nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬಳ್ಳಾರಿ:  ಮೃತರಿಗೆ ಗೃಹಲಕ್ಷ್ಮೀ ಹಣ ಜಮೆ; ಫಲಾನುಭವಿಗಳ ಮರು ಪರಿಶೀಲನೆಗೆ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ತಾಕೀತು

    July 11, 2026

    “ನಿಮ್ಮ ಜಿಲ್ಲೆಯನ್ನು ಕ್ಷಯಮುಕ್ತಗೊಳಿಸಿ”: ಕ್ಷಯ ರೋಗದ ಲಕ್ಷಣಗಳೇನು? ಚಿಕಿತ್ಸೆ ಪಡೆಯೋದು ಹೇಗೆ? | ಪ್ರತಿ ತಿಂಗಳು ರೂ.1,000 ನೆರವು

    July 11, 2026

    ಸ್ಕೀಮ್ ನೌಕರರ ಬೃಹತ್ ಪ್ರತಿಭಟನೆ: ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಗೆ ಆಗ್ರಹಿಸಿ ‘ಕರಾಳ ದಿನಾಚರಣೆ’

    July 10, 2026
    Facebook Twitter Instagram
    ಟ್ರೆಂಡಿಂಗ್
    • ಬಳ್ಳಾರಿ:  ಮೃತರಿಗೆ ಗೃಹಲಕ್ಷ್ಮೀ ಹಣ ಜಮೆ; ಫಲಾನುಭವಿಗಳ ಮರು ಪರಿಶೀಲನೆಗೆ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ತಾಕೀತು
    • “ನಿಮ್ಮ ಜಿಲ್ಲೆಯನ್ನು ಕ್ಷಯಮುಕ್ತಗೊಳಿಸಿ”: ಕ್ಷಯ ರೋಗದ ಲಕ್ಷಣಗಳೇನು? ಚಿಕಿತ್ಸೆ ಪಡೆಯೋದು ಹೇಗೆ? | ಪ್ರತಿ ತಿಂಗಳು ರೂ.1,000 ನೆರವು
    • ಸ್ಕೀಮ್ ನೌಕರರ ಬೃಹತ್ ಪ್ರತಿಭಟನೆ: ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಗೆ ಆಗ್ರಹಿಸಿ ‘ಕರಾಳ ದಿನಾಚರಣೆ’
    • ಸ್ವಚ್ಛ ಪರಿಸರಕ್ಕಾಗಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನ: ಔರಾದ್ ತಾಲೂಕಿನ ಹೊಕ್ರಾಣಾದಲ್ಲಿ ಜಾಗೃತಿ ಜಾಥಾ
    • ಗುಬ್ಬಿ: ಜು.13ರಂದು ಎಸ್ ಸಿ–ಎಸ್ ಟಿ ಕುಂದುಕೊರತೆ ಸಭೆ
    • ಮಕ್ಕಳಲ್ಲಿ ಶಿಕ್ಷಣದ ಪ್ರೀತಿ ಹುಟ್ಟಿಸುವ ಕಲಿಕೆ ಬದುಕಿನ ಆದ್ಯತೆಯಾಗಲಿ: ವೇಣುಗೋಪಾಲ್
    • ತಿಪಟೂರು: ಲಯನ್ಸ್ ಕ್ಲಬ್ ನ 8ನೇ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಯಶಸ್ವಿ
    • ಕಳ್ಳಿ ಗಿಡದ ಹಣ್ಣು ತಿನ್ನುವುದು ಹೇಗೆ? ಇಲ್ಲಿದೆ ಸುಲಭ ವಿಧಾನ ಮತ್ತು ಆರೋಗ್ಯ ಪ್ರಯೋಜನಗಳು!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಗ್ಯಾಸ್ ಬಳಕೆ ವೇಳೆ ಮಹಿಳೆಯರು ಸುರಕ್ಷತಾ ಕ್ರಮ ಅನುಸರಿಸಿ: ಮಾಜಿ ಸಚಿವ ಎಂ.ಶಿವಣ್ಣ ಸಲಹೆ
    ಜಿಲ್ಲಾ ಸುದ್ದಿ August 31, 2025

    ಗ್ಯಾಸ್ ಬಳಕೆ ವೇಳೆ ಮಹಿಳೆಯರು ಸುರಕ್ಷತಾ ಕ್ರಮ ಅನುಸರಿಸಿ: ಮಾಜಿ ಸಚಿವ ಎಂ.ಶಿವಣ್ಣ ಸಲಹೆ

    By adminAugust 31, 2025No Comments2 Mins Read

    ಸರಗೂರು:  ಮಹಿಳೆಯರು ಮುಂಜಾಗೃತ ಕ್ರಮವಾಗಿ ಗ್ಯಾಸ್ ಸುರಕ್ಷತಾ ಕ್ರಮ ಅನುಸರಿಸಿಕೊಂಡು ಅಡುಗೆ ಮಾಡಬೇಕು ಎಂದು ಸೌಜನ್ಯ ಗ್ಯಾಸ್ ಏಜೆನ್ಸಿಯ ಮಾಲೀಕರು, ಮಾಜಿ ಸಚಿವ ಎಂ.ಶಿವಣ್ಣ ಸಲಹೆ ನೀಡಿದರು.

    ಪಟ್ಟಣದ ಸೌಜನ್ಯ ಗ್ಯಾಸ್ ಸರ್ವೀಸ್‌ ನಿಂದ ಭಾರತ್ ಗ್ಯಾಸ್ ಏಜೆನ್ಸಿ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಶನಿವಾರ ನಡೆಸಿದ ಗ್ಯಾಸ್ ಬಳಕೆಯ ಮುಂಜಾಗೃತ ಕ್ರಮ, ಗೃಹಿಣಿಯರಿಗೆ ಅಡುಗೆ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಮನೆಗಳಲ್ಲಿ ಅಡುಗೆ ಕೋಣೆ ಸ್ವಚ್ಛವಾಗಿಟ್ಟುಕೊಂಡು ಗಾಳಿ, ಬೆಳಕು ಇರಬೇಕು. ಸಿಲಿಂಡರ್, ರೆಗ್ಯುಲೇಟರ್, ಗ್ಯಾಸ್ ಸ್ಟವ್‌ ಗಳಲ್ಲಿ ಲೋಪವಾದರೆ ಶೀಘ್ರದಲ್ಲೆ ಕ್ರಮವಹಿಸಬೇಕು. ಇದಕ್ಕಾಗಿ ಗ್ಯಾಸ್ ವಿತರಕರನ್ನು ಸಂಪರ್ಕಿಸಬೇಕು. ಕೂಡಲೇ ಸರಿಪಡಿಸಲಿದ್ದಾರೆ. ಗ್ರಾಹಕರ ಹಿತ ಕಾಪಾಡುವುದು ನಮ್ಮ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಗ್ರಾಹಕರು ಮುಂದಾಗಬೇಕು ಎಂದು ಅವರು ತಿಳಿಸಿದರು.

    ಗ್ರಾಮಾಂತರ ಭಾಗದ ಜನರಿಗೆ ಗ್ಯಾಸ್ ಸೇವೆ ನೀಡುವ ಸಲುವಾಗಿ 25 ವರ್ಷಗಳ ಹಿಂದೆ ಆರಂಭವಾದ ಸೌಜನ್ಯ ಗ್ಯಾಸ್ ಸರ್ವೀಸ್ ಉತ್ತಮ ಸೇವೆ ನೀಡುತ್ತಾ ಬಂದಿದೆ. ಸದ್ಯ 15 ಸಾವಿರ ಗ್ರಾಹಕರನ್ನು ಹೊಂದಿದ್ದು, ಸೇವೆಯಲ್ಲಿ ಹೆಸರು ಮಾಡಿದೆ. ಕನೆಕ್ಷನ್‌ ನಲ್ಲಿ ಶೇ.100 ರಷ್ಟು ತಲುಪಿದೆ. ಮುಂದಿನ ದಿನಗಳಲ್ಲಿಯೂ ಉತ್ತಮ ಸೇವೆ ನೀಡಲು ಸಜ್ಜಾಗಿದೆ ಎಂದು ಅವರು ಹೇಳಿದರು.

    ಗ್ಯಾಸ್ ಏಜೆನ್ಸಿಯ ಸಹ ಮಾಲೀಕರಾದ ಹರ್ಷವರ್ಧನ್ ಶಿವಣ್ಣ ಮಾತನಾಡಿ, ಸೌದೆ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿತ್ತು. ಇದನ್ನು ಮನಗಂಡ ಸರಕಾರ ಅಡುಗೆಗಾಗಿ ಗ್ಯಾಸ್ ನೀಡಲು ಮುಂದಾಯಿತು. ಅದರಂತೆ ಗ್ರಾಹಕರು ಗ್ಯಾಸ್ ಸಂಪರ್ಕ ಹೊಂದಿದ್ದಾರೆ. ಹೀಗಾಗಿ ಗ್ರಾಹಕರು ಗ್ಯಾಸ್ ಸುರಕ್ಷತಾ ಅನುಸರಿಸುವುದು ಸೂಕ್ತವಾಗಿದೆ ಎಂದರು.

    ಇದೇ ಸಂದರ್ಭದಲ್ಲಿ ಗೃಹಿಣಿಯರಿಗೆ ಅಡುಗೆ ಸ್ಪರ್ಧೆ ಆಯೋಜಿಸಿದ್ದು, ವಿಜೇತರಾದವರಿಗೆ ಭಾರತ್ ಪೆಟ್ರೋಲಿಯಂನ ಸೇಲ್ಸ್ ಮ್ಯಾನೇಜರ್ ಬಿಸೋಜ ಸೈವನ್ ಬಹುಮಾನ ವಿತರಿಸಿದರು. ನಿತ್ಯ ಪ್ರಥಮ (5000 ರೂ), ನಾಗೇಶ್ವರಿ ದ್ವಿತೀಯ (3000 ರೂ), ಭವ್ಯ ತೃತೀಯ(2000 ರೂ.) ಸ್ಥಾನ ಪಡೆದರೆ ಇನ್ನುಳಿದವರಿಗೆ ಸಮಾಧಾನಕಾರ ಬಹುಮಾನ ವಿತರಿಸಲಾಯಿತು. ಗ್ಯಾಸ್ ಸಿಬ್ಬಂದಿಯೊಬ್ಬರು ಮಹಿಳೆಯರು ಗ್ಯಾಸ್ ಸುರಕ್ಷತಾ ಕ್ರಮವನ್ನು ಹೇಗೆ ಅನುಸರಿಸಬೇಕು. ಮುಂಜಾಗೃತ ಕ್ರಮಗಳೇನು? ಎಂಬುದರ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸುವ ಮೂಲಕ ಅರಿವು ಮೂಡಿಸಿದರು.

    ತೀರ್ಪುಗಾರರಾದ ಬಸವರಾಜಪ್ಪ, ಚಿಕ್ಕಳ್ಳಿ ಪುಟ್ಟಣ್ಣ, ಒಡೆಯರ್ ಪಾಳ್ಯದ ನಂಜಪ್ಪ ಅವರನ್ನು ಸನ್ಮಾನಿಸಲಾಯಿತು. ಸೌಜನ್ಯ ಗ್ಯಾಸ್ ಏಜೆನ್ಸಿ ಸಹ ಮಾಲೀಕರಾದ ಹರ್ಷವರ್ಧನ್, ಸೇಲ್ಸ್ ಮ್ಯಾನೇಜರ್ ಸೌಜನ್ಯ ಶಿವಣ್ಣ, ದೇವಿಕಾ ಶಿವಣ್ಣ, ಶಬ್ದವೇಧಿ ಚಂದ್ರಶೇಖರ್, ಬಿ.ವಿ.ಬಸವರಾಜು, ಬಿ.ಪಿ.ಬೋರೇಗೌಡ, ಬಿ.ಸಿ.ಬಸಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ, ಕಸಾಪ ಅಧ್ಯಕ್ಷ ಕೆಂಡಗಣ್ಣಸ್ವಾಮಿ, ತೋಗಟವೀರ ಸಮಾಜದ ಅಧ್ಯಕ್ಷ ರವೀಂದ್ರ, ರವಿ, ಸಿಬ್ಬಂದಿಗಳಾದ ಪ್ರಸಾದ್, ಸೋಮಶೇಖರ್, ಮಹಿಳೆ ಗ್ರಾಹಕರು ಹಾಜರಿದ್ದರು.

    ವರದಿ: ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


    Provided by
    Provided by
    admin
    • Website

    Related Posts

    ಬಳ್ಳಾರಿ:  ಮೃತರಿಗೆ ಗೃಹಲಕ್ಷ್ಮೀ ಹಣ ಜಮೆ; ಫಲಾನುಭವಿಗಳ ಮರು ಪರಿಶೀಲನೆಗೆ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ತಾಕೀತು

    July 11, 2026

    ಸ್ವಚ್ಛ ಪರಿಸರಕ್ಕಾಗಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನ: ಔರಾದ್ ತಾಲೂಕಿನ ಹೊಕ್ರಾಣಾದಲ್ಲಿ ಜಾಗೃತಿ ಜಾಥಾ

    July 10, 2026

    ದೈವಾರಾಧನೆ ಜೊತೆ ಮಕ್ಕಳನ್ನು ಸುಶಿಕ್ಷಿತರನ್ನಾಗಿಸಿ: ಎಂಜಿನಿಯರ್ ತಿಮ್ಮರಾಯಪ್ಪ

    July 10, 2026

    Comments are closed.

    Our Picks

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಬಳ್ಳಾರಿ:  ಮೃತರಿಗೆ ಗೃಹಲಕ್ಷ್ಮೀ ಹಣ ಜಮೆ; ಫಲಾನುಭವಿಗಳ ಮರು ಪರಿಶೀಲನೆಗೆ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ತಾಕೀತು

    July 11, 2026

    ಬಳ್ಳಾರಿ:  ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಕೇಂದ್ರ ಕಚೇರಿ ಪಟ್ಟಿ ಪ್ರಕಾರ 5,972 ಮಂದಿ ಮರಣ ಹೊಂದಿದ ಫಲಾನುಭವಿಗಳಾಗಿದ್ದು, ಅವರಲ್ಲಿ 3,748…

    “ನಿಮ್ಮ ಜಿಲ್ಲೆಯನ್ನು ಕ್ಷಯಮುಕ್ತಗೊಳಿಸಿ”: ಕ್ಷಯ ರೋಗದ ಲಕ್ಷಣಗಳೇನು? ಚಿಕಿತ್ಸೆ ಪಡೆಯೋದು ಹೇಗೆ? | ಪ್ರತಿ ತಿಂಗಳು ರೂ.1,000 ನೆರವು

    July 11, 2026

    ಸ್ಕೀಮ್ ನೌಕರರ ಬೃಹತ್ ಪ್ರತಿಭಟನೆ: ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಗೆ ಆಗ್ರಹಿಸಿ ‘ಕರಾಳ ದಿನಾಚರಣೆ’

    July 10, 2026

    ಸ್ವಚ್ಛ ಪರಿಸರಕ್ಕಾಗಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನ: ಔರಾದ್ ತಾಲೂಕಿನ ಹೊಕ್ರಾಣಾದಲ್ಲಿ ಜಾಗೃತಿ ಜಾಥಾ

    July 10, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.