ಬೆಂಗಳೂರು: ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಲಿದ್ದೇವೆ. ಅಗತ್ಯಬಿದ್ದರೆ ಸುಮಲತಾ ಅಂಬರೀಷ್ ಜೊತೆಗೆ ಮಾತನಾಡಲು ಸಿದ್ಧ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್.ಡಿ. ಕುಮಾರಸ್ವಾಮಿ ನಾರಾಯಣಗೌಡರ ಮನವೊಲಿಸಿದ್ದಾರೆ, ಅವರು ನಮ್ಮ ಪಕ್ಷದಿಂದಲೇ ಶಾಸಕರಾಗಿದ್ದರು ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿದ್ದವು ಈಗ ಎಲ್ಲ ಸರಿ ಹೋಗಿದೆ. ವೈಯಕ್ತಿಕವಾಗಿ ಹೆಚ್ ಡಿಕೆ ಮೇಲೆ ನಾರಾಯಣಗೌಡರಿಗೆ ಗೌರವ ಇದೆ, ಕುಮಾರಸ್ವಾಮಿ ಪರ ಕೆಲಸ ಮಾಡುತ್ತೇನೆ ಎಂದಿದ್ದಾರೆ ಎಂದು ನಿಖಿಲ್ ಹೇಳಿದರು.
ನಮಗೆ ಆರೋಗ್ಯಕರ ಚುನಾವಣೆ ಬೇಕು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಲುತ್ತೇವೆ. ಅಗತ್ಯ ಬಿದ್ದರೆ ಸುಮಲತಾ ಅಂಬರೀಷ್ ಜೊತೆಗೆ ಮಾತನಾಡಲು ಸಿದ್ಧರಿದ್ದೇವೆ ಎಂದು ಹೇಳುವ ಮೂಲಕ, ಎಲ್ಲಾ ಭಿನ್ನಾಭಿಪ್ರಾಯಗಳನ್ನೂ ತಿಳಿಗೊಳಿಸಿ ಒಟ್ಟಾಗಿ ಕೆಲಸ ಮಾಡಲು ಸಿದ್ಧ ಎಂದು ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296