ಆಂಧ್ರಪ್ರದೇಶಕ್ಕೆ ಒಮ್ಮೆ ಹೋದಾಗ ಅಲ್ಲಿನ ಗ್ರಾಮಗಳಲ್ಲಿ ಸಿ.ಸಿ.ರಸ್ತೆ ಮಾತ್ರ ಕಾಣುತ್ತದೆ ಹೊರತು ಚರಂಡಿಗಳು ಕಾಣುವುದಿಲ್ಲ, ಆದಾ ಕಾರಣ ಮನೆಗಳ ಬಚ್ಚಲುಗಳ ನೀರು CC ರಸ್ತೆಯ ಮೇಲೆ ನಿಂತಿರುತ್ತವೆ. ಇದರಿಂದ ಗ್ರಾಮ ನೈರ್ಮಲ್ಯಕ್ಕೆ ತೊಂದರೆ ಆಗುತ್ತದೆ. ಇಂತ ಸಂದರ್ಭದಲ್ಲಿ ಚರಂಡಿಗಳ ಮಹತ್ವ ಗೊತ್ತಾಗುತ್ತದೆ.
ಚರಂಡಿಗಳು ಗ್ರಾಮದ ಒಳಗೆ ಮನೆಗಳ ಬಚ್ಚಲು ನೀರು ( ಕೊಳಕು ನೀರು ) ಗ್ರಾಮದಿಂದ ಹೊರಕ್ಕೆ ಹರಿಯುವುದರಿಂದ ಗ್ರಾಮಗಳು ಸ್ವಚ್ಛತೆಯಿಂದ ಇರಲು ಸಾಧ್ಯ ಆಗುತ್ತದೆ. ನೀರು ಗ್ರಾಮದ ಒಳಗೆ ನಿಂತರೆ ಸೊಳ್ಳೆಗಳ ಉತ್ಪತಿಗೆ ಕಾರಣ ಆಗಿ ಡೇಂಗೆ, ಮಲೇರಿಯಾ ರೋಗಗಳು ಹರಡಲು ಕಾರಣ ಆಗುತ್ತದೆ. ಈ ಕಾರಣಕ್ಕೆ ಚರಂಡಿಗಳ ನೀರು ಗ್ರಾಮದಿಂದ ಹೊರಗೆ ಹೋಗುವ ವ್ಯವಸ್ಥೆ ಆಗಬೇಕಾಗಿದೆ.
ಚರಂಡಿಗಳು ಎಷ್ಟು ಮಹತ್ವ ಎಂಬುದು ಸರಿ ಎನ್ನಿಸಿದರು. ಚರಂಡಿಗಳ ಹೆಸರಿನಲ್ಲಿ ಕಾಮಗಾರಿ ಹೆಸರಿನಲ್ಲಿ ಒಂದು ದಂಧೆ ಆಗಬಾರದು, ರಾಜ್ಯದಲ್ಲಿ ಏನಾಗಿದೆ ಎಂದರೆ ಟೆಂಡರ್ ನಲ್ಲಿ ಭಾಗವಹಿಸಿದ ಗುತ್ತಿಗೆದಾರರು ಗ್ರಾಮಗಳಿಗೆ ಬಂದು ರಸ್ತೆ ಪಕ್ಕದಲ್ಲಿ ಆ ವೈಜ್ಞಾನಿಕ ಚರಂಡಿಗಳನ್ನು ನಿರ್ಮಾಣ ಮಾಡಿ ಹೋಗುತ್ತಾರೆ ಹಾಗೂ ಅವಶ್ಯಕತೆ ಇಲ್ಲದ ಸ್ಥಳಗಳಲ್ಲಿ ಸಹ ಚರಂಡಿ ಮಾಡಿ ಹೋಗುತ್ತಾರೆ, ಇವರಿಗೆ ಕಾಮಾಗಾರಿ ಹೆಸರನಲ್ಲಿ ಅಧಿಕ ಲಾಭ ಬೇಕು. ಆದರೆ ಕೆಲವೇ ತಿಂಗಳಲ್ಲಿ ಕೆಲವು ಕಡೆ ಮಣ್ಣಿನ ನಿಂದ ಮುಚ್ಚಿ ತಮ್ಮ ಮನೆಗಳಿಗೆ — ಹೊಲಗಳಿಗೆ ದಾರಿ ಮಾಡಿಕೊಳ್ಳುತ್ತಾರೆ ಹಾಗೂ ರಸ್ತೆಯ ಪಕ್ಕ ಮನೆಗಳನ್ನು ಕಟ್ಟುವರು, ತಮ್ಮ ಅನುಕೂಲಕ್ಕಾಗಿ ಚರಂಡಿಗಳನ್ನು ಮುಚ್ಚಿ ಮನೆಗಳನ್ನು ಅಂಗಡಿ ಮಳಿಗೆಗಳನ್ನು ಕಟ್ಟಿಕೊಳ್ಳುತ್ತಾರೆ.
