಸಮೂಹ ಸಂಸ್ಥೆ ಇಡೀ ರಾಜ್ಯದಲ್ಲೇ ಅತ್ಯಂತ ಪ್ರಮುಖವಾದ ಶಿಕ್ಷಣ ಸಂಸ್ಥೆ. ನಾನು ರಾಜ್ಯದ ಉಪಮುಖ್ಯಮಂತ್ರಿಯಾಗಿ ಈ ಮಾತುಗಳನ್ನು ಹೇಳುತ್ತಿಲ್ಲ,‌ ಶಿಕ್ಷಣ ಪ್ರೇಮಿಯಾಗಿ ಹೇಳುತ್ತಿದ್ದೇನೆ.

    ಸಹಕಾರಿ ಕ್ಷೇತ್ರದಿಂದ ಬಂದು ನೊಬಲ್ ಪ್ರಶಸ್ತಿ ಪುರಸ್ಕೃತರಾದ ಮೊಹಮದ್ ಯೂನಸ್ ಅವರು ಒಂದು ಮಾತು ಹೇಳುತ್ತಾರೆ “ನೀವು ಹಸಿದವನಿಗೆ  ಒಂದು ದಿನ ಮಾತ್ರ ಮೀನು ನೀಡಬಹುದು, ಆದರೆ ಮೀನು ಹಿಡಿಯುವುದು ಕಲಿಸಿದರೆ ಜೀವನ ಪೂರ್ತಿ ಹಸಿವು ನೀಗಿಸದಂತೆ” ಈ ರೀತಿ ಮಣಿಪಾಲ್‌ ಸಂಸ್ಥೆ ಕೆಲಸ‌ ಮಾಡುತ್ತಿದೆ.

    “By Birth I am an Agriculturist By Profession I am a Businessman By Choice I am an Educationist By Passion I am a Politician, ಆದರೆ ಈ ಮಣಿಪಾಲ್ ಸಂಸ್ಥೆಗೆ ನಾನು ಒಬ್ಬ ಶಿಕ್ಷಣಪ್ರೇಮಿಯಾಗಿ ವಿದ್ಯಾರ್ಥಿಗಳನ್ನು ನೋಡಲು ಬಂದಿದ್ದೇನೆ‌.

    ರಾಮದಾಸ್ ಪೈ ಅವರು ಈ ರಾಜ್ಯಕಂಡ ಶ್ರೇಷ್ಠ ಶಿಕ್ಷಣ ತಜ್ಞರು. ನನಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವಿದೆ, ಇಡೀ ಮಣಿಪಾಲ್ ಸಮೂಹ ಸಂಸ್ಥೆಗಳು ಈ ದೇಶದ,  ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲೇ ಪ್ರಮುಖ ಹಾಗೂ ಆಕರ್ಷಣೀಯ ಸಂಸ್ಥೆ, ಆದ ಕಾರಣ ಅವರಿಗೆ ಅಭಿನಂದಿಸುತ್ತೇನೆ.

    55 ವರ್ಷಗಳ ಹಳೆಯದಾದ ಮಣಿಪಾಲ್ ಕ್ಯಾಂಪಸ್ ಅತ್ಯಂತ ಸುಂದರವಾದ ವಾತಾವರಣ ಇಲ್ಲಿದೆ. ಇದನ್ನು ನೋಡಲು ಸಂತೋಷವಾಗುತ್ತದೆ.

    ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನರು ಎಲ್ಲಾ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ಶಿಕ್ಷಣ, ವ್ಯಾಪಾರ, ಹೋಟೆಲ್ ಉದ್ಯಮ, ವೈದ್ಯಕೀಯ ಸೇರಿದಂತೆ ಪ್ರಮುಖ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಈಗಲೂ ಎರಡೂ ಜಿಲ್ಲೆಗಳು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆದ ಜಿಲ್ಲೆಗಳೇ, ಆದರೆ ಕೆಲವು ವರ್ಷಗಳಿಂದ ರಾಜಕೀಯವಾಗಿ ಸಾಕಷ್ಟು ಸ್ಥಿತ್ಯಂತರಗಳು ನಡೆದು ಏರುಪೇರಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

    ಇಡೀ ಪ್ರಪಂಚವೇ ಭಾರತದ ಕಡೆ ತಿರುಗಿ ನೋಡುತ್ತಿದೆ. ಪ್ರತಿ ಕ್ಷೇತ್ರದಲ್ಲಿ ಭಾರತೀಯರು ಗಣನೀಯ ಸಾಧನೆ‌ ಮಾಡಿದ್ದಾರೆ, ಮಾಡುತ್ತಿದ್ದಾರೆ. ಅಷ್ಟೊಂದು ಜ್ಞಾನ ಸಂಪತ್ತು ನಮ್ಮ ದೇಶದ ಜನರಲ್ಲಿದೆ.

