ಹೂವಿನ ಹಡಗಲಿ: ವಿಜಯನಗರ ಜಿಲ್ಲೆ ಹೂವಿನ ಹಡಗಲಿಗೆ ಶ್ರೀ ವಿಶುದು ಸಾಗರ್ ಮುನಿ ಮಹಾರಾಜರ ನೇತೃತ್ವದ ಜೈನ ಮುನಿಗಳ ಪ್ರವೇಶ ಮಾಡಿತು.
ಈ ಸಂದರ್ಭದಲ್ಲಿ ಹೂವಿನ ಹಡಗಲಿ ಜೈನ ಬಾಂಧವರು ,ಬಾರಿ ಮಳೆ ನಡುವೆ ಮಹಿಳಾ ಸಂಘಟನೆಗಳು ಪೂರ್ಣ ಕುಂಭಗಳೊಂದಿಗೆ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು .ನಂತರ ಮುನಿಗಳು ಶ್ರೀ ಪಾರ್ಶ್ವನಾಥ ಜಿನ ಮಂದಿರಕ್ಕೆ ಭೇಟಿ ನೀಡಿ ತೀರ್ಥಂಕರರ ದರ್ಶನ ಪಡೆದರು. ಇದೇ ಸಂದರ್ಭದಲ್ಲಿ ಪೂಜಾ ಅಭಿಷೇಕ ,ಆರಾಧನೆ,ಕಾರ್ಯಕ್ರಮಗಳು ನೆರವೇರಿದವು.
ಈ ಸಂದರ್ಭದಲ್ಲಿ ವಿಶುದ್ಧ ಸಾಗರ್ ಮುನಿ ಮಹಾರಾಜರ ಮುನಿಗಳ ತಂಡದೊಂದಿಗೆ ಹೂವಿನ ಹಡಗಲಿಯ ಜೈನ ಬಾಂಧವರು, ನಾಂದಿನಿ ಮಠದ ಸ್ವಸ್ತಿ ಶ್ರೀ ಜಿನ ಸೇನಾ ಭಟ್ಟಾರಕ ಶ್ರೀಗಳು ಉಪಸ್ಥಿತರಿದ್ದರು .
ಈ ಕಾರ್ಯಕ್ರಮದಲ್ಲಿ ಶ್ರೀ ಪಾರ್ಶ್ವನಾಥ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಚ್.ಎಸ್. ಪ್ರಶಾಂತ್, ಪುರಸಭಾ ಸದಸ್ಯ ಹಾಗೂ ಮಹಾವೀರ ಬ್ಯಾಂಕ್ ನ ಉಪಾಧ್ಯಕ್ಷ ಮಂಜುನಾಥ ಜೈನ್, ಜೈನ ಸಮಾಜದ ಉಪಾಧ್ಯಕ್ಷ ವಿಜಯಕುಮಾರ್, ಜ್ವಾಲಾ ಮಾಲಿನಿ ಮಹಿಳಾ ಸಂಘದ ಅಧ್ಯಕ್ಷ ಎಂ.ಡಿ.ಪದ್ಮಾವತಿ ,ಉಪಾಧ್ಯಕ್ಷರಾಧಾ ಜಯಶ್ರೀ ಮಂಜುನಾಥ ಜೈನ್, ಕಾರ್ಯದರ್ಶಿ ಚಂಪಾರಾಯಪ್ಪ, ರೇವಡಿ ಪಾರ್ಶ್ವನಾಥ್, ಆರೋಗ್ಯ ಇಲಾಖೆಯ ರತ್ನಾಕರ ಜೈನ್, ಎಚ್.ಡಿ.ರಾಯಪ್ಪ, ಜೈನ್ ಮಿಲನ್ ಅಧ್ಯಕ್ಷರು ಸಂತೋಷ್ ಜೈನ್ ಭಾಗವಹಿಸಿದ್ದರು.
ವರದಿ: ಜೆ. ರಂಗನಾಥ ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296