ತುಮಕೂರು:ತುಮಕೂರು ರನ್ನರ್ಸ್ ಅಸೋಸಿಯೇಶನ್ ವತಿಯಿಂದ ರಾಷ್ಟ್ರೀಯ ಯುವದಿನದ ಅಂಗವಾಗಿ ತುಮಕೂರು ಮ್ಯಾರಥಾನ್–2025ಅನ್ನು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಒಟ್ಟು 720 ಸ್ಪರ್ಧಾಳುಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.
ತುಮಕೂರು ಅರ್ಬನ್ ರೆಸಾರ್ಟ್ ಮಾಲೀಕರಾದ ಶ್ರೀಕಂಠಸ್ವಾಮಿ ಹಾಗೂ ಚನ್ನಬಸವ ಪ್ರಸಾದ್, ಸಿದ್ದಿ ಬಯೋ ಮಾಲೀಕರಾದ ರುದ್ರಪ್ರಕಾಶ್ ಹಾಗೂ ಆದರ್ಶ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮ್ಯಾರಥಾನ್ ಗೆ ಚಾಲನೆ ನೀಡಿದರು.
5,000 ಮೀ.ಓಟದ ಪುರುಷರ ವಿಭಾಗದಲ್ಲಿ ರಾಜೇಂದ್ರ ಪ್ರಸಾದ್ ಎಸ್. ಜವಳಿ, ವಿವೇಕ್ ಎನ್. ಹಾಗೂ ದೇವರಾಜ್ ಸಿಂಗ್ ಮೊದಲನೆಯ ಮೂರು ಬಹುಮಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಪೃಥ್ವಿ, ನವ್ಯಶ್ರೀ ಹಾಗೂ ಬೃಷ್ಟಿ ಪರಾಶರ್ ಮೊದಲ ಮೂರು ಬಹುಮಾನ ಪಡೆದರು.
10 ಸಾವಿರ ಮೀಟರ್ ಓಟದ ಪುರುಷರ ವಿಭಾಗದಲ್ಲಿ ಎಂ.ವೈ.ಸಂದೀಪ್ಕುಮಾರ್, ತೈಚಿಜಕಿಮಿ ಮತ್ತು ಸಾಯಿ ಮನೋಹರ್ ಮೊದಲ ಮೂರು ಬಹುಮಾನ ಪಡೆದರು. ಮಹಿಳೆಯರ ವಿಭಾಗದಲ್ಲಿಆಲಿಯಾ ಶೇಕ್, ರಮ್ಯಾ ಎಸ್. ಹಾಗೂ ಕೆ.ಸಿ.ಮಧುರ ಮೊದಲ ಮೂರು ಬಹುಮಾನ ಪಡೆದರು.
21 ಸಾವಿರ ಮೀಟರ್ ಓಟದ ಪುರುಷರ ವಿಭಾಗದಲ್ಲಿಅವಧೇಶ್ ನಿಶಾದ್, ಚಿಕ್ಕಣ್ಣ ಮತ್ತು ನಿಖಿಲ್ಎಸ್. ಮತ್ತು ಮಹಿಳೆಯರ ವಿಭಾಗದಲ್ಲಿ ನಂದಿನಿ, ಸ್ಮೃತಿರಂಜನ್ ಮುದುಲಿ, ಶೃತಿ ಟಿ.ಎಸ್. ಬಹುಮಾನಿತರಾದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx