ತುಮಕೂರು: ಶಾಲೆಗಳಲ್ಲಿ ಪರಿಸರ ಸಂರಕ್ಷಣೆ, ಜೀವವೈವಿಧ್ಯ ಹಾಗೂ ಮಕ್ಕಳಲ್ಲಿ ಪರಿಸರ ಕಾಳಜಿಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ತುಮಕೂರು ವಿಜ್ಞಾನ ಕೇಂದ್ರದಿಂದ ನೀಡಲಾಗುವ 2026–27ನೇ ಸಾಲಿನ ಪರಿಸರ ಪ್ರಶಸ್ತಿಗೆ ಪ್ರಸ್ತಾವನೆ ಸಲ್ಲಿಸುವ ದಿನಾಂಕವನ್ನು ಮುಂದೂಡಲಾಗಿದೆ.
ಶಾಲೆಗಳಲ್ಲಿ ಉತ್ತಮ ಪರಿಸರ ನಿರ್ವಹಣೆ, ಮಕ್ಕಳಲ್ಲಿ ಪರಿಸರ ಕಾಳಜಿ, ಜೀವವೈವಿಧ್ಯದ ಅರಿವು ಹಾಗೂ ಪರಿಸರ ಸ್ನೇಹಿ ಹವ್ಯಾಸಗಳನ್ನು ಬೆಳೆಸುವ ಕಾರ್ಯಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿರುವ ಶಾಲೆಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ.
ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಒಂದು ಶಾಲೆಗೆ ಡಾ. ಟಿ.ಆರ್.ಅನಂತರಾಮು ಪರಿಸರ ಪ್ರಶಸ್ತಿ ಹಾಗೂ ತುಮಕೂರು ಉತ್ತರ ಶೈಕ್ಷಣಿಕ ಜಿಲ್ಲೆಯ ಒಂದು ಶಾಲೆಗೆ ಡಾ. ಟಿ.ಎನ್. ಚಂದ್ರಕಾಂತ್ ಅವರ ಅಜ್ಜಿ ನಾಗಮ್ಮನವರ ಸ್ಮರಣಾರ್ಥ ಪರಿಸರ ಪ್ರಶಸ್ತಿ ನೀಡಲಾಗುತ್ತದೆ. ಅಲ್ಲದೆ, ಕೊರಟಗೆರೆ ಮತ್ತು ಪಾವಗಡ ತಾಲ್ಲೂಕಿನ ಶಾಲೆಗಳಿಗೆ ಡಿ.ಸಿ. ಅರಸಪ್ಪ ಅವರು ಕೊರಟಗೆರೆ ತಾಲ್ಲೂಕಿನ ದುಡ್ಡನಹಳ್ಳಿ ಗ್ರಾಮದ ದಿವಂಗತ ಡಿ.ಸಿ. ಚಿಕ್ಕಣ್ಣ ಮತ್ತು ದಿವಂಗತ ಅರಸಮ್ಮ ಅವರ ಹೆಸರಿನಲ್ಲಿ ಪರಿಸರ ಪ್ರಶಸ್ತಿಗಳನ್ನು ನೀಡಲಿದ್ದಾರೆ.
2026-27ನೇ ಸಾಲಿನ ಪ್ರಶಸ್ತಿಗಾಗಿ ಆಸಕ್ತ ಹಾಗೂ ಅರ್ಹ ಶಾಲೆಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದ್ದು, ಪ್ರಸ್ತಾವನೆ ಸಲ್ಲಿಸುವ ಕೊನೆಯ ದಿನ ಸೆ. 10, 2026ರವರೆಗೆ ವಿಸ್ತರಿಸಲಾಗಿದೆ. ಆಸಕ್ತ ಶಾಲೆಗಳ ಮುಖ್ಯಶಿಕ್ಷಕರು ನಿಗದಿತ ನಮೂನೆಯಲ್ಲಿ ಪ್ರಸ್ತಾವನೆಗಳನ್ನು ಸಿದ್ಧಪಡಿಸಿ ಸೆ. 10ರೊಳಗೆ ತುಮಕೂರು ವಿಜ್ಞಾನ ಕೇಂದ್ರಕ್ಕೆ ತಲುಪಿಸುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ತುಮಕೂರು ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಪಿ. ಪ್ರಸಾದ್ (ಮೊ. 9740773349) ಅಥವಾ ಖಜಾಂಚಿ ನಿತ್ಯಾನಂದ್ (ಮೊ. 9538740650) ಸಂಪರ್ಕಿಸಬಹುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
