ತುಮಕೂರು: ಮಧುಗಿರಿ ತಾಲೂಕು ತೋಟಗಾರಿಕೆ ಇಲಾಖೆ ವತಿಯಿಂದ 2025–26ನೇ ಸಾಲಿನಲ್ಲಿ ಅನುಷ್ಟಾನಗೊಳಿಸಲಾಗುತ್ತಿರುವ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗಳಡಿ ರೈತರಿಗೆ ಸಹಾಯಧನ ಸೌಲಭ್ಯ ಕಲ್ಪಿಸಲು ಅರ್ಹ ತೋಟಗಾರಿಕೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ತೋಟಗಾರಿಕೆ ರೈತರಿಗೆ ಹಾಗೂ ಉದ್ದಿಮೆದಾರರಿಗೆ ನೆರವು ನೀಡಲಾಗುವುದು. ಈ ಯೋಜನೆಯ ವಿವಿಧ ಕಾರ್ಯಕ್ರಮಗಳಡಿ ಬಾಳೆ, ಮಾವು, ಪಪ್ಪಾಯ ಹಾಗೂ ದಾಳಿಂಬೆ ಹಣ್ಣಿನ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ; ಡ್ರ‍್ಯಾಗನ್, ಬೆಣ್ಣೆಹಣ್ಣು, ಹಲಸು, ಹುಣಸೆ ಹಣ್ಣಿನಂತಹ ಅಪ್ರಧಾನ ಹಣ್ಣಿನ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ; ಸುಗಂದರಾಜ, ಚೆಂಡುಹೂ, ಸೇವಂತಿಗೆ ಹಾಗೂ ಇತರೆ ಬಿಡಿ ಹೂವಿನ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ; ಹೈಬ್ರಿಡ್ ತರಕಾರಿ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ; ಗೋಡಂಬಿ, ಕೋಕೊ, ಕಾಳುಮೆಣಸು ಬೆಳೆಗಳ ಹೊಸ ಪ್ರದೇಶ ವಿಸ್ತರಣೆ; ಅಣಬೆ ಉತ್ಪಾದನಾ ಘಟಕ, ಹಸಿರು ಮನೆ ಹಾಗೂ ವೈಯಕ್ತಿಕ ನೀರು ಸಂಗ್ರಹಣಾ ಘಟಕಗಳ ನಿರ್ಮಾಣ; ಸಂರಕ್ಷಿತ ಬೇಸಾಯ ಕಾರ್ಯಕ್ರಮದಡಿ ಪ್ಲಾಸ್ಟಿಕ್ ಹೊದಿಕೆ, ಪಕ್ಷಿ ನಿರೋಧಕ ಬಲೆ ಅಳವಡಿಕೆ, ಸಮಗ್ರ ಕೀಟ, ರೋಗ ಮತ್ತು ಪೋಷಕಾಂಶಗಳ ನಿರ್ವಹಣೆ; ಕೋಯ್ಲೋತ್ತರ ನಿರ್ವಹಣೆ; ಪಾರಂಗೇಟ್; ಪ್ಯಾಕ್‌ಹೌಸ್; ಪ್ರಾಥಮಿಕ ಸಂಸ್ಕರಣಾ ಘಟಕ; ಎರೆಹುಳುಗೊಬ್ಬರ ಉತ್ಪಾದನಾ ಘಟಕ; ಕಡಿಮೆ ವೆಚ್ಚದ ಈರುಳ್ಳಿ ಶೇಖರಣಾ ಘಟಕ; ಸ್ಟ್ಯಾಟಿಕ್ ಮೊಬೈಲ್ ವೆಂಡಿಂಗ್ ಕಾರ್ಟ್ ಖರೀದಿಸಲು ನೆರವು ನೀಡಲಾಗುವುದು.
ಹಳೆ ತೋಟಗಳ ಪುನಃಶ್ಚೇತನ, ಜೇನು ಸಾಕಾಣಿಕೆ, ಮಿನಿಟ್ರಾಕ್ಟರ್, ಪವರ್ ಟಿಲ್ಲರ್, ಟ್ರಾಕ್ಟರ್ ಆಪರೇಟೆಡ್ ಸ್ಪೈಯರ್ ಗಳಿಗೆ ಸಹಾಯಧನ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಕಾರ್ಯಕ್ರಮಗಳನ್ನಾಧರಿಸಿ ಶೇ.25 ರಿಂದ 50ರಷ್ಟು ಸಹಾಯಧನ ನೀಡಲಾಗುವುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW