nammatumakuru

    Subscribe to Updates

    Get the latest creative news from FooBar about art, design and business.

    What's Hot

    ರೇಷ್ಮೆ ಸೀರೆಗೆ ಎಣ್ಣೆ, ಮೇಣದ ಕಲೆ ಬಿದ್ದರೆ ಚಿಂತೆ ಬೇಡ; ಈ ಟಿಪ್ಸ್ ಅನುಸರಿಸಿ

    November 4, 2026

    ನಾಯಿಗಳಲ್ಲ, ರೋಬೋಟ್‌ ಗಳಿಗೆ ವಾಕಿಂಗ್ ಮಾಡಿಸಿದರೆ ದುಡ್ಡು! AI ತಂತ್ರಜ್ಞಾನಕ್ಕೆ ಹೊಸ ಪ್ರಯೋಗ

    November 4, 2026

    ವಿಮಾನದಲ್ಲೂ ಇರುತ್ತಾ ಹಾರ್ನ್? ಆಕಾಶದಲ್ಲಿ ಯಾರಿಗೆ ಹಾರ್ನ್? | ಈ ಅಚ್ಚರಿಯ ಸಂಗತಿ ನಿಮಗೆ ಗೊತ್ತಾ?

    November 4, 2026
    Facebook Twitter Instagram
    ಟ್ರೆಂಡಿಂಗ್
    • ರೇಷ್ಮೆ ಸೀರೆಗೆ ಎಣ್ಣೆ, ಮೇಣದ ಕಲೆ ಬಿದ್ದರೆ ಚಿಂತೆ ಬೇಡ; ಈ ಟಿಪ್ಸ್ ಅನುಸರಿಸಿ
    • ನಾಯಿಗಳಲ್ಲ, ರೋಬೋಟ್‌ ಗಳಿಗೆ ವಾಕಿಂಗ್ ಮಾಡಿಸಿದರೆ ದುಡ್ಡು! AI ತಂತ್ರಜ್ಞಾನಕ್ಕೆ ಹೊಸ ಪ್ರಯೋಗ
    • ವಿಮಾನದಲ್ಲೂ ಇರುತ್ತಾ ಹಾರ್ನ್? ಆಕಾಶದಲ್ಲಿ ಯಾರಿಗೆ ಹಾರ್ನ್? | ಈ ಅಚ್ಚರಿಯ ಸಂಗತಿ ನಿಮಗೆ ಗೊತ್ತಾ?
    • ಫ್ರಿಜ್‌ ನಿಂದ ತೆಗೆದ ತಕ್ಷಣ ಮೊಸರು ತಿನ್ನುತ್ತೀರಾ? ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತದೆ?
    • ನ.7ರಂದು ಹೊಳವನಹಳ್ಳಿ ಹೋಬಳಿಯಲ್ಲಿ ಪ್ರಜಾಸೇವೆ ಆಂದೋಲನ ಸಭೆ
    • ತಿಪಟೂರು ರೋಟರಿ ಕ್ಲಬ್‌ ನಿಂದ ಅದ್ದೂರಿ 71ನೇ ಕನ್ನಡ ರಾಜ್ಯೋತ್ಸವ ಆಚರಣೆ
    • ಔರಾದ್ ಬ್ಲಾಕ್ ಕಾಂಗ್ರೆಸ್ ಪ.ಜಾ. ವಿಭಾಗದ ಕಾರ್ಯದರ್ಶಿಯಾಗಿ ಗೌತಮ್ ಮೇತ್ರೆ ನೇಮಕ
    • ಭಾಲ್ಕಿ: ವಕೀಲರ ಹಿತರಕ್ಷಣಾ ಕಾಯ್ದೆ ತಕ್ಷಣ ಜಾರಿಗೆ ತರಲು ಆಗ್ರಹ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜ.15ರಂದು ಸುವರ್ಣ ವಿಧಾನಸೌಧ ಆವರಣದಲ್ಲಿ ಯೋಗಥಾನ್
    ಜಿಲ್ಲಾ ಸುದ್ದಿ January 7, 2023

