ಗುಬ್ಬಿ: ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಬಸವಾದಿ ಶಿವಶರಣರ ವತಿಯಿಂದ ಮೇ 25ರಂದು ಪಟ್ಟಣದಲ್ಲಿ ಬಸವ ಜಯಂತಿ ಆಯೋಜನೆ ಮಾಡಿದೆ ಎಂದು ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತಾಲೂಕು ವೀರಶೈವ ಲಿಂಗಾಯತ ಸಮುದಾಯದ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಎಸ್. ಡಿ. ದಿಲೀಪ್ ಕುಮಾರ್, ತಿಪಟೂರು ಸಿದ್ಧಲಿಂಗ ಸ್ವಾಮಿ, ಶಿವಕುಮಾರ್, ಸಂಗಪ್ಪ ತಿಳಿಸಿದರು.
ಅಂದು ಬೆಳಗ್ಗೆ 6 ಗಂಟೆಗೆ ಶ್ರೀ ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಇಷ್ಟಲಿಂಗ ಪೂಜೆ ಏರ್ಪಡಿಸಲಾಗಿದೆ. ನಂತರ ಬೆಳಗ್ಗೆ 9.30ಕ್ಕೆ ಪಟ್ಟಣದ ಶ್ರೀ ಚನ್ನಬಸವೇಶ್ವರ ದೇವಾಲಯ ಆವರಣದಿಂದ ಹೇರೂರು ಶ್ರೀ ಸಿದ್ಧರಾಮೇಶ್ವರ ಸಮುದಾಯ ಭವನದವರೆಗೆ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಮೆರವಣಿಗೆಯಲ್ಲಿ ಹಲವು ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಹಾಗೂ ಶ್ರೀಗಳ ನೇತೃತ್ವದಲ್ಲಿ ಶ್ರೀ ಸಿದ್ಧರಾಮೇಶ್ವರ ಸಮುದಾಯ ಭವನಕ್ಕೆ ಆಗಮಿಸಿ ನಂತರ ಧಾರ್ಮಿಕ ಕಾರ್ಯಕ್ರಮ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಪಡೆದ ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಅಲ್ಲದೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಗುಬ್ಬಿ ತಾಲೂಕಿನ ಎಲ್ಲಾ ಶ್ರೀಗಳು, ನಾಡಿನ ಬಸವತತ್ವದ ಪ್ರಚಾರಕರು, ಶರಣ ಬಂಧುಗಳು, ಹಲವು ಮುಖಂಡರು ಭಾಗಿಯಾಗುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಾಂಧವರು, ಶರಣ ಭಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಗಿದೆ. ಸಭೆಯಲ್ಲಿ ಸಮಾಜದ ಮುಖಂಡರುಗಳಾದ ಗಿರೀಶ್, ಬಸವಲಿಂಗಪ್ಪ, ರೇಣುಕಪ್ಪ, ಜಗದೀಶ್, ಪಾಲನೇತ್ರಯ್ಯ, ಸಿದ್ಧಲಿಂಗ ಮೂರ್ತಿ, ಮಂಜುನಾಥ್, ಅಮ್ಮನಘಟ್ಟ ಮಂಜುನಾಥ್, ಬೊಮ್ಮನಹಳ್ಳಿ ರಮೇಶ್, ಯತೀಶ್, ರಮೇಶ್, ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