    ಇಪ್ಪತ್ತು ವರ್ಷಗಳ ಹಿಂದೆ ಪ್ರಧಾನಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಕರ್ನಾಟಕಕ್ಕೆ ಬಂದಾಗ ಅವರಿಗೆ ವಿಧಾನಸೌಧಕ್ಕೆ ಆಹ್ವಾನ ನೀಡಿದ್ದೆವು. ನಾನಾಗ ನಗರಾಭಿವೃದ್ಧಿ ಸಚಿವನಾಗಿದ್ದೆ. ಈ ವೇಳೆ ಅವರ ಜೊತೆ ಮಾತನಾಡುತ್ತಿದ್ದಾಗ, “ಕರ್ನಾಟಕದ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಉನ್ನತ ಮಟ್ಟದ ಜ್ಞಾನ ನೀಡುತ್ತಿವೆ, ಏಕೆಂದರೆ ಯಾವುದೇ ದೇಶಕ್ಕೆ ಹೋದರು ಒಂದಲ್ಲ ಒಂದು ಸಂಸ್ಥೆಗಳಲ್ಲಿ ಭಾರತೀಯ ಅಥವಾ ಕನ್ನಡಿಗ ಉನ್ನತ ಸ್ಥಾನ ಅಲಂಕರಿಸಿರುತ್ತಾರೆ” ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. ಇದು ನನ್ನ ಜೀವನದಲ್ಲಿ ಮರೆಯಲಾರದ ಘಟನೆ.

    ಐಟಿ ಕ್ಷೇತ್ರದಲ್ಲಿ ದಕ್ಷಿಣ ಭಾರತೀಯರು ಹೆಚ್ಚಿಗೆ ಕೆಲಸ ಮಾಡುತ್ತಿದ್ದಾರೆ. ಅದರಲ್ಲು ಕನ್ನಡಿಗರು ಈ ಕ್ಷೇತ್ರವನ್ನು ಆವರಿಸಿಕೊಂಡು ಬಿಟ್ಟಿದ್ದಾರೆ, ಇದು ನಮ್ಮ ಶಕ್ತಿ. ಐದು ಜನರಲ್ಲಿ ಮೂರು ಜನ ಕನ್ನಡಿಗರೇ ಈ ಕ್ಷೇತ್ರದಲ್ಲೇ ದುಡಿಯುತ್ತಿದ್ದಾರೆ.

    ಇಡೀ ದೇಶವನ್ನು ಕರ್ನಾಟಕದ ಮೂಲಕ ನೋಡಲಾಗುತ್ತಿದೆ. ಕರ್ನಾಟಕದಲ್ಲಿ ಶಿಕ್ಷಣ ಪಡೆಯುತ್ತಿರುವ ನೀವೆ ಧನ್ಯರು. ಹೊರ ರಾಜ್ಯಗಳ ಅನೇಕ ವಿದ್ಯಾರ್ಥಿಗಳು ಈ ಮಾತನ್ನು ಗಮನದಲ್ಲಿ ಇಟ್ಟುಕೊಂಡು ಬೆಳೆಯಬೇಕು.

    admin
    • Website

    Related Posts

    ಅಪ್ರಾಪ್ತ ಗರ್ಭಿಣಿಯರಿಗೆ ಅಕ್ರಮ ಸ್ಕ್ಯಾನಿಂಗ್; ಮೂವರು ವೈದ್ಯರ ಬಂಧನ, 12 ಎಫ್‌ ಐಆರ್ ದಾಖಲು

    April 29, 2026

    ಕುಡಿಯುವ ನೀರು: ಪ್ರತಿ ಕ್ಷೇತ್ರಕ್ಕೆ 10 ಕೋಟಿ ರೂ. ನೀಡಲು ಆರ್. ಅಶೋಕ ಆಗ್ರಹ

    April 29, 2026

    ಅಭಿಮಾನಿಗಳಿಗೆ ಶಾಕ್ ನೀಡಿದ ರಾಕಿಂಗ್ ಸ್ಟಾರ್: ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಿಕೆ!

    April 29, 2026

    Comments are closed.

    Our Picks

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಶಿಕ್ಷಕಿ ಡಿ.ಆರ್.ಶಿಲ್ಪಶ್ರೀ ಅವರಿಗೆ ವೀರ ರಾಣಿ ಬೆಳವಾಡಿ ಮಲ್ಲಮ್ಮ ಪ್ರಶಸ್ತಿ: ನಿಸ್ವಾರ್ಥ ಸೇವೆಗೆ ವಿಜಯ ಸೇನೆಯಿಂದ ಗೌರವ

    April 30, 2026

    ತುಮಕೂರು: ನಗರದ ಕನ್ನಡ ಭವನದಲ್ಲಿ ಕನ್ನಡ ಪರ ಸಂಘಟನೆಯಾದ ವಿಜಯ ಸೇನೆ ವತಿಯಿಂದ ಆಯೋಜಿಸಲಾಗಿದ್ದ ವೀರ ರಾಣಿ ಬೆಳವಾಡಿ ಮಲ್ಲಮ್ಮ…

    ಅಸಮರ್ಪಕ ವಿದ್ಯುತ್ ಸರಬರಾಜು: ರೈತರಿಂದ ಕುಣಿಗಲ್ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ

    April 30, 2026

    ತುಮಕೂರು: ಮೇ 1ರಂದು ಜಿಲ್ಲಾ ಮಟ್ಟದ ಬುದ್ಧ ಜಯಂತಿ ಆಚರಣೆ

    April 30, 2026

    ಮುಂಗಾರು ಹಂಗಾಮಿನ ಋತುಮಾನ ಪರಿಶೀಲಿಸಿ, ಮುನ್ನೆಚ್ಚರಿಕೆ ಕ್ರಮವಹಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

    April 30, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.