ಶಿವನಿಗೆ ಸೋಮವಾರದ ವಿಶೇಷ ಪೂಜೆ ಅರ್ಪಿಸುವುದನ್ನು ನೀವು ಕೇಳಿರುತ್ತೀರಿ. ಆದರೆ, ಸೋಮವಾರವೇ ಯಾಕೆ ಶಿವನಿಗೆ ಪೂಜೆ ಸಲ್ಲಿಸುತ್ತಾರೆ ಅನ್ನೋದು ಸಾಕಷ್ಟು ಜನರಿಗೆ ತಿಳಿದೇ ಇಲ್ಲ. ಎಲ್ಲ ದಿನಗಳೂ ಭಕ್ತಿಗೆ, ಆರಾಧನೆಗೆ ಪವಿತ್ರವಾದುದ್ದೇ ಆದರೂ ಸೋಮವಾರದ ವಿಶೇಷ ಪೂಜೆ ಶಿವನಿಗೆ ಪ್ರಿಯವಾದದ್ದು ಎನ್ನುವುದನ್ನು ತಿಳಿಯೋಣ…
ಸೋಮವಾರ ಶಿವನಿಗೆ ವಿಶೇಷ ಯಾಕಂದ್ರೆ, ಶಿವನ ಹೆಸರಿನಲ್ಲೇ ಆ ದಿನದ ಗುಟ್ಟು ಇದೆ. ಸೋಮ ಅಂದ್ರೆ ಚಂದ್ರ ಎಂದು ಅರ್ಥ. ಇನ್ನೊಂದು ಅರ್ಥ ಶಾಂತ ಎನ್ನುವ ಸ್ವಭಾವವನ್ನು ಸಂಕೇತಿಸುತ್ತದೆ. ಶಿವನನನ್ನು ಪಡೆಯಲು ಪಾರ್ವತಿಯು 16 ಸೋಮವಾರಗಳ ಕಠಿಣ ತಪಸ್ಸು ಮಾಡಿದಳಂತೆ. ಇದರಿಂದಾಗಿ ಶಿವನು ಪಾರ್ವತಿಯ ತಪಸ್ಸಿಗೆ ಮೆಚ್ಚಿ, ಆಕೆಯನ್ನು ಪತ್ನಿಯಾಗಿ ಸ್ವೀಕರಿಸಿದ್ದನಂತೆ ಎನ್ನುವುದು ಒಂದು ಕಥೆಯಾಗಿದೆ.
ಅಂದಿನಿಂದ ಇಂದಿನ ವರೆಗೂ ಸೋಮವಾರದಂದು ಉಪವಾಸವನ್ನು ಆಚರಿಸಿದರೆ ಶಿವ ಒಲಿಯುತ್ತಾನೆ ಎನ್ನುವ ನಂಬಿಕೆ ಬೆಳೆದುಕೊಂಡು ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx