ಬೆಂಗಳೂರು: ಪ್ರೀತಿಗೆ ನಿರಾಕರಿಸಿದ್ದಕ್ಕೆ ಕೋಪಗೊಂಡ ಯುವಕನೊಬ್ಬ ಯುವತಿಯ ದ್ವಿಚಕ್ರ ವಾಹನ ಹಾಗೂ ಕಾರಿಗೆ ಬೆಂಕಿ ಹಚ್ಚಿರುವ ಘಟನೆ ಸಿಕೆ ಅಚ್ಚುಕಟ್ಟು ಹಾಗೂ ಸುಬ್ರಹಣ್ಯಪುರ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ನಡೆದಿವೆ.
ಬಿಕಾಂ ಓದುತ್ತಿದ್ದ ಯುವಕ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆಗೆ ಪ್ರಪೋಸ್ ಕೂಡ ಮಾಡಿದ್ದ. ಆದ್ರೆ, ಯುವತಿ ಇದಕ್ಕೆ ಒಪ್ಪದಿದ್ದಾಗ, ತೀವ್ರವಾಗಿ ಕೋಪಗೊಂಡಿದ್ದ.
ಯುವಕ ಸೇಡಿಗಾಗಿ ಯುವತಿಗೆ ನಗರದಲ್ಲಿ ಇದ್ದ ಎರಡು ಮನೆಗಳಿಗೆ ತೆರಳಿ ವಾಹನಗಳಿಗೆ ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದಿದ್ದಾನೆ.
ರಾತ್ರಿ 12.30ರ ಸುಮಾರಿನಲ್ಲಿ ಇಬ್ಬರು ಸ್ನೇಹಿತರೊಂದಿಗೆ ದ್ವಿಕಚ್ರ ವಾಹನದಲ್ಲಿ ಸಿಕೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯ ಪಾಪಯ್ಯ ಲೇಔಟ್ನ ಬನಗಿರಿ ಬಡಾವಣೆಯಲ್ಲಿರುವ ಯುವತಿಯ ನಿವಾಸಕ್ಕೆ ತೆರಳಿ ಮನೆಯ ಮುಂದೆ ನಿಲ್ಲಿಸಲಾಗಿದ್ದ ಒಂದು ಬೈಕ್ ಹಾಗೂ ಸ್ಕೂಟಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ನಂತರ ಅಲ್ಲಿಂದ ಸುಬ್ರಹಣ್ಯಪುರ ಠಾಣಾ ವ್ಯಾಪ್ತಿಯ ಅರೆಹಳ್ಳಿಯ ಬಳಿ ಇರುವ ಮತ್ತೊಂದು ಮನೆಗೆ 1.30ರ ಸುಮಾರಿನಲ್ಲಿ ತೆರಳಿ ಪಾರ್ಕಿಂಗ್ನಲ್ಲಿ ನಿಲ್ಲಿಸಲಾಗಿದ್ದ ಒಂದು ಕಾರಿಗೆ ಬೆಂಕಿ ಹಚ್ಚಿದ್ದಾನೆ.
ಬೆಂಕಿಯ ಜ್ವಾಲೆ ಪಕ್ಕದ ಕಾರಿಗೂ ಆವರಿಸಿ ಸುಟ್ಟು ಕರಕಲಾಗಿವೆ ದಟ್ಟ ಹೊಗೆ ಹಾಗೂ ಬೆಂಕಿಯನ್ನು ಕಂಡ ಅಪಾರ್ಟ್ಮೆಂಟ್ ನಿವಾಸಿಗಳು ಕೂಡಲೇ ಪಾರ್ಕಿಂಗ್ ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಂದಿಸಿ ಸಂಭವಿಸಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಸದ್ಯ ಯುವಕ ಹಾಗೂ ಆತನ ಸ್ನೇಹಿತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4