nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರು: ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ 55 ವರ್ಷದ ಮಹಿಳೆಯ ಭೀಕರ ಕೊಲೆ

    January 15, 2026

    ಧಾರವಾಡ: ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಆತ್ಮಹತ್ಯೆ

    January 15, 2026

    ರಾಹುಲ್ ಗಾಂಧಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಡಿ: ಡಿ.ಕೆ.ಶಿವಕುಮಾರ್ ಸ್ಪಷ್ಟನೆ

    January 15, 2026
    Facebook Twitter Instagram
    ಟ್ರೆಂಡಿಂಗ್
    • ಬೆಂಗಳೂರು: ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ 55 ವರ್ಷದ ಮಹಿಳೆಯ ಭೀಕರ ಕೊಲೆ
    • ಧಾರವಾಡ: ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಆತ್ಮಹತ್ಯೆ
    • ರಾಹುಲ್ ಗಾಂಧಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಡಿ: ಡಿ.ಕೆ.ಶಿವಕುಮಾರ್ ಸ್ಪಷ್ಟನೆ
    • ಕೂಲಿ ಚಿತ್ರದ ಬಳಿಕ ಅಲ್ಲು ಅರ್ಜುನ್‍ಗೆ ಚಿತ್ರ ಕೈಗೆತ್ತಿಕೊಂಡ ಲೋಕೇಶ್ ಕನಕರಾಜು
    • ಮಾದೇನಹಳ್ಳಿ: ಮುಖ್ಯ ಶಿಕ್ಷಕಿ ಗುಣಶೀಲರವರಿಗೆ ಬೀಳ್ಕೊಡುಗೆ: ಸುಮಾರು 14 ವರ್ಷಗಳಿಂದ ಸೇವೆ
    • ಐಎಎಸ್ / ಕೆಎಎಸ್ ಪರೀಕ್ಷೆಗೆ ತರಬೇತಿ:  ಹೆಸರು ನೋಂದಾಯಿಸುವುದು ಹೇಗೆ?
    • ತುಮಕೂರು:  ಜ.16ರಂದು ಮಿನಿ ಉದ್ಯೋಗ ಮೇಳ
    • ಜ.22–25: ಚಿಕ್ಕಗೊಳ್ಳ ದೇವಾಲಯ ಕಳಸ ಸ್ಥಾಪನೋತ್ಸವ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವಾಸಿಸುವವನನ್ನೇ ಮನೆಯೊಡೆಯನನ್ನಾಗಿ ಮಾಡಿದ್ದು ನಾವು: ಸಿದ್ದರಾಮಯ್ಯ
    ರಾಜ್ಯ ಸುದ್ದಿ January 22, 2023

    ವಾಸಿಸುವವನನ್ನೇ ಮನೆಯೊಡೆಯನನ್ನಾಗಿ ಮಾಡಿದ್ದು ನಾವು: ಸಿದ್ದರಾಮಯ್ಯ

    By adminJanuary 22, 2023No Comments2 Mins Read
    siddaramaiha

    ಹಾಸನ: ನಾನು ಈ ಹಿಂದೆ ಅನೇಕ ಕಾರ್ಯಕ್ರಮಗಳಿಗೆ ಹಾಸನ ಜಿಲ್ಲೆಗೆ ಆಗಮಿಸಿದ್ದೆ, ಆದರೆ ಇಂದು ಜನರಲ್ಲಿರುವ ಉತ್ಸಾಹ ಈ ಹಿಂದೆ ಕಂಡಿರಲಿಲ್ಲ. ಇದನ್ನು ನೋಡಿದರೆ ಪೂರ್ವದಲ್ಲಿ ಸೂರ್ಯ ಉದಯಿಸುವುದು ಎಷ್ಟು ಸತ್ಯವೋ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ಗೊತ್ತಾಗುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

    ಹಾಸನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ಪಕ್ಷದ “ಪ್ರಜಾಧ್ವನಿ” ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು,  ರಾಜ್ಯದ ಬಿಜೆಪಿ ಸರ್ಕಾರ ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಈ ಸರ್ಕಾರ ನಾಡಿನ ಬಡವರು, ದಲಿತರು, ಮಹಿಳೆಯರು, ಮಕ್ಕಳು, ಅಲ್ಪಸಂಖ್ಯಾತರ ವಿರೋಧಿ ಸರ್ಕಾರ. ಹಾಸನ ಅತಿ ಹೆಚ್ಚು ರೈತರನ್ನು ಹೊಂದಿರುವ ಜಿಲ್ಲೆ. 2022ರ ಒಳಗಡೆ ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂದು 2016ರಲ್ಲಿ ನರೇಂದ್ರ ಮೋದಿ ಅವರು ರೈತರಲ್ಲಿ ಭ್ರಮೆಯನ್ನು ಹುಟ್ಟಿಸಿದ್ದರು. ಇದನ್ನು ಹೇಳುತ್ತ ಹೇಳುತ್ತಲೇ 3 ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದರು. ದೆಹಲಿಯ ಹೊರವಲಯದಲ್ಲಿ ದೇಶದ ರೈತರು ಅನೇಕ ದಿನಗಳ ಕಾಲ ಹೋರಾಟ ಮಾಡಿದರು, ಮೊದಮೊದಲು ಮೋದಿ ಅವರು ಕ್ಯಾರೇ ಎನ್ನಲಿಲ್ಲ, ಕೊನೆಗೆ ಹೋರಾಟದ ಕಾವು ಜಾಸ್ತಿಯಾದ ಮೇಲೆ ಬೇರೆ ದಾರಿಯಿಲ್ಲದೆ 3 ಮಾರಕ ಕಾಯ್ದೆಗಳನ್ನು ವಾಪಾಸು ಪಡೆದರು. ರಾಜ್ಯದಲ್ಲಿ ಕೂಡ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದರು, ದೇವರಾಜ ಅರಸು ಅವರ ಕಾಲದಲ್ಲಿ ಉಳುವವನೆ ಭೂಮಿಯ ಒಡೆಯ ಎಂದು ಮಾಡಿದ್ದರು, ಈ ಸರ್ಕಾರ ಭೂಸುಧಾರಣಾ ಕಾಯ್ದೆಯ ಸೆಕ್ಷನ್‌ 79(ಎ), (ಬಿ), (ಸಿ) ಗಳನ್ನು ತೆಗೆದುಹಾಕಿ ಉಳ್ಳವನನ್ನು ಭೂಒಡೆಯನನ್ನಾಗಿ ಮಾಡಿದ್ದಾರೆ. ಇದರಿಂದ ಸಣ್ಣ ಮತ್ತು ಮಧ್ಯಮ ಹಿಡುವಳಿ ಹೊಂದಿರುವ ರೈತರು ನಾಶವಾಗುತ್ತಿದ್ದಾರೆ ಎಂದರು.


    Provided by
    Provided by

    2018ರ ಪ್ರಣಾಳಿಕೆಯಲ್ಲಿ ಬಿಜೆಪಿ ತಾವು ಅಧಿಕಾರಕ್ಕೆ ಬಂದರೆ ಸಹಕಾರಿ ಸಂಘಗಳು ಮತ್ತು ಬ್ಯಾಂಕುಗಳಲ್ಲಿರುವ ರೈತರ 1 ಲಕ್ಷದ ವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಯಡಿಯೂರಪ್ಪ ಅಥವಾ ಬಸವರಾಜ ಬೊಮ್ಮಾಯಿ ಒಂದು ರೂಪಾಯಿ ಆದ್ರೂ ಸಾಲ ಮನ್ನಾ ಮಾಡಿದ್ದಾರ? ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ 78,000 ಕೋಟಿ ರೂ. ಮೊತ್ತದ ರೈತರ ಸಾಲವನ್ನು ಮನ್ನಾ ಮಾಡಿದ್ದರು. ಮೋದಿ ಅವರು ಪ್ರಧಾನಿಯಾಗಿ 9 ವರ್ಷವಾಗುತ್ತಾ ಬಂತು ಒಂದು ರೂಪಾಯಿಯಾದ್ರೂ ರೈತರ ಸಾಲ ಮನ್ನಾ ಮಾಡಿದ್ರಾ?

    ರೈತರ ಸಾಲಮನ್ನಾ ಮಾಡುತ್ತೇವೆ ಎಂಬ ಭರವಸೆಯನ್ನು ನೀಡದ ಹೊರತಾಗಿ ಕೂಡ ಬರಗಾಲ ಬಂದು ರೈತರು ಸಂಕಷ್ಟದಲ್ಲಿದ್ದಾರೆ ಎಂಬ ಕಾರಣಕ್ಕೆ ನಾನು ಮುಖ್ಯಮಂತ್ರಿಯಾಗಿರುವಾಗ ಸಹಕಾರಿ ಬ್ಯಾಂಕುಗಳಲ್ಲಿನ 22 ಲಕ್ಷದ 27 ಸಾವಿರ ರೈತರ 50,000 ರೂ. ವರೆಗಿನ ಒಟ್ಟು 8,165 ಕೋಟಿ ರೂ. ಸಾಲವನ್ನು ಮನ್ನಾ ಮಾಡಿದ್ದೆ ಎಂದರು.

    ಹಟ್ಟಿಗಳಲ್ಲಿ, ತಾಂಡಗಳಲ್ಲಿ, ಮಜರೆಗಳಲ್ಲಿ ವಾಸಮಾಡುವ ದಾಖಲೆ ರಹಿತ ಜನನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡುವ ಕಾನೂನನ್ನು ಜಾರಿ ಮಾಡಿದವರು ನಾವು. ದೇವರಾಜ ಅರಸು ಅವರ ರೀತಿಯಲ್ಲೆ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ವಾಸಿಸುವವನನ್ನೇ ಮನೆಯೊಡೆಯನನ್ನಾಗಿ ಮಾಡಿದ್ದು ನಾವು. ಅವರಿಗೆ ಈಗ ಹಕ್ಕುಪತ್ರ ಕೊಡಲು ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

    admin
    • Website

    Related Posts

    ಬೆಂಗಳೂರು: ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ 55 ವರ್ಷದ ಮಹಿಳೆಯ ಭೀಕರ ಕೊಲೆ

    January 15, 2026

    ಧಾರವಾಡ: ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಆತ್ಮಹತ್ಯೆ

    January 15, 2026

    ರಾಹುಲ್ ಗಾಂಧಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಡಿ: ಡಿ.ಕೆ.ಶಿವಕುಮಾರ್ ಸ್ಪಷ್ಟನೆ

    January 15, 2026

    Comments are closed.

    Our Picks

    ಶಬರಿಮಲೆಯಲ್ಲಿ ಇಂದು ಮಕರ ಜ್ಯೋತಿ ದರ್ಶನ: ಅಯ್ಯಪ್ಪನ ಕಣ್ತುಂಬಿಕೊಳ್ಳಲು ಭಕ್ತರ ಸಾಗರ, ಕ್ಷಣಗಣನೆ ಆರಂಭ

    January 14, 2026

    ಆರ್‌ ಸಿಬಿ ತಂಡದ ಆಟಗಾರನಿಗೆ ಪೋಕ್ಸೋ ಸಂಕಷ್ಟ: ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ

    December 25, 2025

    ಇಸ್ರೊ ಮೈಲಿಗಲ್ಲು: ಅತ್ಯಂತ ಭಾರವಾದ ಎಲ್‌ ವಿಎಂ3 ರಾಕೆಟ್ ಮೂಲಕ ‘ಬ್ಲೂಬರ್ಡ್’ ಉಪಗ್ರಹ ಉಡಾವಣೆ

    December 24, 2025

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಬೆಂಗಳೂರು: ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ 55 ವರ್ಷದ ಮಹಿಳೆಯ ಭೀಕರ ಕೊಲೆ

    January 15, 2026

    ಬೆಂಗಳೂರು: ಸಿಲಿಕಾನ್ ಸಿಟಿಯ ಜನನಿಬಿಡ ರಸ್ತೆಯೊಂದರಲ್ಲಿ ಭೀಕರ ಘಟನೆಯೊಂದು ಸಂಭವಿಸಿದ್ದು, 55 ವರ್ಷದ ಮಹಿಳೆಯನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಭೀಕರವಾಗಿ…

    ಧಾರವಾಡ: ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಆತ್ಮಹತ್ಯೆ

    January 15, 2026

    ರಾಹುಲ್ ಗಾಂಧಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಡಿ: ಡಿ.ಕೆ.ಶಿವಕುಮಾರ್ ಸ್ಪಷ್ಟನೆ

    January 15, 2026

    ಕೂಲಿ ಚಿತ್ರದ ಬಳಿಕ ಅಲ್ಲು ಅರ್ಜುನ್‍ಗೆ ಚಿತ್ರ ಕೈಗೆತ್ತಿಕೊಂಡ ಲೋಕೇಶ್ ಕನಕರಾಜು

    January 15, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.