ತುಮಕೂರು: ಗುಬ್ಬಿ ಪಟ್ಟಣದಲ್ಲಿ ರಾತ್ರಿ ಧಾರಾಕಾರ ಮಳೆಯಾಗಿದೆ. ಇದರ ಪರಿಣಾಮ ಗುಬ್ಬಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ನುಗ್ಗಿ ಮಳೆ ನೀರು ನುಗ್ಗಿದೆ.
ಆಸ್ಪತ್ರೆಯ ವಾರ್ಡ್ ಗೆ ಮಳೆ ನೀರು ನುಗ್ಗಿದ್ದು, ಆಸ್ಪತ್ರೆಯಲ್ಲಿ ರೋಗಿಗಳು ಪರದಾಡುವಂತಾಯಿತು. ಮಳೆ ನೀರು ನೆಲವನ್ನು ವ್ಯಾಪಿಸಿದ್ದರಿಂದ ರೋಗಿಗಳು ಬೆಡ್ ಮೇಲೆ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸರಿಸುಮಾರು 9 ಗಂಟೆಯಿಂದ ಶುರುವಾದ ಮಳೆ, ಒಂದೂವರೆ ಗಂಟೆಗಳ ಕಾಲ ಬಿಡದೇ ಸುರಿದಿದೆ. ಇದರಿಂದಾಗಿ ಮಧ್ಯರಾತ್ರಿವರೆಗೂ ರೋಗಿಗಳು ಪರದಾಡಿದರು.
ಆಸ್ಪತ್ರೆಯ ಕೆಳಹಂತಸ್ತಿನ ವಾರ್ಡ್ ಗಳಿಗೆ ಕೂಡ ಮಳೆ ನೀರು ನುಗ್ಗಿದ್ದು, ಆಸ್ಪತ್ರೆಯಲ್ಲಿ ರೋಗಿಗಳು ಮಾತ್ರವಲ್ಲ ಸಿಬ್ಬಂದಿಯೂ ಪರದಾಡುವಂತಾಗಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296