ತುಮಕೂರು: ಇತ್ತೀಚೆಗೆ ಅನಂತಪುರದ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ನಡೆದ ‘ಸ್ಟಾರ್ಟ್ಅಪ್ ಜಾತ್ರಾ’ನಲ್ಲಿತುಮಕೂರು ವಿವಿಯ ಜೈವಿಕ ತಂತ್ರಜ್ಞಾನ ಮತ್ತು ಸೂಕ್ಷ್ಮ ಜೀವವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮೊದಲ ಎರಡು ಸ್ಥಾನ ಪಡೆದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಆವಿಷ್ಕಾರಗಳನ್ನುಉತ್ತೇಜಿಸಲು ಮತ್ತು ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಅವಕಾಶಗಳನ್ನು ಒದಗಿಸಲು ಹಾಗೂಉತ್ಪನ್ನ ಪ್ರಯೋಗಗಳು, ಮಾರುಕಟ್ಟೆ ಪ್ರವೇಶ ಮತ್ತು ವಾಣಿಜ್ಯೀಕರಿಸಲು ಸ್ಟಾರ್ಟ್ಅಪ್‌ಗಳಿಗೆ ಹಣಕಾಸಿನ ನೆರವು ನೀಡುವಗುರಿಯೊಂದಿಗೆ ನಡೆಸುವ ‘ಸ್ಟಾರ್ಟ್ಅಪ್ ಜಾತ್ರಾ’ನಲ್ಲಿ ಭಾರತದಾದ್ಯಂತ 350 ಕಾಲೇಜುಗಳು ಭಾಗಿಯಾಗಿದ್ದವು.
ದೇಶದ ವಿವಿಧ ವಿವಿಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳ ತಂಡಗಳು ನೂತನವಾಗಿತಾವು ಆವಿಷ್ಕಾರಗೊಳಿಸಿರುವ ಉತ್ಪನ್ನಗಳನ್ನು ‘ಸ್ಟಾರ್ಟ್ಅಪ್‌ಜಾತ್ರಾ’ಸ್ಪರ್ಧೆಯಲ್ಲಿ ಪ್ರದರ್ಶಿಸಿದರು. ಕೊನೆಯ ಹಂತದಲ್ಲಿ 26 ತಂಡಗಳು ಆಯ್ಕೆಯಾದವು. ತುಮಕೂರು ವಿವಿಯಿಂದ ಒಟ್ಟು 6 ತಂಡಗಳು ಭಾಗವಹಿಸಿದ್ದವು. ಅದರಲ್ಲಿಎರಡು ತಂಡಗಳು ಮೊದಲ ಎರಡು ಸ್ಥಾನಗಳನ್ನು ತಮ್ಮದಾಗಿಸಿಕೊಂಡವು.
ತಂಡಗಳಾದ ಡಿವೈನ್ ಹಾರ್ವೆಸ್ಟ್ಶುಂಠಿ ಮತ್ತು ಅರಿಶಿನ ಮಸಾಲೆಗಳಿಗೆ ಜೈವಿಕಗೊಬ್ಬರ ಹಾಗೂಕೋಕೋ–ಕ್ರಾಂತಿ ಸಸ್ಟೈನೆಬಿಲಿಟಿ ತಂಡವು ಬಯೋ ಪ್ಲಾಸ್ಟಿಕ್ ಟೀ ಬ್ಯಾಗ್ಸ್ ಗಳ ಆವಿಷ್ಕಾರಗಳನ್ನು ಜಾತ್ರಾ ಸ್ಪರ್ಧೆಯಲ್ಲಿ ಪ್ರದರ್ಶಿಸಿದರು.
ಮುಂದಿನ ಹಂತವಾಗಿ ಧನ ಸಹಾಯಸಂಸ್ಥೆಗಳು ಆರ್ಥಿಕವಾಗಿ ಸಹಾಯ ಮಾಡಿ, ಉತ್ಪನ್ನಗಳನ್ನು ವಾಣಿಜ್ಯೀಕರಿಸಲು ಅವುಗಳನ್ನು ವೈಜ್ಞಾನಿಕ ದೃಢೀಕರಣದ ಪ್ರಕ್ರಿಯೆಗೆ ಕಾಯ್ದಿರಿಸಿದೆ.
ಮೊದಲ ಎರಡು ಸ್ಥಾನ ಪಡೆದ ವಿವಿಯ ವಿದ್ಯಾರ್ಥಿಗಳಿಗೆ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹಾಗೂ ಕುಲಸಚಿವೆ ನಾಹಿದಾ ಜಮ್ ಜಮ್ ಅಭಿನಂದಿಸಿದರು. ಜೈವಿಕತಂತ್ರಜ್ಞಾನ ಮತ್ತು ಸೂಕ್ಷ್ಮ ಜೀವವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಶರತ್‌ಚಂದ್ರ ಆರ್.ಜಿ. ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296