nammatumakuru

    Subscribe to Updates

    Get the latest creative news from FooBar about art, design and business.

    What's Hot

    ನಾನಾ ಪಾಟೇಕರ್ ಸಾವಿಗೆ ನಿಜ ಕಾರಣ ಏನು? ಮರಣೋತ್ತರ ಪರೀಕ್ಷೆ ವರದಿ ಬಯಲು!

    October 11, 2026

     CJP ನಾಯಕರ ವಶಕ್ಕೆ ಪುರುಷ ಪೋಲಿಸರ  ಮಹಿಳಾ ಪೊಲೀಸರ ಎಂಟ್ರಿ ಹಿಂದಿನ ಕಾರಣವೇನು?

    October 11, 2026

    ಬೀದರ್‌: ರಾಷ್ಟ್ರೀಯ ಭೀಮ್ ರಾಜ್ ಸೇನಾ ಅಧ್ಯಕ್ಷ ರಾಜೇಶ್‌ ಕಾಂಬ್ಳೆಗೆ ಸನ್ಮಾನ

    October 11, 2026
    Facebook Twitter Instagram
    ಟ್ರೆಂಡಿಂಗ್
    • ನಾನಾ ಪಾಟೇಕರ್ ಸಾವಿಗೆ ನಿಜ ಕಾರಣ ಏನು? ಮರಣೋತ್ತರ ಪರೀಕ್ಷೆ ವರದಿ ಬಯಲು!
    •  CJP ನಾಯಕರ ವಶಕ್ಕೆ ಪುರುಷ ಪೋಲಿಸರ  ಮಹಿಳಾ ಪೊಲೀಸರ ಎಂಟ್ರಿ ಹಿಂದಿನ ಕಾರಣವೇನು?
    • ಬೀದರ್‌: ರಾಷ್ಟ್ರೀಯ ಭೀಮ್ ರಾಜ್ ಸೇನಾ ಅಧ್ಯಕ್ಷ ರಾಜೇಶ್‌ ಕಾಂಬ್ಳೆಗೆ ಸನ್ಮಾನ
    • ಗೋಮಾಳ ಜಮೀನು ಅತಿಕ್ರಮಣ ಯತ್ನಕ್ಕೆ ಬಂಟರತಳಾಲು ಗ್ರಾಮಸ್ಥರ ತಡೆ: ಸ್ಥಳಕ್ಕೆ ಭೇಟಿ ನೀಡಿ ಕಂದಾಯ ನಿರೀಕ್ಷಕರ ಪರಿಶೀಲನೆ
    • ತುಮಕೂರು ದಸರಾ: ಇಂದು ಏನೇನು ಕಾರ್ಯಕ್ರಮ?
    • ಶ್ರೀ ಕಂಬಾಳು ಸಂಸ್ಥಾನ ಮಠದಲ್ಲಿ ವಿಜಯದಶಮಿ ಮಹೋತ್ಸವ: ಅ.11ರಿಂದ ಧಾರ್ಮಿಕ ಕೈಂಕರ್ಯಗಳು ಆರಂಭ
    • ಗಿಡಗಳಲ್ಲೂ ಗಂಡು, ಹೆಣ್ಣು ಇವೆಯೇ? ಯಾವ ಮರ ಹಣ್ಣು ಬಿಡುತ್ತದೆ, ಹೇಗೆ ಗುರುತಿಸಬೇಕು?
    • ನವರಾತ್ರಿ ಸಂಭ್ರಮ ಆರಂಭ: ದಿನಕ್ಕೊಂದು ಬಣ್ಣಕ್ಕಿರುವ ವಿಶೇಷ ಅರ್ಥವೇನು ?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಎತ್ತಿನಹೊಳೆ ಯೋಜನೆಯಡಿ ಕೊರಟಗೆರೆಯ 62 ಕೆರೆಗಳಿಗೆ ನೀರು |  ಐತಿಹಾಸಿಕ ಕಾರ್ಯಕ್ರಮಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರಿಂದ ವಿದ್ಯುಕ್ತ ಚಾಲನೆ
    ಕೊರಟಗೆರೆ April 20, 2025

    ಎತ್ತಿನಹೊಳೆ ಯೋಜನೆಯಡಿ ಕೊರಟಗೆರೆಯ 62 ಕೆರೆಗಳಿಗೆ ನೀರು |  ಐತಿಹಾಸಿಕ ಕಾರ್ಯಕ್ರಮಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರಿಂದ ವಿದ್ಯುಕ್ತ ಚಾಲನೆ

    By adminApril 20, 2025No Comments2 Mins Read
    koratagere

    ಕೊರಟಗೆರೆ : ಕೊರಟಗೆರೆ ತಾಲೂಕಿನ 62 ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಸುವ ಕಾಮಗಾರಿಗಳ ಚಾಲನೆ ತಾಲ್ಲೂಕಿನ ಇತಿಹಾಸ ಪುಟ ಸೇರಿದೆ ಎಂದು ಗೃಹ  ಸಚಿವ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

