ಬಿಗ್ ಬಾಸ್ ತೊರೆಯುವ ಬಗ್ಗೆ ಕಿಚ್ಚ ಸುದೀಪ್ ಎರಡು ಬಾರಿ ಟ್ವೀಟ್ ಮಾಡಿದ್ದರು. ಹೀಗಾಗಿ ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಗ್ರ್ಯಾಂಡ್ ಫಿನಾಲೆ ವೇದಿಕೆಯ ಮೇಲೆ ತಮ್ಮ ವಿದಾಯವನ್ನು ಅವರು ಹೇಳುತ್ತಾರೆ ಎಂದು ಜನ ನಿರೀಕ್ಷಿಸಿದ್ದರು.
ಆದರೆ ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ, ಆದರೆ, ಕಲರ್ಸ್ ಕನ್ನಡಕ್ಕೆ ಹಾಗೂ ಮುಂದೆ ಬರುವ ಬಿಗ್ ಬಾಸ್ ಸೀಸನ್ ಗಳನ್ನು ಬೆಂಬಲಿಸುವಂತೆ ಕಿಚ್ಚ ಸುದೀಪ್ ಕೋರಿದ್ದಾರೆ.
ಸುದೀಪ್ ಅವರು ಬಿಗ್ ಬಾಸ್ ಪೂರ್ಣಗೊಳ್ಳುವಾಗ ಎಲ್ಲರಿಗೂ ಧನ್ಯಾವಾದ ಹೇಳಿದ್ದಾರೆ. ತಮ್ಮ ಸಹಾಯಕ್ಕೆ ನಿಂತವರಿಗೆ ಹಾಗೂ ಶೋನ ಉತ್ತಮವಾಗಿ ಮೂಡಿ ಬರಲು ಕಾರಣ ಆದವರಿಗೆ ಸುದೀಪ್ ಧನ್ಯವಾದ ಹೇಳಿದರು.
119 ದಿನಗಳ ಜರ್ನಿಗೆ ಪೂರ್ಣ ವಿರಾಮ ಹಾಕುವ ಸಮಯ. ನನ್ನ ಸ್ಟಾಫ್ ಗೆ ಧನ್ಯವಾದ. ಡಿಸೈನರ್ ಸಾಗರ್ ಗೆ ಥ್ಯಾಂಕ್ಸ್ ಎಂದು ಕಿಚ್ಚ ಹೇಳಿದರು.
ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಬಿಟ್ಟರೆ ಬೇರೆ ಯಾರೂ ಸೂಕ್ತವಾಗಲು ಸಾಧ್ಯವಿಲ್ಲ, ಹಾಗಾಗಿ ಮುಂದಿನ ವರ್ಷವೂ ಸುದೀಪ್ ಅವರೇ ಬರಲಿ ಎನ್ನುವುದು ಬಿಗ್ ಬಾಸ್ ವೀಕ್ಷಕರ ಮನವಿಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx