ಬೆಂಗಳೂರು: ಭಾರತೀಯ ಸಂಸ್ಕೃತಿ ಸಂಸ್ಕಾರದ ಮೂಲಬೇರಾಗಿರುವ ಜಿನ ಭಜನೆಯಿಂದ ಸಮಾಜದಲ್ಲಿ ಒಗ್ಗಟ್ಟು ಮೂಡಿದ್ದು ಇದನ್ನು ಉಳಿಸಿ ಬೆಳೆಸ ಬೇಕೆಂದು ಭಾರತೀಯ ಜೈನ್ ಮಿಲನ್ನ ರಾಷ್ಟ್ರೀಯ ಕಾರ್ಯ ಅಧ್ಯಕ್ಷರಾದ ಧರ್ಮಸ್ಥಳ ಸುರೇಂದ್ರ ಕುಮಾರ್ ಕರೆ ನೀಡಿದರು.
ಅವರಿಂದು ಭಾರತೀಯ ಜೈನ್ ಮಿಲನ್ ಒಲೆಯ 8ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ 8 ವರ್ಷಗಳಿಂದ ಅನಿತಾ ಹಾಗೂ ಸಂಗಡಿಗರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಸಿ ಯಶಸ್ವಿಯಾಗಿದೆ, ಇದೊಂದು ಉತ್ಸವದಂತಿದ್ದು ಮುಂದಿನ ಸಮಾರಂಭ ಸಿದ್ಧತೆಗೆ ಆರು ತಿಂಗಳು ಮುಂಚೆ ತಯಾರಿ ಮಾಡಬೇಕಿದೆ. ಈ ಕಾರ್ಯಕ್ರಮ ಸಮಾಜದಲ್ಲಿ ಒಗ್ಗಟ್ಟು ಮೂಡಿಸಿದೆ ಎಂದ ಅವರು, ಈ ಭಜನೆಯತೀರ್ಪು ಒಂದು ಸವಾಲಾಗಿದೆ ಎಂದರು.
ಚಲನಚಿತ್ರ ನಟಿ ಶೃತಿ ಮಾತನಾಡಿ, ನಮ್ಮದು ಮನೋರಂಜನೆಗೆ ಒತ್ತು ಕೊಡುವ ಕಾರ್ಯಕ್ರಮಕ್ಕೆ ಆದ್ಯತೆ ನೀಡುವ , ಪರಂಪರೆ , ಭಜನಾ ಕಾರ್ಯಕ್ರಮಕ್ಕೆ ಜನ ಬೆಂಬಲವಿದೆ, ಇದರ ಕಲ್ಪನೆ ಅಮೋಘವಾದದ್ದು, ಸಂಗೀತ ನಮ್ಮ ಮನೆತನದ ಬದುಕು ಕಟ್ಟಿಕೊಳ್ಳಲು ಕಾರಣವಾಯಿತು ಎಂದ ಅವರು, ಭಜನೆ ಕಾರ್ಯಕ್ರಮಕ್ಕೆ ಕಳೆದ ಎಂಟು ವರ್ಷಗಳಿಂದ ಒಳ್ಳೆ ಅಭಿಪ್ರಾಯ ಮೂಡಿವೆ, ಜನತೆಗೆ ತಲುಪಲು ಸಂಸ್ಕಾರ ಅಗತ್ಯ, ಭಜನೆ ಇದ್ದ ಕಡೆ ವಿಭಜನೆ ಅಸಾಧ್ಯ ಎಂದು ಅವರು, ಸಂಸ್ಕಾರ ಇದ್ದವರು ಭ್ರಷ್ಟನಾಗಲು ಅಸಾಧ್ಯ ಭಜನೆಯಿಂದ ಸಂಸ್ಕಾರದ ಪರಂಪರೆ ಉಳಿಸಲು ಸಾಧ್ಯ ಎಂದರು. ಭಾರತೀಯ ಸಂಸ್ಕಾರದ ಉತ್ತುಂಗದಲ್ಲಿದ್ದು ಮೌಲ್ಯವು ಬೆರೆತಿದೆ ಇದು ವಿಶ್ವ ಮಾನ್ಯವಾದದ್ದು ಇದನ್ನು ಉಳಿಸಿ ಬೆಳೆಸುತ್ತಿರುವುದು ಸಂತಸ ತಂದಿದೆ ಎಂದರು ಭಜನೆಗಳು ಎಲ್ಲರಿಗೂ ತಲುಪಲಿ ಎಂದು ಆಶಿಸಿದರು.
ಖ್ಯಾತ ಹಿನ್ನೆಲೆ ಗಾಯಕಿ ಸಂಗೀತ ಕುಟ್ಟಿ ಮಾತನಾಡಿ, ಗುರುವಿನ ಗುಲಾಮನಾದರೆ ಏಳಿಗೆ ಸಾಧ್ಯ. ಗುರುಶಕ್ತಿಯ ಅರಿವು ಅಗತ್ಯ, ಈ ಹಿಂದೆ ಸಂಗೀತ ಪರಂಪರೆ ಆಸ್ಥಾನ ವಿದ್ವಾಂಸರಿಗೆ ಸೀಮಿತವಾಗಿದ್ದು, ಈಗ ಜನಸಾಮಾನ್ಯರಿಗೆ ತಲುಪಿದೆ, ಇದು ಭಕ್ತಿ ಸಂಗೀತದಿಂದ ಸಾಧ್ಯವಾಗಿದೆ ಎಂದು ಅವರು, ಎಲ್ಲದಕ್ಕೂ ಆತ್ಮ ವಿಶ್ವಾಸ ಅಗತ್ಯ ಎಂದರು . ಸಂಗೀತ ಮೂಲಕ ಭಕ್ತಿ ಸದಾ ಮೂಡಿ ಬರಲಿ ಎಂದ ಅವರು ಭಕ್ತಿಗೆ ಆಸಕ್ತಿ ಅಗತ್ಯ .ಕಲೆ ಶಾಶ್ವತವಾದದ್ದು ಇದಕ್ಕೆ ಕೊನೆ ಇಲ್ಲ ಎಂದರು.
ಈ ಸಂದರ್ಭದಲ್ಲಿ ಕಲಾ ವೈಭವ ತಂಡದ ಸೋನಿ ವರ್ಮ, ಜಿನ ಭಜನಾ ಕೇಂದ್ರ ಸಮಿತಿಯ ಅಧ್ಯಕ್ಷರಾಧ ಶ್ರದ್ಧಾ ಅಮಿತ್, ವಿಲಾಸ್ ಪಾಸಣ್ಣನವರ್, ಪುಷ್ಪರಾಜು ಜೈನ್ ಮಂಗಳೂರು , ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷ ಪದ್ಮ ಪ್ರಕಾಶ್ , ಶೀಲಾ ಅನಂತರಾಜು, ಪ್ರೇಮ ಸುಖಾನಂದ, ಹುಬ್ಬಳ್ಳಿ ಜೈನ ಮಹಿಳಾ ಸಮಾಜದ ತ್ರಿಶಾಲ ಮಾಲಗುತ್ತಿ, ಶಾಂತಲಾ ಅಜಿತ್, ಟಿ. ಎನ್ .ಅಜಿತ್, ಭಾರತೀಯ ಜೈನ್ ಮಿಲನ್ ವಲಯ–8 ರ ಸುದರ್ಶನ್ ಜೈನ್, ಸೋಮಶೇಖರ ಶೆಟ್ಟಿ ,ಸುಭಾಷ್ ಚಂದ್ರ ಜೈನ್ ,ಜೀವoದರ್ ಕುಮಾರ್ , ಡಾ.ಉದಯ ಪಾಟೀಲ್ , ಆನಿತಾ ವಾಸುದೇವ , ಪ್ರಿಯಾ ವಾಸುದೇವ, ಬೆಂಗಳೂರು ಚಕ್ರೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷರಾದ ನಾಗಶ್ರೀ ಮುಪ್ಪಾನೆ ,ಅಧ್ಯಕ್ಷ ಪದ್ಮಾವತಿ ಬಸ್ತಿ,ಶ್ಯಾಮಲಾ ಧರಣಿಂದ್ರಿಯ್ಯಾ,ಪ್ರಶಾಂತ್ ಉಪಾಧ್ಯಾಯ, ಅಶೋಕ್ ಬಾಳೆಕಾಯಿ, ಸುಮತಿ ಕುಮಾರ್ , ಬಿ.