    ಕೊರಟಗೆರೆ ತಾಲ್ಲೂಕಿನ ಸುಪ್ರಸಿದ್ದ ಯಾತ್ರಾಸ್ಥಳ ಗೊರವನಹಳ್ಳಿಯಲ್ಲಿ ಸುಮಾರು 453 ಕೋಟಿ ರೂಗಳ ಕಾಮಗಾರಿಗಳ ಉದ್ಘಾಟನೆ ಶಂಕುಸ್ಥಾಪನೆಗಳನ್ನು ನೆರವೇರಿಸಿ ಮಾತನಾಡಿ, 2008 ರಲ್ಲಿ ನಾನು ಕೊರಟಗೆರೆ ಕ್ಷೇತ್ರಕ್ಕೆ ಚುನಾವಣೆಗೆ ಬಂದಾಗ ಕೊಡ್ಲಹಳ್ಳಿಯ ಒಬ್ಬ ರೈತ ಮಹಿಳೆ ನನ್ನನ್ನು ಈ ಭಾಗಕ್ಕೆ ನೀರು ಹರಿಸುವಂತೆ ಕೋರಿದ್ದರು. ನಾನು ಅಂದು ಆಕೆಗೆ ಮಾತು ನೀಡಿ ಚುನಾವಣೆಯಲ್ಲಿ ಗೆದ್ದಾಗ ಸರ್ಕಾರ ಬರಲ್ಲಿಲ್ಲ, 2013ರಲ್ಲಿ ನಾನು ಈ ಕ್ಷೇತ್ರದಲ್ಲಿ ಸೋತೆ ಸರ್ಕಾರ ಬಂತು ಆದರೆ ನಾನು ಸರ್ಕಾರದ ಭಾಗವಾಗಲ್ಲಿಲ್ಲ, ಆದರೂ ಎರಡು ವರ್ಷವಾದ ನಂತರ ನಾನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಈ ಭಾಗದ ಜನರಿಗೆ ಎತ್ತಿನಹೊಳೆ ಯೋಜನೆಯನ್ನು ರೂಪಿಸಿ 6,500 ಸಾವಿರ ಕೋಟಿ ಮಂಜೂರು ಮಾಡಿಸಲಾಯಿತು ಎಂದರು.

    2023 ರಲ್ಲಿ ನಮ್ಮ ಸರ್ಕಾರ ಬಂದ ಮೇಲೆ ಎತ್ತಿನಹೊಳೆ ಯೊಜನೆಗೆ ಬದ್ದರಾಗಿದ್ದು 24 ಟಿ.ಎಂ.ಸಿ ನೀರಿನ ಈ ಯೋಜನೆಯಲ್ಲಿ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ  ಭಾಗದ ಜನರಿಗೆ ನೀರು ಹರಿಸಲಾಗುತ್ತದೆ, ಈ ಬಾರಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿ ಎತ್ತಿನಹೊಳೆ ಯೋಜನೆಯಲ್ಲಿ ಕೊರಟಗೆರೆ ತಾಲ್ಲೂಕಿನ 62 ಕೆರೆಗಳು ಮಧುಗಿರಿ ತಾಲ್ಲೂಕಿನ 48 ಕೆರೆಗಳಿಗೆ ನೀರು ಹರಿಸಲು ತಲಾ 285 ಕೋಟಿ ಮತ್ತು 280 ಕೋಟಿ ರೂಗಳನ್ನು ಸಣ್ಣ ನೀರಾವರಿ ಇಲಾಖೆಗೆ ಮಂಜೂರು ಮಾಡಿದ್ದು ಇದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಮತ್ತು ಇದನ್ನು ಉದ್ಘಾಟಿಸಿದ ಸಣ್ಣ ನೀರಾವರಿ ಸಚಿವರ ಬೋಸರಾಜುಗೆ ಧನ್ಯವಾದ ತಿಳಿಸಿದರು.

    ಕೊರಟಗೆರೆ ತಾಲ್ಲೂಕು ಕ್ಷೇತ್ರದ ಪುರವಾರ ಹೋಬಳಿಯ 8 ಕೆರೆಗಳಿಗೆ ನೀರು ಹರಿಯಲಿದ್ದು ಕೋರ ಹೊಬಳಿಯ ಬೆಳ್ಳಾವಿ-ಕೋರ ಲೈನ್ ಯೋಜನೆಯಲ್ಲಿ 36 ಕೆರೆಗಳಿಗೆ ನೀರು ಹರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಅದನ್ನು ಶೀಘ್ರವಾಗಿ ಮಂಜೂರು ಮಾಡಿಸಲಾಗುವುದು. ಕೊರಟಗೆರೆ 62 ಕೆರೆಗಳಿಗೆ ನೀರು ಹರಿಸಲು ಈ ಯೋಜನೆಯಲ್ಲಿ 826 ಎಂಸಿಎಪ್‍ಟಿ ನೀರನ್ನು ಅಲೋಕೇಷನ್ ಮಾಡಿಕೊಳ್ಳಲಾಗಿದ್ದು ನೀರಾವರಿ ಯೋಜನೆ ಸರ್ಕಾರದ ಅದ್ಯತೆ ಎಂದರು.

    ಸಣ್ಣ ನೀರಾವರಿ ಸಚಿವ ಬೋಸರಾಜು ಮಾತನಾಡಿ, ಡಾ.ಜಿ.ಪರಮೇಶ್ವರಗೆ ಗೃಹ ಇಲಾಖೆ ಬಹಳ ದೊಡ್ಡ ಜವಾಬ್ದಾರಿ ಇಲಾಖೆಯಾಗಿದೆ, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಹಳ ನಂಬಿಕೆ ಇಟ್ಟು ಈ ಜವಾಬ್ದಾರಿಯನ್ನು ಡಾ.ಜಿ.ಪರಮೇಶ್ವರರಿಗೆ ಒಪ್ಪಿಸಿ ನೀಡಿದ್ದಾರೆ ಈ ಜಿಲ್ಲೆಗೆ ಸಾವಿರಾರು ಕೋಟಿ ಅನುಧಾನ ತಂದಿದ್ದಾರೆ ನನ್ನ ಇಲಾಖೆಯ 288 ಕೋಟಿ ವಿಶೇಷ ಹಣ ಡಾ.ಜಿ.ಪರಮೇಶ್ವರ ಶ್ರಮವಹಿಸಿ ಮಂಜೂರು ಮಾಡಿದ್ದಾರೆ, ಈ ಭಾಗದಲ್ಲಿ ಅಂತರಜಲ ಕಡಿಮೆ ಇದ್ದು 800 ರಿಂದ 1000 ಅಡಿಗಳ ಅವರಿಗೆ ಕೊಳವೆಬಾವಿಗೆ ನೀರು ಸಿಗಬಹುದಾದ ಪರಿಸ್ಥಿತಿಯಲ್ಲಿ 62 ಕೆರೆಗಳಿಗೆ ನೀರು ಹರಿಯುವುದರಿಂದ ಅಂತರಜಲ ಸಂಪೂರ್ಣ ವೃದಿಯಾಗುತ್ತದೆ ಇದರೊಂದಿಗೆ ಗೃಹ ಸಚಿವರು ನನ್ನ ಇಲಾಖೆಯಿಂದ 86 ಹೆಚ್ಚುವರಿಯಾಗಿ ಕೊಳವೆ ಬಾವಿಯನ್ನು ಮಂಜೂರು ಮಾಡಿಸಿಕೊಂಡಿದ್ದಾರೆ ಈ ರಾಜ್ಯದಲ್ಲಿ ಮುಖ್ಯಮತ್ರಿಗಳ ನಂಬಿಗಸ್ಥರಲ್ಲಿ ಡಾ.ಜಿ.ಪರಮೇಶ್ವರ ಮೊದಲಿಗರು ಎಂದರು.

    ಕಾರ್ಯಕ್ರಮದಲ್ಲಿ ಶಾಸಕ ಮತ್ತು ತುಮುಲ್ ಅದ್ಯಕ್ಷ ವೆಂಕಟೇಶ್, ಸಣ್ಣ ನೀರಾವರಿ ಕಾರ್ಯದರ್ಶಿ ರಾಘವನ್, ಮುಖ್ಯಇಂಜಿಯರ್ ಹರಿಪ್ರಕಾಶ್, ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಪೋಲೀಸ್ ವರಿಷ್ಠಾಧಿಕಾರಿ ಅಶೋಕ್, ಅಪಾರ ಜಿಲ್ಲಾಧಿಕಾರಿ ತಿಪ್ಪೆಸ್ವಾಮಿ, ಮೂಡ್ಲಗಿರಿ, ಜಿಲ್ಲಾ ಗ್ಯಾರೆಂಟಿ ಸಮಿತಿ ಅಧ್ಯಕ್ಷ ಚಂದ್ರಶೇಖರಗೌಡ, ಉಪವಿಭಾಗಾಧಿಕಾರಿ ಘೋಟೂರು ಶಿವಪ್ಪ, ತಹಶೀಲ್ದಾರ್ ಮಂಜುನಾಥ್, ಇಓ ಅಪೂರ್ವ, ನೀರಾವರಿ ಅದೀಕ್ಷಕ ಸಂಜೀವರಾಯಪ್ಪ, ತಿಪ್ಪೇಸ್ವಾಮಿ, ರಮೇಶ್, ಸೇರಿದಂತೆ ಇತರರು ಹಾಜರಿದ್ದರು.

