ಹೆಚ್.ಡಿ.ಕೋಟೆ: ‘ಪೋಷಕರು ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವುದು ಬಿಟ್ಟರೇ ಬೇರೆ ಯಾವ ಸಾಧನೆಯತ್ತಲೂ ಗಮನಹರಿಸುವುದಿಲ್ಲ, ಆದ್ದರಿಂದ ಪೋಷಕರ ಶ್ರಮಕ್ಕೆ ಕುಂದುಬಾರದಂತೆ ವಿದ್ಯಾರ್ಥಿಗಳು ಶ್ರಮ ವಹಿಸಬೇಕು ಎಂದು ಹುಣಸೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮೇಗೌಡ ತಿಳಿಸಿದರು.
ತಾಲ್ಲೂಕಿನ ತುಂಬಸೋಗೆ ಗ್ರಾಮದಲ್ಲಿನ ಎಂ.ಎಂ.ಕೆ. ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಂಜುಂಡಪ್ಪ ವರದಿ ಅನ್ವಯ ಎಚ್.ಡಿ.ಕೋಟೆ ತಾಲ್ಲೂಕು ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಇತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜಿನ ಫಲಿತಾಂಶವನ್ನು ಗಮನಿಸಿದಾಗ ಆ ಹಣೆಪಟ್ಟಿ ದೂರವಾಗುತ್ತಾ ಸಾಗಿದೆ’ ಎಂದರು.
‘ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳನ್ನು ಆರಂಭಿಸುವವರು ಕೇವಲ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳನ್ನು ತೆರೆಯಲಾಗುತ್ತಿದೆ, ಆದರೆ ಎಂ.ಎಂ.ಕೆ. ಪದವಿ ಕಾಲೇಜಿನಲ್ಲಿ ಕಲಾ ವಿಭಾಗವನ್ನು ತೆರೆದಿರುವುದು ಸ್ವಾಗತಾರ್ಹ’ ಎಂದರು.
ಎಂ.ಎಂ.ಕೆ. ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಮಾತನಾಡಿ, ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಮಾದರಿಯಾಗುವ ದೃಷ್ಟಿಯಿಂದ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಅವರಿಗೆ ಅಭಿನಂಧಿಸುವ ಕೆಲಸ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ಕಾರ್ಯ ಮುಂದುವರಿಯಲಿದೆ, ಮುಂದಿನ ದಿನಗಳಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಸಹ ಇದೇ ರೀತಿಯ ಸಾಧನೆಯ ಹಾದಿಯಲ್ಲಿ ನಡೆಯಲಿ’ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಎಚ್.ಡಿ.ಕೋಟೆ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿಯನ್ನು ಹೊಂದಿತ್ತು. ಅದನ್ನು ಹೋಗಲಾಡಿಸುವ ದೃಷ್ಠಿಯಿಂದ ನಮ್ಮ ಕಾಲೇಜನ್ನು ತೆರೆಯಲಾಗಿತ್ತು, ಅದರಂತೆ ನಮ್ಮ ಕಾಲೇಜಿನಲ್ಲಿ ಕಳೆದ ಮೂರು ವರ್ಷಗಳಿಂದ ಶೇ.100 ಫಲಿತಾಂಶ ದೊರೆಯುತ್ತಿದೆ, ಮುಂದಿನ ದಿನಗಳಲ್ಲೂ ಸಹ ಉತ್ತಮ ಫಲಿತಾಂಶ ದೊರೆಯುವ ಆಶಾಭಾವನೆ ಇದೆ’ ಎಂದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ 11 ಚಿನ್ನದ ಪದಕಗಳನ್ನು ಪಡೆದ ಕಾವ್ಯ ಮತ್ತು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪಥದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಕನ್ನಿಕಾರವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ವೈದ್ಯನಾಥ್, ಕೃಷ್ಣೇಗೌಡ, ಸಕಲೇಶ್, ಅಶೋಕ್, ಶ್ರೀಧರ್, ಭೋಧಕ ಸಿಬ್ಬಂದಿಗಳಾದ ವಿರೂಪಾಕ್ಷ, ಜಾನ್, ಸಿದ್ದರಾಜು, ಸಿದ್ಧಾರ್ಥ್, ಮೋಹನ್, ಮನೋಜ್, ಪ್ರಸನ್ನ, ಮಾದೇವಿ, ಸುಪ್ರೀಯಾ, ಮುಸ್ಕಾನ್, ಶೃತಿ, ನೀಲಮ್ಮ, ಭಾಗ್ಯ, ಶಾಂತರಾಜು, ತನುಜಾ ಇದ್ದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4