ನವದೆಹಲಿ: ಎನ್ ಸಿಪಿ ಹಿರಿಯ ಮುಖಂಡ ಬಾಬಾ ಸಿದ್ದಿಕಿ ಹತ್ಯೆಯ ಪ್ರಮುಖ ಆರೋಪಿ ಕುಮಾರ್ ಗೌತಮ್, ಬಾಬಾ ಸಿದ್ದಿಕಿ ಮೇಲೆ ಗುಂಡು ಹಾರಿಸಿದ ಬಳಿಕ, ದಾಳಿಯಲ್ಲಿ ಸಿದ್ದಿಕಿ ಬದುಕಿದ್ದಾರಾ, ಅಥವಾ ಸಾವಿಗೀಡಾಗಿದ್ದಾರಾ ಎಂದು ದೃಢಪಡಿಸಿಕೊಳ್ಳಲು ಆಸ್ಪತ್ರೆಯ ಹೊರಗೆ ನಿಂತಿದ್ದ ಎನ್ನುವುದನ್ನು ಇದೀಗ ಆರೋಪಿಯೇ ಬಹಿರಂಗಪಡಿಸಿದ್ದಾನೆ.
ಗುಂಡಿನ ದಾಳಿಯ ನಂತರ, ತಾನು ಬೇಗನೆ ತನ್ನ ಅಂಗಿಯನ್ನು ಬದಲಾಯಿಸಿ ಆಸ್ಪತ್ರೆಯ ಹೊರಗೆ ಜನಸಮೂಹದ ನಡುವೆ 30 ನಿಮಿಷಗಳ ಕಾಲ ನಿಂತಿದ್ದೆ ಎಂದಿರುವ ಶೂಟರ್, ಬಾಬಾ ಸಿದ್ದಿಕಿಯ ಮೇಲೆ ದಾಳಿಯ ನಂತರ ಲೀಲಾವತಿ ಆಸ್ಪತ್ರೆಯ ಹೊರಗೆ ನಿಂತಿದ್ದಾಗಿ ಹೇಳಿಕೊಂಡಿದ್ದಾನೆ.
ಸಿದ್ದಿಕಿಯ ಸ್ಥಿತಿ ಗಂಭೀರವಾಗಿದೆ ಎನ್ನುವುದು ತಿಳಿಯುತ್ತಿದ್ದಂತೆಯೇ ಸ್ಥಳದಿಂದ ತೆರಳಿದ್ದನಂತೆ.
ಅಕ್ಟೋಬರ್ 12 ರಂದು ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಮೂವರು ದುಷ್ಕರ್ಮಿಗಳು ಬಾಬಾ ಸಿದ್ದಿಕಿಯನ್ನು ಗುಂಡಿಕ್ಕಿ ಕೊಂದಿದ್ದರು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ಕೊಲೆಯ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q