    ವರದಿ : ಮಂಜುಸ್ವಾಮಿ ಎಂ.ಎನ್., ಕೊರಟಗೆರೆ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

    admin
    • Website

    Related Posts

    ಹೈನುಗಾರಿಕೆ ಪ್ರೋತ್ಸಾಹಿಸಲು ರೈತರಿಗೆ ಉಚಿತ ಮೇವಿನ ಬೀಜ ವಿತರಣೆ

    October 4, 2026

    ಹೈನುಗಾರಿಕೆ ಪ್ರೋತ್ಸಾಹಿಸಲು ರೈತರಿಗೆ ಉಚಿತ ಮೇವಿನ ಬೀಜ ವಿತರಣೆ: ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು ಪಶುಪಾಲನಾ ಇಲಾಖೆಯಿಂದ ರೈತಸ್ನೇಹಿ ಹೆಜ್ಜೆ

    October 3, 2026

    ಗಾಂಧಿ ಜಯಂತಿ ಪ್ರಯುಕ್ತ ಶ್ರೀಕ್ಷೇತ್ರ ಸಿದ್ದರಬೆಟ್ಟದಲ್ಲಿ ಸ್ವಚ್ಛತಾ ಆಂದೋಲನ

    October 2, 2026

    Comments are closed.

    Our Picks

    ನಾನಾ ಪಾಟೇಕರ್ ಸಾವಿಗೆ ನಿಜ ಕಾರಣ ಏನು? ಮರಣೋತ್ತರ ಪರೀಕ್ಷೆ ವರದಿ ಬಯಲು!

    October 11, 2026

     CJP ನಾಯಕರ ವಶಕ್ಕೆ ಪುರುಷ ಪೋಲಿಸರ  ಮಹಿಳಾ ಪೊಲೀಸರ ಎಂಟ್ರಿ ಹಿಂದಿನ ಕಾರಣವೇನು?

    October 11, 2026

    ಬೀದರ್‌: ರಾಷ್ಟ್ರೀಯ ಭೀಮ್ ರಾಜ್ ಸೇನಾ ಅಧ್ಯಕ್ಷ ರಾಜೇಶ್‌ ಕಾಂಬ್ಳೆಗೆ ಸನ್ಮಾನ

    October 11, 2026

    ಮಧ್ಯರಾತ್ರಿ ನಾನಾ ಪಾಟೇಕರ್ ಅಂತ್ಯಸಂಸ್ಕಾರ; ತಡವಾಗಿದ್ದೇಕೆ? ಮಗ ಮಲ್ಹಾರ್ ನೀಡಿದ ಸ್ಪಷ್ಟನೆ ಇಲ್ಲಿದೆ

    October 10, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ನಾನಾ ಪಾಟೇಕರ್ ಸಾವಿಗೆ ನಿಜ ಕಾರಣ ಏನು? ಮರಣೋತ್ತರ ಪರೀಕ್ಷೆ ವರದಿ ಬಯಲು!

    October 11, 2026

    ಭಾರತೀಯ ಚಿತ್ರರಂಗದ ಹಿರಿಯ ನಟ ನಾನಾ ಪಾಟೇಕರ್ (75) ಅವರ ನಿಧನಕ್ಕೆ ತೀವ್ರ ಹೃದಯಾಘಾತವೇ ಕಾರಣ ಎಂದು ಮರಣೋತ್ತರ ಪರೀಕ್ಷೆಯ…

     CJP ನಾಯಕರ ವಶಕ್ಕೆ ಪುರುಷ ಪೋಲಿಸರ  ಮಹಿಳಾ ಪೊಲೀಸರ ಎಂಟ್ರಿ ಹಿಂದಿನ ಕಾರಣವೇನು?

    October 11, 2026

    ಬೀದರ್‌: ರಾಷ್ಟ್ರೀಯ ಭೀಮ್ ರಾಜ್ ಸೇನಾ ಅಧ್ಯಕ್ಷ ರಾಜೇಶ್‌ ಕಾಂಬ್ಳೆಗೆ ಸನ್ಮಾನ

    October 11, 2026

    ಗೋಮಾಳ ಜಮೀನು ಅತಿಕ್ರಮಣ ಯತ್ನಕ್ಕೆ ಬಂಟರತಳಾಲು ಗ್ರಾಮಸ್ಥರ ತಡೆ: ಸ್ಥಳಕ್ಕೆ ಭೇಟಿ ನೀಡಿ ಕಂದಾಯ ನಿರೀಕ್ಷಕರ ಪರಿಶೀಲನೆ

    October 11, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.