ಟಿ. ಸುದರ್ಶನ್ ಜೈನ್ ಉಡುಪಿ ಪ್ರಸನ್ನಕುಮಾರ್,ಎಚ್ ,ಪಿ ,ಭರತ್ ರಾಜ್ ಹಜಾರೆ ,ಯಶೋಧರ ಹೆಗಡೆ ,ಪೂರ್ಣಿಮಾ ಅಶೋಕ್ ಕುಮಾರ್, ಮಹಾವೀರ್ ಶಹಪುರ, ಮಹೀಂದ್ರ, ವಾಸುದೇವ್. . ಅನಂತಕುಮಾರಿ, ವಜ್ರ ಕುಮಾರ್ ಜೈನ್, ದೀಪಾಂಜಲಿ ಗೌರಜ್, ಬ್ರಾಹ್ಮೀಲ ಮದನ್, ಬೆಳಗುಲಿ ವಿಜಯ್ ಕುಮಾರ್, ಸೌಮ್ಯ ಶ್ರೀಧರ್ ಜೈನ್, ಜಿತೇಂದ್ರ ಕುಮಾರ್, ಸಿ ಎಸ್ .ನಾಗರಾಜ್ ,ಚಂದ್ರಪ್ರಕಾಶ್, ಕೆ.ಯುವರಾಜ್ ಭಂಡಾರಿ, ಡಾ.ಭರತೇಶ್ ಜಗ ಶೆಟ್ಟಿ , ಎಂ.ರತ್ನ ರಾಜು , ಬೆಂಗಳೂರು ಜೈನ ಅಸೋಸಿಯೇಷನ ನ ನಿರ್ದೇಶಕರು ಗಳಾದ ಎಂ.ಎಂ.ಜಿನೇಂದ್ರ, ಮಾಳ ಹರ್ಷೇಂದ್ರ ಕುಮಾರ್, ಮಂಚೇನಹಳ್ಳಿ ರಾಜೇಶ್, ರತ್ಮಾತ್ರಯ ಧಾರಾವಾಹಿಯ ನಿರ್ದೇಶಕಿ ಡಾ.ನೀರಜಾ ನಾಗೇಂದ್ರ ಕುಮಾರ್, ಪೀ. ಅಜಿತ್ ಕುಮಾರ್, ಎ.ಪಿ .ಕುಮಾರ್ , ಜಿನೇಂದ್ರಪ್ಪ, ಎಂ.ಧೀರಜ್ ಕುಮಾರ, ವಿಜಯಕುಮಾರ್, ಸೌಮ್ಯ ಶ್ರೀಧರ್ ಜೈನ್, ಸುಖಾನಂದ,ಕರ್ನಾಟಕ ಜೈನ ಅಸೋಸಿಯೇಷನ್ ಹಲವಾರು ನಿರ್ದೇಶಕರುಗಳು, ಜೈನ ಸಮಾಜದ ಮುಖಂಡರುಗಳು ,ವಿವಿಧ ಜಿಲ್ಲಾ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಪದಾಧಿಕಾರಿಗಳು ,ವಿವಿಧ ಮಹಿಳಾ ಸಂಘಟನೆಗಳ ಮುಖ್ಯಸ್ಥರುಗಳು, ಪದಾಧಿಕಾರಿಗಳು ಸೇರಿದಂತೆ ಶ್ರಾವಕ– ಶ್ರಾವಕಿಯರು ಭಾಗವಹಿಸಿದ್ದರು. ಟಿ.ವಿ .ನಿರೂಪಕಿ ನಮಿತಾ ಜೈನ್ ಕಾರ್ಯಕ್ರಮ ನಿರೂಪಿಸಿದರು . ಭಾರತೀಯ ಜೈನ್ ಮಿಲನ್ ವಲಯ 8ರ ಬೆಂಗಳೂರು ವಿಭಾಗದ ಕಾರ್ಯದರ್ಶಿ ವಿಲಾಸ್ ಪಾಸಣ್ಣನವರ್ ವಂದಿಸಿದರು.
ವರದಿ: ಜೆ.ರಂಗನಾಥ, ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx