ಕರ್ನಾಟಕ ಕಾರ್ಯನಿರತ ಪತ್ರಕರ್ತರ, ಸಂಪಾದಕರ ಹಾಗೂ ವರದಿಗಾರರ ಸಂಘದ ರಾಜ್ಯಾಧ್ಯಕ್ಷರಾದ ಶಶಿಕಾಂತ್ ಅವರು ಇಂದು ರಾಜ್ಯ ಸಂಘಟನಾ ಸಂಚಾಲಕರನ್ನಾಗಿ ಯಶಸ್ವಿನಿ ಬಿ. ಅವರನ್ನು ಆಯ್ಕೆ ಮಾಡಿದ್ದಾರೆ.
ಈ ಮಹತ್ವಪೂರ್ಣ ನೇಮಕಾತಿ ಸಂಘದ ಕಾರ್ಯಚಟುವಟಿಕೆಗಳಿಗೆ ಹೊಸ ಚೈತನ್ಯವನ್ನು ನೀಡಲಿದೆ ಎನ್ನುವುದು ಸದಸ್ಯರ ನಿರೀಕ್ಷೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಲಹಾ ಸಮಿತಿಯ ಅಧ್ಯಕ್ಷರಾದ ಸಂಜಯ್ ಹಾಗೂ ಬೆಂಗಳೂರು ವಿಭಾಗದ ಅಧ್ಯಕ್ಷರಾದ ವಿಜಯ್ ಮುನಿಯಪ್ಪ ಉಪಸ್ಥಿತರಿದ್ದು, ಯಶಸ್ವಿನಿ ಬಿ ಅವರಿಗೆ ಅಭಿನಂದನೆ ಸಲ್ಲಿಸಿದರು.
ಸಂಘದ ಹಲವು ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು ಮತ್ತು ಹೊಸ ನೇಮಕಾತಿಯ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.
ಯಶಸ್ವಿನಿ ಬಿ. ಅವರು ತಮ್ಮ ನೇಮಕಾತಿಗೆ ಧನ್ಯವಾದ ಸಲ್ಲಿಸಿ, ಸಂಘದ ಅಭಿವೃದ್ಧಿಗೆ ತಮ್ಮ ಶ್ರಮವನ್ನು ಅರ್ಪಿಸುವ ನಿರ್ಧಾರವನ್ನು ಪ್ರಕಟಿಸಿದರು. “ನಮ್ಮ ಸಂಘದ ಉದ್ದೇಶಗಳ ಸಾಧನೆಗಾಗಿ ಜವಾಬ್ದಾರಿಯಿಂದ ಕೆಲಸ ಮಾಡುತ್ತೇನೆ” ಎಂದು ಅವರು ಹೇಳಿದರು.
ತುಮಕೂರು ಜಿಲ್ಲಾ ಘಟಕ – ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಪಾದಕರ ಹಾಗೂ ವರದಿಗಾರರ ಸಂಘ (ರಿ) ಪದಾಧಿಕಾರಿಗಳು:
ಅಧ್ಯಕ್ಷ: ಜಿ.ಎಲ್. ನಟರಾಜು (ನಮ್ಮ ತುಮಕೂರು ಸಂಪಾದಕರು)
ಉಪಾಧ್ಯಕ್ಷ – 1: ಹೇಮಂತ್ ಕುಮಾರ್ (ಅಮೃತ ಘಳಿಗೆ ಪತ್ರಿಕೆ ವರದಿಗಾರ)
ಉಪಾಧ್ಯಕ್ಷ – 2: ರಮೇಶ್ ಎಸ್.ಆರ್.
ಕಾರ್ಯದರ್ಶಿ: ಚಿಕ್ಕಣ್ಣಸ್ವಾಮಿ (ಭೀಮ ನಡೆ ಪತ್ರಿಕೆಯ ಸಂಪಾದಕರು)
ಸಂಘಟನಾ ಕಾರ್ಯದರ್ಶಿ: ಇಲ್ಲಸ್ ಮಹಮದ್
ಕಾನೂನು ಸಲಹೆಗಾರ: ಪುರುಷೋತ್ತಮ್ (ವಿಧಿ ಪ್ರಜ್ಞಾ ಕಾನೂನು ಸಲಹಾ ಕೇಂದ್ರದ ಸ್ಥಾಪಕ ಕಾರ್ಯದರ್ಶಿ)
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4