ರಾಯಚೂರು: ರಾತ್ರಿ ವೇಳೆ ರಸ್ತೆಗಳಲ್ಲಿ ಸುತ್ತಾಡುವ ಬೀಡಾಡಿ ದನಗಳಿಂದ ವಾಹನ ಅಪಘಾತ ತಡೆಯುವ ಉದ್ದೇಶದಿಂದ, ದನಗಳ ಕುತ್ತಿಗೆಗೆ ಹೊಳೆಯುವ ರೇಡಿಯಂ ಬೆಲ್ಟ್ ಧಾರಣೆ ಮಾಡಲು ರಾಷ್ಟ್ರೀಯ ಗೋ ರಕ್ಷಾ ವಾಹಿನಿ ಮತ್ತು ಗೋ ಸೇವಾ ಸಂಘದ ತಂಡ ಮುಂದಾಗಿದೆ.
ನಗರದಲ್ಲಿ ಸಂಚರಿಸುವ ಹಸು ಮತ್ತು ಕರುಗಳಿಗೆ ರೇಡಿಯಂ ಬೆಲ್ಟ್ ಅಳವಡಿಸುತ್ತಿದ್ದು, ರಾತ್ರಿ ವೇಳೆ ಅನೇಕ ಕಡೆಗಳಲ್ಲಿ ಗೋವುಗಳು ವಾಹನ ಅಪಘಾತ ಸಂಭವಿಸಿ ಶಾಶ್ವತ ಅಂಗವೈಕಲ್ಯ ಅಥವಾ ಮೃತಪಡುವುದನ್ನು ಮನಗೊಂಡು ಗೋವುಗಳಿಗೆ ಬೆಲ್ಟ್ ಅಳವಡಿಸುತ್ತಿರುವುದು ಗಮನ ಸೆಳೆದಿದೆ.
ಸಂಕ್ರಾಂತಿಯ ಸುಗ್ಗಿ ಸಂದರ್ಭದಲ್ಲಿ ಬೆಲ್ಟ್ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ವಾಸವಿ ನಗರದಲ್ಲಿ ಗೋವುಗಳಿಗೆ ಬೆಲ್ಟ್ ಅಳವಡಿಸುವ ಕಾರ್ಯಕ್ಕೆ ಯುವಕರು ಮುಂದಾಗಿದ್ದಾರೆ. ಇವರಿಗೆ ರಾಷ್ಟ್ರೀಯ ಗೋರಕ್ಷಾ ವಾಹಿನಿ, ಜೈ ಕಲ್ಯಾಣ ಕರ್ನಾಟಕ ಜನ ಜಾಗೃತಿ ಸೇವಾ ಸಂಘದ ಸದಸ್ಯರು ಸಾಥ್ ನೀಡುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx