nammatumakuru

    Subscribe to Updates

    Get the latest creative news from FooBar about art, design and business.

    What's Hot

    ನೇಪಾಳಕ್ಕೆ ಪ್ರವಾಸ ಹೋಗಿದ್ದ ಶಿವಮೊಗ್ಗದ 6  ಮಂದಿ ಸುರಕ್ಷಿತ; ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ವಾಪಸ್

    August 28, 2026

    ವಸತಿ ರಹಿತರಿಗೆ ಗುಡ್‌ ನ್ಯೂಸ್‌: ಪ್ರತಿ ಜಿಲ್ಲೆಯಲ್ಲೂ 50,000 ನಿವೇಶನ; ಡಿಸೆಂಬರ್ ಒಳಗೆ 5 ಲಕ್ಷ ಪ್ಲಾಟ್‌ ಗಳ ವಿತರಣೆಗೆ ಸರ್ಕಾರದ ಸಿದ್ಧತೆ

    August 28, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026
    Facebook Twitter Instagram
    ಟ್ರೆಂಡಿಂಗ್
    • ನೇಪಾಳಕ್ಕೆ ಪ್ರವಾಸ ಹೋಗಿದ್ದ ಶಿವಮೊಗ್ಗದ 6  ಮಂದಿ ಸುರಕ್ಷಿತ; ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ವಾಪಸ್
    • ವಸತಿ ರಹಿತರಿಗೆ ಗುಡ್‌ ನ್ಯೂಸ್‌: ಪ್ರತಿ ಜಿಲ್ಲೆಯಲ್ಲೂ 50,000 ನಿವೇಶನ; ಡಿಸೆಂಬರ್ ಒಳಗೆ 5 ಲಕ್ಷ ಪ್ಲಾಟ್‌ ಗಳ ವಿತರಣೆಗೆ ಸರ್ಕಾರದ ಸಿದ್ಧತೆ
    • ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ
    • 175 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ: ಆರ್. ಅಶೋಕ್ ಆಗ್ರಹ
    • ತಂದೆ—ತಾಯಿ, ಅಕ್ಕ—ಭಾವನ ಸ್ಮರಣಾರ್ಥ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೂತನ ವಾರ್ಡ್ ನಿರ್ಮಿಸಿದ ಉದ್ಯಮಿ
    • ಬರಪೀಡಿತ ಪ್ರದೇಶ ಘೋಷಣೆ: ಶಾಸಕ ಡಾ. ಶೈಲೇಂದ್ರ ಬೆಲ್ದಾಳೆಗೆ ಚೇತನ್ ಸೊರಳ್ಳಿ ಅಭಿನಂದನೆ
    • ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆ: ರೈತರ ಹಿತ ಹಾಗೂ ನೀರಿನ ಸಮರ್ಪಕ ನಿರ್ವಹಣೆಗೆ ಒತ್ತು
    • ಹಳ್ಳಿಮೈಸೂರು ಆಸ್ಪತ್ರೆ, ಬಸ್ ನಿಲ್ದಾಣಕ್ಕೆ ಸಂಸದ ಶ್ರೇಯಸ್ ಎಂ. ಪಟೇಲ್ ದಿಢೀರ್ ಭೇಟಿ: ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಸ್ಥಳದಲ್ಲೇ ಖಡಕ್ ಸೂಚನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನೇಪಾಳಕ್ಕೆ ಪ್ರವಾಸ ಹೋಗಿದ್ದ ಶಿವಮೊಗ್ಗದ 6  ಮಂದಿ ಸುರಕ್ಷಿತ; ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ವಾಪಸ್
    ಜಿಲ್ಲಾ ಸುದ್ದಿ August 28, 2026

    ನೇಪಾಳಕ್ಕೆ ಪ್ರವಾಸ ಹೋಗಿದ್ದ ಶಿವಮೊಗ್ಗದ 6  ಮಂದಿ ಸುರಕ್ಷಿತ; ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ವಾಪಸ್

    By Ganesh TumkuruAugust 28, 2026No Comments1 Min Read
    shivamogga

    ಶಿವಮೊಗ್ಗ: ನೇಪಾಳದಲ್ಲಿ ಉಂಟಾಗಿರುವ ಪ್ರವಾಹ ಹಾಗೂ ಸಂಕಷ್ಟದ ಪರಿಸ್ಥಿತಿಯ ನಡುವೆಯೂ, ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗ ಜಿಲ್ಲೆಯ 6 ಜನ ಕನ್ನಡಿಗರು ಸುರಕ್ಷಿತವಾಗಿದ್ದಾರೆ ಎಂಬ ಸಮಾಧಾನಕರ ಮಾಹಿತಿ ಲಭ್ಯವಾಗಿದೆ.

    ಶಿವಮೊಗ್ಗದ ಗುರುಶಾಂತೇಶ್ವರ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ವತಿಯಿಂದ ಈ ಆರು ಮಂದಿ ಪ್ರವಾಸಕ್ಕೆ ತೆರಳಿದ್ದರು. ಬೆಂಗಳೂರಿನಿಂದ ವಿಮಾನದ ಮೂಲಕ ಉತ್ತರ ಪ್ರದೇಶದ ಗೋರಖ್‌ಪುರ ತಲುಪಿದ್ದ ಈ ತಂಡ, ಅಲ್ಲಿಂದ ಟೂರ್ ಪ್ಯಾಕೇಜ್ ಮೂಲಕ ಬಸ್‌ನಲ್ಲಿ ನೇಪಾಳಕ್ಕೆ ಪ್ರಯಾಣ ಬೆಳೆಸಿತ್ತು.

    ಈ ತಂಡದಲ್ಲಿ ಹೊಸನಗರದ ಇಬ್ಬರು, ಭದ್ರಾವತಿಯ ಇಬ್ಬರು ಹಾಗೂ ಶಿವಮೊಗ್ಗದ ಇಬ್ಬರು ಸೇರಿ ಒಟ್ಟು 6 ಜನರಿದ್ದರು. ನೇಪಾಳದಲ್ಲಿ ಪ್ರವಾಹ ಉಂಟಾಗುವ ಮುನ್ನವೇ ಇವರು ಪ್ರಮುಖ ಸ್ಥಳಗಳನ್ನು ವೀಕ್ಷಿಸಿದ್ದರು. ತಂಡವು ನೇಪಾಳದ ಲುಂಬಿನಿ ಸೇರಿದಂತೆ ಇತರೆ ಪ್ರವಾಸಿ ತಾಣಗಳನ್ನು ಮುಗಿಸಿ ಮುಂದಿನ ಸ್ಥಳಕ್ಕೆ ಹೊರಡಬೇಕಿತ್ತು. ಆದರೆ, ಪ್ರವಾಹ ಪೀಡಿತ ಸ್ಥಳಕ್ಕೆ ತಲುಪುವ ಸುಮಾರು 5 ಕಿ.ಮೀ ದೂರದಲ್ಲೇ ಅಧಿಕಾರಿಗಳು ಇವರನ್ನು ತಡೆದು ವಾಪಸ್ ಕಳುಹಿಸಿದ್ದಾರೆ.

    ಈ ಕುರಿತು ಹೊಸನಗರದ ವಕೀಲ ಪ್ರಶಾಂತ್ ‘ಇಟಿವಿ ಭಾರತ’ದೊಂದಿಗೆ ಮಾತನಾಡಿ, “ನಾವೀಗ ನೇಪಾಳದ ದಕ್ಷಿಣ ಭಾಗದಲ್ಲಿದ್ದೇವೆ. ಪೋರ್ಖಾದಿಂದ ಕಠ್ಮಂಡುವಿಗೆ ಹೋಗಬೇಕಿತ್ತು. ಆದರೆ ಅಲ್ಲಿನ ಸರ್ಕಾರ ನಮ್ಮನ್ನು ತಡೆಯಿತು. ಇದರಿಂದ ನಾವು ನಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಭಾರತಕ್ಕೆ ವಾಪಸ್ ಆಗುತ್ತಿದ್ದೇವೆ. ಲುಂಬಿನಿ ಮೂಲಕ ಭಾರತದ ಗಡಿ ಪ್ರವೇಶಿಸುತ್ತಿದ್ದೇವೆ. ನಮ್ಮ ಒಟ್ಟು ತಂಡದಲ್ಲಿ 54 ಜನರಿದ್ದು, ಎಲ್ಲರೂ ಸಂಪೂರ್ಣ ಸುರಕ್ಷಿತವಾಗಿದ್ದೇವೆ. ಯಾವುದೇ ಅಡೆತಡೆಗಳಿಲ್ಲದೆ ವಾಪಸ್ ಬರುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

    ನೇಪಾಳ ಪ್ರವಾಹದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ಮತ್ತು ಮಾಹಿತಿ ಪಡೆಯಲು ರಾಜ್ಯ ಸರ್ಕಾರವು 24×7 ತುರ್ತು ಸಹಾಯವಾಣಿಯನ್ನು (SEOC) ತೆರೆದಿದೆ.

    ಟೋಲ್ ಫ್ರೀ ಸಂಖ್ಯೆ: 1070 ಹಾಗೂ 080-22253707

    ಇಮೇಲ್ ವಿಳಾಸ: seockarnataka@gmail.com

    ಸಂತ್ರಸ್ತರು ಅಥವಾ ಅವರ ಕುಟುಂಬಸ್ಥರು ಈ ನಂಬರ್‌ ಗಳನ್ನು ಸಂಪರ್ಕಿಸಿ ನೆರವು ಪಡೆಯಬಹುದಾಗಿದೆ ಎಂದು ಸರ್ಕಾರ ತಿಳಿಸಿದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ತಂದೆ—ತಾಯಿ, ಅಕ್ಕ—ಭಾವನ ಸ್ಮರಣಾರ್ಥ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೂತನ ವಾರ್ಡ್ ನಿರ್ಮಿಸಿದ ಉದ್ಯಮಿ

    August 28, 2026

    ಬರಪೀಡಿತ ಪ್ರದೇಶ ಘೋಷಣೆ: ಶಾಸಕ ಡಾ. ಶೈಲೇಂದ್ರ ಬೆಲ್ದಾಳೆಗೆ ಚೇತನ್ ಸೊರಳ್ಳಿ ಅಭಿನಂದನೆ

    August 28, 2026

    ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆ: ರೈತರ ಹಿತ ಹಾಗೂ ನೀರಿನ ಸಮರ್ಪಕ ನಿರ್ವಹಣೆಗೆ ಒತ್ತು

    August 28, 2026

    Leave A Reply Cancel Reply

    Our Picks

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ನೇಪಾಳಕ್ಕೆ ಪ್ರವಾಸ ಹೋಗಿದ್ದ ಶಿವಮೊಗ್ಗದ 6  ಮಂದಿ ಸುರಕ್ಷಿತ; ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ವಾಪಸ್

    August 28, 2026

    ಶಿವಮೊಗ್ಗ: ನೇಪಾಳದಲ್ಲಿ ಉಂಟಾಗಿರುವ ಪ್ರವಾಹ ಹಾಗೂ ಸಂಕಷ್ಟದ ಪರಿಸ್ಥಿತಿಯ ನಡುವೆಯೂ, ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗ ಜಿಲ್ಲೆಯ 6 ಜನ ಕನ್ನಡಿಗರು…

    ವಸತಿ ರಹಿತರಿಗೆ ಗುಡ್‌ ನ್ಯೂಸ್‌: ಪ್ರತಿ ಜಿಲ್ಲೆಯಲ್ಲೂ 50,000 ನಿವೇಶನ; ಡಿಸೆಂಬರ್ ಒಳಗೆ 5 ಲಕ್ಷ ಪ್ಲಾಟ್‌ ಗಳ ವಿತರಣೆಗೆ ಸರ್ಕಾರದ ಸಿದ್ಧತೆ

    August 28, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    175 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ: ಆರ್. ಅಶೋಕ್ ಆಗ್ರಹ

    August 28, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.