    ಜ.15ರಂದು ಸುವರ್ಣ ವಿಧಾನಸೌಧ ಆವರಣದಲ್ಲಿ ಯೋಗಥಾನ್

    By adminJanuary 7, 2023No Comments2 Mins Read
    yogathan

    ಬೆಳಗಾವಿ : ಇಲ್ಲಿನ ಸುವರ್ಣ ವಿಧಾನಸೌಧದ ಆವರಣದಲ್ಲಿ ಜನವರಿ 15 ರಂದು ಬೃಹತ್ ಯೋಗಥಾನ್-2023 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

    ಯೋಗಥಾನ್-2023 ಪೂರ್ವಸಿದ್ಧತೆ ಕುರಿತು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಜ.6) ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಈ ಮುಂಚೆ 80 ಸಾವಿರ ಜನರನ್ನು ಸೇರಿಸುವ ಗುರಿ ಹೊಂದಲಾಗಿತ್ತು. ಇದೀಗ ಈ ಸಂಖ್ಯೆಯನ್ನು 20 ಸಾವಿರಕ್ಕೆ ಮಿತಿಗೊಳಿಸಿ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.ಜ.15 ರಂದು ಬೆಳಿಗ್ಗೆ 6 ಗಂಟೆಯಿಂದ ಯೋಗಪಟುಗಳ ನೋಂದಣಿ ಯೊಂದಿಗೆ ಕಾರ್ಯಕ್ರಮ ಅರಂಭಗೊಳ್ಳಲಿದೆ.

    ಯೋಗಥಾನ್ ಏರ್ಪಡಿಸಲು ಸುವರ್ಣ ವಿಧಾನಸೌಧದ ಆವರಣದಲ್ಲಿ ವೇದಿಕೆ, ಮ್ಯಾಟಿಂಗ್, ಧ್ವನಿ ವ್ಯವಸ್ಥೆ ಮತ್ತಿತರ ಅಗತ್ಯ ವ್ಯವಸ್ಥೆ ಕುರಿತು ಚರ್ಚೆ ನಡೆಸಿದ ಅವರು, ಲಭ್ಯವಿರುವ ಅನುದಾನದಲ್ಲಿ ಅತ್ಯುತ್ತಮ ರೀತಿಯಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದರು.

    ಯೋಗಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸುವ 20 ಸಾವಿರ ಯೋಗಪಟುಗಳಿಗೆ ಪ್ರತಿ 50 ಜನಕ್ಕೆ ಒಬ್ಬರಂತೆ ಒಟ್ಟು 400 ಸ್ಟಿವರ್ಡ್ ಗಳನ್ನು, ಎನ್.ಎಸ್.ಎಸ್., ಎನ್.ಸಿ.ಸಿ. ಸ್ಕೌಟ್ಸ್-ಗೈಡ್ಸ್, ಭಾರತ ಸೇವಾದಳ ಮತ್ತು ಇತರೆ ಯೋಗ ಸಂಸ್ಥೆಗಳಿಂದ ನೇಮಿಸಬೇಕು ಎಂದು ತಿಳಿಸಿದರು.

    ಸುವರ್ಣ ವಿಧಾನಸೌಧದ ಆವರಣದಲ್ಲಿ ಅಂದಾಜು 20 ಸಾವಿರ ಯೋಗಪಟುಗಳು ಸೇರಲಿದ್ದಾರೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಕುಡಿಯುವ ನೀರು, ಸ್ವಚ್ಛತೆ ಮತ್ತಿತರ ಮೂಲಸೌಕರ್ಯ ಕಲ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಜಿನೇಶ್ವರ ಪಡನಾಡ ಅವರು, ಕಾರ್ಯಕ್ರಮದ ರೂಪುರೇಷೆ ಕುರಿತು ಮಾಹಿತಿಯನ್ನು ನೀಡಿದರು.

    ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜ ನಾಲತವಾಡ, ಡಿಡಿಪಿಯು ಎಂ.ಎಂ.ಕಾಂಬಳೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಲಕ್ಷ್ಮಣ ಬಬಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶ್ರೀಕಾಂತ ಸುಣಧೋಳಿ, ಜಿಲ್ಲಾ ಯೋಗಾ ಸಂಯೋಜಕಿ ಆರತಿ ಸಂಕೇಶ್ವರಿ, ಕೆ.ಎಲ್.ಇ ಸಂಸ್ಥೆಯ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ.ಸಂದೀಪ ಸಗರೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಔರಾದ್ ಬ್ಲಾಕ್ ಕಾಂಗ್ರೆಸ್ ಪ.ಜಾ. ವಿಭಾಗದ ಕಾರ್ಯದರ್ಶಿಯಾಗಿ ಗೌತಮ್ ಮೇತ್ರೆ ನೇಮಕ

    November 4, 2026

    ಭಾಲ್ಕಿ: ವಕೀಲರ ಹಿತರಕ್ಷಣಾ ಕಾಯ್ದೆ ತಕ್ಷಣ ಜಾರಿಗೆ ತರಲು ಆಗ್ರಹ

    November 4, 2026

    ಔರಾದ್‌ | ಕುಡಿಯುವ ನೀರು ಪೂರೈಕೆಯಲ್ಲಿ ಲೋಪವಾದರೆ ಕ್ರಮ: ಶಾಸಕ ಪ್ರಭು ಚವ್ಹಾಣ

    November 3, 2026

    Comments are closed.

    Our Picks

    ವೈವಿಧ್ಯತೆಯಲ್ಲಿ ಏಕತೆ ಸಾರುವ ದಿನವಿದು; ಅಕ್ಟೋಬರ್ 31ರಂದು ಏಕೆ ರಾಷ್ಟ್ರೀಯ ಏಕತಾ ದಿನ ಆಚರಿಸುತ್ತಾರೆ?

    October 31, 2026

    ವಂಚನೆಗೆ ಹಣ ಕಳೆದುಕೊಂಡವರಿಗೆ ಬ್ಯಾಂಕ್‌ ಗಳೇ ಪರಿಹಾರ ನೀಡಬೇಕಾ? ಸುಪ್ರೀಂ ಕೋರ್ಟ್ ಮಹತ್ವದ ಪ್ರಸ್ತಾಪ ಇಲ್ಲಿದೆ

    October 31, 2026

    ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಭಾರಿ ಇಳಿಕೆ: ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್

    October 29, 2026

    ಭಾರತೀಯ ಷೇರು ಮಾರುಕಟ್ಟೆಗೆ ಭಾರೀ ಹೊಡೆತ: ₹30 ಲಕ್ಷ ಕೋಟಿ ಸಂಪತ್ತು ಕರಗಲು 10 ಕಾರಣಗಳೇನು?

    October 28, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    Uncategorized

    ರೇಷ್ಮೆ ಸೀರೆಗೆ ಎಣ್ಣೆ, ಮೇಣದ ಕಲೆ ಬಿದ್ದರೆ ಚಿಂತೆ ಬೇಡ; ಈ ಟಿಪ್ಸ್ ಅನುಸರಿಸಿ

    November 4, 2026

    ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಮಹಿಳೆಯರು ಸಾಮಾನ್ಯವಾಗಿ ಸುಂದರವಾದ ರೇಷ್ಮೆ ಸೀರೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಆದರೆ ಹಬ್ಬದ…

    ನಾಯಿಗಳಲ್ಲ, ರೋಬೋಟ್‌ ಗಳಿಗೆ ವಾಕಿಂಗ್ ಮಾಡಿಸಿದರೆ ದುಡ್ಡು! AI ತಂತ್ರಜ್ಞಾನಕ್ಕೆ ಹೊಸ ಪ್ರಯೋಗ

    November 4, 2026

    ವಿಮಾನದಲ್ಲೂ ಇರುತ್ತಾ ಹಾರ್ನ್? ಆಕಾಶದಲ್ಲಿ ಯಾರಿಗೆ ಹಾರ್ನ್? | ಈ ಅಚ್ಚರಿಯ ಸಂಗತಿ ನಿಮಗೆ ಗೊತ್ತಾ?

    November 4, 2026

    ಫ್ರಿಜ್‌ ನಿಂದ ತೆಗೆದ ತಕ್ಷಣ ಮೊಸರು ತಿನ್ನುತ್ತೀರಾ? ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತದೆ?

    November 4, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.