ಇಲ್ಲಿ ಪ್ರಭಾವಿಗಳು ಆಗಿದ್ದ ಪಕ್ಷದಲ್ಲಿ ಇವರ ಕಾಮಾಗಾರಿಗಳಿಗೆ ನಾಗರೀಕರು ಆಗಿರಬಹುದು. ಗ್ರಾಮ ಪಂಚಾಯತಿಯವರು ಆಗಲಿ ಅಡ್ಡಿಪಡಿಸಲು ಹೋಗುವುದಿಲ್ಲ, ಅದೇ ಸಾಮಾನ್ಯ ಜನರು ಆಗಿದ್ದರೆ ಸಿಬ್ಬಂದಿಯಿಂದ ಕಚೇರಿಗೆ ಕರೆಯಿಸಿ ಮಾತುಕತೆಯಿಂದ ಹೊಂದಾಣಿಕೆ, ಏರ್ಪಾಟು ಕಟ್ಟಡ ಕಟ್ಟುವರೆಗೆ ಚರಂಡಿಗಳ ಮೇಲೆ ಕಾಮಗಾರಿಗೆ ಅಡ್ಡಿಪಡಿಸುವುದಿಲ್ಲ ಎನ್ನುವ ಮಾತು ನಾಗರಿಕರಿಂದ ಕೇಳಿ ಬರುತ್ತದೆ.
ಮುಂದೆ ಚರಂಡಿಗಳ ನೀರು ಗ್ರಾಮದಿಂದ ಹೊರಗೆ ಹೋಗದಂತಹ ಪರಿಸ್ಥಿತಿ ಆಗಿ ಚರಂಡಿಗಳಲ್ಲಿಯೇ ನೀರು ನಿಂತು ಸೊಳ್ಳೆಗಳ ಉತ್ಪತಿಗೆ ಕಾರಣ ಆಗುತ್ತದೆ ಎಂಬುದು ನಾಗರಿಕರ ಮಾತುಗಳು ಕೇಳಿ ಬರುತ್ತದೆ. ಇದರಿಂದ ಗ್ರಾಮಗಳ ಸ್ವಚ್ಛತೆ ಧಕ್ಕೆ ಆಗುತ್ತದೆ ರೋಗಗಳು ಹರಡಲು ಸಾಧ್ಯವಾಗುತ್ತಿದೆ. ಟೆಂಡರ್ ನಿಂದ ಕಾಮಾಗಾರಿ ಮಾಡಿಕೊಂಡು ಹೋದ ವ್ಯಕ್ತಿ ಒಳ್ಳೆ ಲಾಭ ಮಾಡಿಕೊಳ್ಳುತ್ತಾನೆ ಅಧಿಕಾರಿಗಳಿಗೂ ಹೆಚ್ಚಿನ ಕಾಣಿಕೆ ದೊರೆಯುತ್ತದೆ, ಇದು ಚರಂಡಿಗಳ ದುರುಪಯೋಗಕ್ಕೆ ಕಾರಣ ಆಗುತ್ತದೆ ಇದು ಒಂದು ಪಂಚಾಯತ್ತಿಯ ಕಥೆ — ವ್ಯಥೆ ಅಲ್ಲ ರಾಜ್ಯದ ಪರಿಸ್ಥಿತಿ.
ಇನ್ನು ಗ್ರಾಮದ ಒಳಗೆ ಎಷ್ಟೊ ಕಡೆ ಚರಂಡಿಗಳ ಅವಶ್ಯಕತೆ ಇರುತ್ತದೆ ಆದರೆ ಇಲ್ಲಿ ಅಷ್ಟು ಕಾಳಜಿಯಿಂದ ಚರಂಡಿಗಳನ್ನು ಮಾಡಿಸಲು ಹೋಗುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತದೆ. ಕಾರಣ ಕೇಳಿದರೆ ಗ್ರಾಮ ಒಳಗೆ ಮಾಡುವ ಚರಂಡಿಗಳು ಸ್ವಲ್ಪವಾದರೂ ಗುಣಮಟ್ಟದಿಂದ ಮಾಡಲೇ ಬೇಕಾಗುತ್ತದೆ ನಾಗರಿಕರ ಕಣ್ಣು ಇವುಗಳ ಮೇಲೆ ಇರುವುದರಿಂದ ಗುಣಮಟ್ಟ ತೋರಿಸಲೇ ಬೇಕಾಗುತ್ತದೆ. ಇನ್ನೊಂದು ಕಾರಣ ಗ್ರಾಮಗಳಲ್ಲಿ ಚರಂಡಿಗಳು ಮಾಡುವುದರಿಂದ ಸಿಬ್ಬಂದಿಯಿಂದ ಸ್ವಚ್ಛತೆ ಮಾಡಿಸುವ ಅನಿವಾರ್ಯ ಇರುತ್ತದೆ. ಅದೇ ಅವಶ್ಯಕತೆ ಇಲ್ಲದ ಕಡೇ ಚರಂಡಿಗಳ ಕಾಮಗಾರಿಗಳು ಮಾಡಿಸಿದರೆ ಗುಣಮಟ್ಟ ಬಗೆ ಯಾರು ಪ್ರಶ್ನೆ ಮಾಡುವುದಿಲ್ಲ ಎಂಬ ಅನಿಸಿಕೆಗಳು ಕೇಳಿ ಬರುತ್ತದೆ. ಅವಶ್ಯಕತೆ ಅಲ್ಲದ ಚರಂಡಿಗಳು ಮುಚ್ಚಿ ಹೋದರೂ, ಯಾರು ಪ್ರಶ್ನೆ ಮಾಡುವುದಿಲ್ಲ ಈ ಕಾರಣದಿಂದ ಗುತ್ತಿಗೆದಾರರಿಗೆ ಒಳ್ಳೆಯ ಲಾಭ ಬರುತ್ತದೆ. ಅಧಿಕಾರಿಗಳ ವರ್ಗಕ್ಕೆ ಒಳ್ಳೆ % ದೊರೆಯುತ್ತದೆ ಎಂಬ ಮಾತುಗಳು ಕೇಳಿ ಬರುತ್ತದೆ. ಚರಂಡಿಗಳಿಂದ ಗ್ರಾಮದ ನೈರ್ಮಲ್ಯ ಕಾಪಾಡಬಹುದು, ಗ್ರಾಮ ಪಂಚಾಯತ್ತಿ ವರು ಚರಂಡಿಗಳ ಸ್ವಚ್ಛತೆಗೆ ಗಮನ ನೀಡಲಿಲ್ಲ ಎಂದರೆ ಚರಂಡಿಗಳ ಕೊಳಕು ವಾಸನೆ ಹಾಗೂ ಸೊಳ್ಳೆಗಳ ಉತ್ಪತಿಗೆ ಕಾರಣ ಆಗುತ್ತದೆ ಎಂಬ ಪ್ರಜ್ಞಾವಂತ ನಾಗರಿಕರ ಮಾತುಗಳು ಕೇಳಿ ಬರುತ್ತದೆ.
ಚರಂಡಿಗಳ ನೀರು ಗ್ರಾಮದಿಂದ ಹೊರಗೆ ಹೋಗುವ ವ್ಯವಸ್ಥೆಯ ಬಗೆ ಜನಪ್ರತಿನಿಧಿಗಳು ಗ್ರಾಮ ಪಂಚಾಯತ್ತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗಮನಹರಿಸಬೇಕಾಗುತ್ತದೆ. ಇನ್ನೊಂದು ವಿಷಯ ಏನೆಂದರೆ ಮನೆಗಳ ನಿವೇಶನಗಳುನ್ನು ಹಚ್ಚುವ ಮೊದಲೆ ಮನೆಗಳ ನಿರ್ಮಾಣ ಮಾಡುವ ಮುಂಚೆಯೆ ಚರಂಡಿಗಳು, ಸಿ.ಸಿ.ರಸ್ತೆಗಳು ಮಾಡುವುದರಿಂದ ಮನೆ ಕಟ್ಟಿಕೊಳ್ಳುವರು ರಸ್ತೆಗಳನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ಕಟ್ಟುವುದು ತಪ್ಪುತ್ತದೆ. ಈ ಕಾರಣದಿಂದ ನಿವೇಶನ ಹಚ್ಚುವ ಮೊದಲೇ ಚರಂಡಿಗಳ ನಿರ್ಮಾಣ ಅಗತ್ಯ ಇದೆ. ಇದೇ ರೀತಿ ಖಾಸಗಿ ವ್ಯಕ್ತಿಗಳು ನಿವೇಶನಗಳನ್ನು ಮಾರಾಟ ಮಾಡುವ ಮು೦ಚೆಯೇ ಚರಂಡಿಗಳನ್ನು ನಿರ್ಮಾಣ ಮಾಡಿಯೇ ಮಾರಾಟ ಮಾಡಬೇಕೆಂಬ ನಿಯಮಗಳನ್ನು ಜಾರಿಗೆ ತರಬೇಕಾಗಿದೆ.
N.S.ಈಶ್ವರಪ್ರಸಾದ್
ನೇರಳೇಕೆರೆ. ಮಧುಗಿರಿ ತಾಲ್ಲೂಕ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx