ಬೀದರ್: ಕೇಂದ್ರ ಸರ್ಕಾರದ ಎಲ್ಲಾ ಇಲಾಖೆ ಕೈಯಲ್ಲಿ ಇಟ್ಟುಕೊಂಡು ಕಾಂಗ್ರೆಸ್ ನಾಯಕರನ್ನು ಹೆದರಿಸುವ ಕೆಲಸ ಮಾಡುತ್ತಾರೆ, ರಾಹುಲ್ ಗಾಂಧಿಯವರಿಗೆ ಸಿಐಡಿ ನೋಟಿಸ್ ನೀಡಿದ್ದಾರೆ, ಕೆಂದ್ರ ಸರಕಾರ ಸಿಐಡಿ, ಸಿಬಿಐ, ಇನ್ ಕಮ್ ಟ್ಯಾಕ್ಸ್ ಇಲಾಖೆ ದುರುಪಯೋಗ ಮಾಡಿಕೊಂಡು ನಮ್ಮನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಕೇಂದ್ರದ ಬಿಜೆಪಿ ಸರ್ಕಾರದವರು ಮಾನನಷ್ಟ ಮೊಕದ್ದಮೆ ಹಾಕುತ್ತಾರೆ, ನೋಟಿಸ್ ಕೊಡುತ್ತಾರೆ. ಎಲ್ಲವನ್ನ ಎದುರಿಸಲಿಕೆ ನಾವು ತಯಾರಿದ್ದೆವೆ, ಇಂತಹ ಧಮ್ಕಿಯಿಂದ ನಾವು ಹೆದರಲ್ಲ ಎಂದು ಅವರು ಹೇಳಿದರು.
ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶ ಸಿಎಂ ಬಿಜೆಪಿ ಸೇರ್ಪಡೆಗೆ ಸಿದ್ದತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಎಲ್ಲರನ್ನೂ ಹೆದರಿಸಿ ಎಲ್ಲರಿಗೂ ಇಡಿ ಧಮ್ಕಿ ಕೊಟ್ಟು, ಐಟಿ, ಸಿಬಿಸಿ ಸೇರಿದಂತೆ ಎಲ್ಲ ಏಜೆನ್ಸಿಗಳಿಗೆ ದುರುಪಯೋಗ ಮಾಡಿಕೊಂಡು ಬಿಜೆಪಿಯವರು ಮುಖಂಡರನ್ನು ಸೆಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಯಾರಿಲ್ಲಿ ಕರಪ್ಟ್ ಇದ್ರೊ, ಅವರು ಅಲ್ಲಿ ಹೋದ ಬಳಿಕ ಒಳ್ಳೆಯವರು ಆಗುತ್ತಾರಾ? ಅವರು ಕರಪ್ಟ್ ಇದಾರಂತ ನೀವು ಕೇಸ್ ಹಾಕ್ತಿರಾ? ನೀವು ಪಾರ್ಟಿ ಜಾಯನ್ ಮಾಡಿಸಿಕೊಳ್ಳುತ್ತಿರಿ, ನಿಮ್ಮಲ್ಲಿ ಬಂದ ಮೇಲೆ ಅವರು ಸ್ವಚ್ಛ ಆದ್ರಾ,..? ಎಂದು ಖರ್ಗೆ ಪ್ರಶ್ನಿಸಿದರು.
ವರದಿ: ಅರವಿಂದ ಮಲ್ಲಿಗೆ, ಬೀದರ್