ಫೋನ್ ಪೇ, ಗೂಗಲ್ ಪೇ , ಪೇಟಿಎಂ ಸೇರಿದಂತೆ ಯುಪಿಐ ಪಾವತಿ ಆ್ಯಪ್ ವಹಿವಾಟುಗಳಿಗೆ ಮಿತಿ ವಿಧಿಸುವ ಕುರಿತು ಭಾರತದ ರಾಷ್ಟ್ರೀಯ ಪಾವತಿಗಳ ನಿಗಮವು ಭಾರತೀಯ ರಿಸರ್ವ್ ಬ್ಯಾಂಕ್ ಜೊತೆಗೆ ಸಮಾಲೋಚನೆ ನಡೆಸಿದೆ.
ವರದಿಗಳ ಪ್ರಕಾರ ಥರ್ಡ್ ಪಾರ್ಟಿ ಆ್ಯಪ್ ಪೂರೈಕೆದಾರರಿಗೆ (ಟಿಪಿಎಪಿ) ಶೇ.30ರಷ್ಟು ವಹಿವಾಟಿನ ಮಿತಿ ವಿಧಿಸುವಂತೆ ಎನ್ ಪಿಸಿಐ ನವೆಂಬರ್ ನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಡಿಜಿಟಲ್ ಪಾವತಿ ಆ್ಯಪ್ ವಲಯದಲ್ಲಿ ಗೂಗಲ್ ಪೇ ಹಾಗೂ ಫೋನ್ ಪೇ ಶೇ.80ರಷ್ಟು ಮಾರುಕಟ್ಟೆ ಪಾಲು ಹೊಂದಿವೆ. ಇಲ್ಲಿಯ ತನಕ ಡಿಜಿಟಲ್ ಪಾವತಿ ಆ್ಯಪ್ ಬಳಸಿ ಎಲ್ಲ ಕಡೆ ಪಾವತಿ ಮಾಡಿರೋರಿಗೆ ಮಿತಿ ಹೆಚ್ಚಳದಿಂದ ತೊಂದರೆಯಾಗಲಿದೆ.
ಡಿಜಿಟಲ್ ಪಾವತಿ ಆ್ಯಪ್ ವಹಿವಾಟುಗಳಿಗೆ ಗರಿಷ್ಠ ಮಿತಿ ವಿಧಿಸುವ ಸಂಬಂಧ ನಡೆದ ಸಭೆಯಲ್ಲಿ ಭಾರತದ ರಾಷ್ಟ್ರೀಯ ಪಾವತಿಗಳ ನಿಗಮ ಅಧಿಕಾರಿಗಳ ಜೊತೆಗೆ ಹಣಕಾಸು ಸಚಿವಾಲಯ ಹಾಗೂ ಆರ್ ಬಿಐ ಹಿರಿಯ ಅಧಿಕಾರಿಗಳು ಕೂಡ ಭಾಗವಹಿಸಿದ್ದರು. ಮಿತಿ ವಿಧಿಸುವ ಕುರಿತು ಸಭೆಯಲ್ಲಿ ಅಂತಿಮ ನಿರ್ಧಾರಕ್ಕೆ ಬಂದಿಲ್ಲ.
ಯುಪಿಐ ಪಾವತಿ ವ್ಯವಸ್ಥೆಗಳ ಮೇಲಿನ ಶುಲ್ಕಕ್ಕೆ ಸಂಬಂಧಿಸಿ ಆರ್ ಬಿಐ ಈ ವರ್ಷದ ಪ್ರಾರಂಭದಲ್ಲಿ ಸಮಾಲೋಚನ ವರದಿಯನ್ನು ಬಿಡುಗಡೆ ಮಾಡಿತ್ತು. ಆದರೆ, ಈ ವರದಿಗೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಯುಪಿಐ ಪಾವತಿ ವ್ಯವಸ್ಥೆ ಜನರಿಗೆ ಅನುಕೂಲರವಾಗಿದ್ದು, ಅದರ ಮೇಲೆ ಶುಲ್ಕ ವಿಧಿಸುವ ಯಾವುದೇ ಯೋಚನೆಗಳಿಲ್ಲ ಎಂದು ಕೇಂದ್ರ ಸರ್ಕಾರ ಆಗ ತಿಳಿಸಿತ್ತು.
ಡಿಸೆಂಬರ್ 31ರ ಬಳಿಕ ಗೂಗಲ್ ಪೇ, ಪೇಟಿಎಂ ಮುಂತಾದ ಡಿಜಿಟಲ್ ಆ್ಯಪ್ ವಹಿವಾಟುಗಳ ಮೇಲೆ ಮಿತಿ ಬೀಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಪೇಮೆಂಟ್ ಗೇಟ್ವೇ ಉದ್ಯಮದ ಪ್ರತಿನಿಧಿಗಳು ಇತ್ತೀಚೆಗೆ ನಡೆದ ಸಭೆಯಲ್ಲಿ ಪಾಲ್ಗೊಂಡಿರೋದ್ರಿಂದ ಈ ತಿಂಗಳ ಅಂತ್ಯದೊಳಗೆ ಎನ್ ಪಿಸಿಐ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz