ಬೆಂಗಳೂರು: ಕಮಲ್ ಹಾಸನ್ ಅವರು ಕ್ಷಮೆ ಕೇಳಬೇಕು ಇಲ್ಲದೇ ಹೋದರೆ ಅವರ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದು ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಹೇಳಿದ್ದಾರೆ.
‘ಥಗ್ ಲೈಫ್’ ಸಿನಿಮಾ ಕರ್ನಾಟಕದ ವಿತರಕ ವೆಂಕಟೇಶ್ ಅವರನ್ನು ಚೇಂಬರ್ಗೆ ಕರೆಸಿ ಮಾತುಕತೆ ನಡೆಸಿದ್ದೇವೆ. ಕಮಲ್ ಹಾಸನ್ ಅವರನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಕಮಲ್ ಅವರಿಂದ ಕ್ಷಮೆ ಕೇಳಿಸುತ್ತೇವೆ. ಎಂದು ಅವರು ಹೇಳಿದ್ದಾರೆ.
ಇನ್ನೂ ಸಾರಾ ಗೋವಿಂದು ಮಾತನಾಡಿ, ಕಮಲ್ ಹಾಸನ್ ಬಗ್ಗೆ ಕನಿಕರ ಇಲ್ಲ ಇದನ್ನ ಸಹಿಸೋಕೆ ಸದ್ಯ ಇಲ್ಲ, ಇವತ್ತು ನಾಳೆ ಒಳಗೆ ಕ್ಷಮೆ ಕೇಳದೆ ಹೋದ್ರೆ ಚಿತ್ರ ಬಿಡುಗಡೆ ಆಗೋದಿಲ್ಲ, ಕಮಲ್ ಹಾಸನ್ ಅವರಿಗೆ ಮನದಟ್ಟು ಮಾಡಿಸುವ ಜವಾಬ್ದಾರಿ ವಿತರಕರದ್ದು ಎಂದು ಅವರು ಹೇಳಿದ್ದಾರೆ.
ಸಿನಿಮಾದ ಕರ್ನಾಟಕ ವಿತರಕ ವೆಂಕಟೇಶ್ ಮಾತನಾಡಿ, ನಾನೊಬ್ಬ ಕನ್ನಡಿಗನಾಗಿ ಕಮಲ್ ಹಾಸನ್ ಅವರ ಹೇಳಿಕೆಯನ್ನು ಖಂಡಿಸುತ್ತೀನಿ. ಚೇಂಬರ್ ನಲ್ಲಿ ಏನೇನು ಮೀಟಿಂಗ್ ಆಗಿದೆ ಅದನ್ನೆಲ್ಲ ಕಮಲ್ ಹಾಸನ್ ಅವರಿಗೆ ಹೇಳುತ್ತೇವೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW