ಪಾವಗಡ: ಪಟ್ಟಣದ ಶನಿಮಹಾತ್ಮ ದೇವಸ್ಥಾನದ ವ್ಯವಸ್ಥಾಪಕರಾಗಿದ್ದ ಜಗನ್ನಾಥ್ (50) ಮಂಗಳವಾರ ಅಪಘಾತದಲ್ಲಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಮಂಗಳವಾರ ಕುಟುಂಬ ಸಮೇತ ಅವರು ಪಾವಗಡದಿಂದ ಶಿವಮೊಗ್ಗ ಕಡೆ ಪ್ರವಾಸ ತೆರಳಿದ್ದು, ಚನ್ನಗಿರಿ ಪಟ್ಟಣದ ಸಮೀಪ ಇವರು ಪ್ರಯಾಣಿಸುತ್ತಿದ್ದ ಎರ್ಟಿಗಾ ಕಾರಿನ ಟೈಯರ್ ಪಂಚರ್ ಆಗಿ ಮರಕ್ಕೆ ಗುದ್ದಿ ಈ ಅಪಘಾತ ಜರುಗಿದೆ ಎನ್ನಲಾಗಿದೆ.
ಅಪಘಾತದಲ್ಲಿ ಜಗನ್ನಾಥ್ ಅವರ ಅತ್ತೆ, ಪತ್ನಿ, ಮತ್ತು ಮಗಳಿಗೆ ಹಾಗೂ ವಾಹನ ಚಾಲಕ ರಘು ಅವರಿಗೆ ತೀವ್ರ ಗಾಯಗಳಾಗಿರುವ ವರದಿಯಾಗಿದೆ. ಇವರನ್ನು ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಚನ್ನಗಿರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.
ಕಳೆದ 10 ದಿನಗಳ ಹಿಂದೆ ದೇವಸ್ಥಾನದ ಅರ್ಚಕರಾದ ಕೃಷ್ಣ ಶಾಸ್ತ್ರಿ ಎನ್ನುವವರು ಹೃದಯ ಘಾತದಿಂದ ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ದೇವಸ್ಥಾನದ ಮ್ಯಾನೇಜರ್ ಜಗನ್ನಾಥ್ ಸಾವನ್ನಪ್ಪಿದ್ದು ಇದರಿಂದ ಶನಿಮಹಾತ್ಮ ದೇವಸ್ಥಾನದ ಸಮಿತಿ ತೀವ್ರ ಆಘಾತಕ್ಕೆ ಈಡಾಗಿದೆ.
ದೇವಸ್ಥಾನ ಸಮಿತಿ ಅಧ್ಯಕ್ಷ ಜಿ.ಎಸ್. ಅನಿಲ್ ಕುಮಾರ್, ಜಿ.ಎಸ್. ಸುದೇಶ್ ಬಾಬು, ವೆಂಕಟರಾಮು ರೆಡ್ಡಿ, ವೆಂಕಟರಮಣಪ್ಪ, ಅನಿಲ್ ಕುಮಾರ್, ಶ್ರೀ ರಾಮ ಗುಪ್ತ, ಮಾಜಿ ಅಧ್ಯಕ್ಷ ಆನಂದ ರಾವ್, ಕೆ. ವಿ.ಶ್ರೀನಿವಾಸ್, ಮನೋಹರ್, ಅರ್ಚಕರಾದ ಮನೋಹರ್ ಶಾಸ್ತ್ರಿ, ಎಸ್.ಎಸ್.ಕೆ. ಸಂಘದ ಸಿಇಒಮಂಜುನಾಥ್, ದೇವಸ್ಥಾನದ ಕಾರ್ಮಿಕ ಸಂಘದ ಅಧ್ಯಕ್ಷರಾದ ವೆಂಕಟೇಶ್, ಸುಧಾಕರ್, ರಮೇಶ್, ಫಣೀಂದ್ರ, ನಾಗರಾಜ್ ಮತ್ತಿತರರು ಕಂಬನಿ ಮಿಡಿದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


