nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸಚಿನ್ ಮನೋಲ್ಕರ್ ಕಲಾಕೃತಿಗಳಿಗೆ ಕಲಾಸಕ್ತರ ಮೆಚ್ಚುಗೆ: ಕಲಾ ಕ್ಷೇತ್ರಕ್ಕೆ ಪ್ರೋತ್ಸಾಹ ಅಗತ್ಯ ಎಂದ ದತ್ತಾತ್ರಿ ಬೆಳ್ಳೂರೆ

    August 17, 2026

    ತುಮಕೂರು–ಬೆಂಗಳೂರು ಮೆಟ್ರೋ ಸಂಪರ್ಕ ಯೋಜನೆ: ಕೇಂದ್ರದ ಅನುಮತಿಗೆ ರಾಜ್ಯ ಸರ್ಕಾರ ಪತ್ರ!

    August 16, 2026

    ಅಂಗನವಾಡಿ ಮೇಲ್ಛಾವಣಿಯ ಸಿಮೆಂಟ್ ಪ್ಲಾಸ್ಟರ್ ಕುಸಿತ: ನಾಲ್ವರು ಮಕ್ಕಳು, ಕಾರ್ಯಕರ್ತೆಗೆ ಗಾಯ

    August 16, 2026
    Facebook Twitter Instagram
    ಟ್ರೆಂಡಿಂಗ್
    • ಸಚಿನ್ ಮನೋಲ್ಕರ್ ಕಲಾಕೃತಿಗಳಿಗೆ ಕಲಾಸಕ್ತರ ಮೆಚ್ಚುಗೆ: ಕಲಾ ಕ್ಷೇತ್ರಕ್ಕೆ ಪ್ರೋತ್ಸಾಹ ಅಗತ್ಯ ಎಂದ ದತ್ತಾತ್ರಿ ಬೆಳ್ಳೂರೆ
    • ತುಮಕೂರು–ಬೆಂಗಳೂರು ಮೆಟ್ರೋ ಸಂಪರ್ಕ ಯೋಜನೆ: ಕೇಂದ್ರದ ಅನುಮತಿಗೆ ರಾಜ್ಯ ಸರ್ಕಾರ ಪತ್ರ!
    • ಅಂಗನವಾಡಿ ಮೇಲ್ಛಾವಣಿಯ ಸಿಮೆಂಟ್ ಪ್ಲಾಸ್ಟರ್ ಕುಸಿತ: ನಾಲ್ವರು ಮಕ್ಕಳು, ಕಾರ್ಯಕರ್ತೆಗೆ ಗಾಯ
    • RSS ಅಷ್ಟೊಂದು ಉತ್ತಮವಾಗಿದ್ದರೆ, ಬಿಜೆಪಿ ನಾಯಕರ ಮಕ್ಕಳು ಏಕೆ ಸ್ವಯಂ ಸೇವಕರಾಗುತ್ತಿಲ್ಲ?: ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ
    • ಸತ್ತವರು ಬೇಟೆಗಾರರಲ್ಲ, ರೈತರು: ಹನೂರು ಶೂಟೌಟ್ ಪ್ರಕರಣದಲ್ಲಿ ಅರಣ್ಯ ಸಿಬ್ಬಂದಿ ವಿರುದ್ಧ ಮೃತರ ಕುಟುಂಬಸ್ಥರ ಗಂಭೀರ ಆರೋಪ
    • ತುಮಕೂರಿಗೆ ಏರ್‌ ಪೋರ್ಟ್, ಮೆಡಿಕಲ್ ಕಾಲೇಜು: ಶೀಘ್ರ ಸಿಎಂ ಭೇಟಿ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್
    • 80ನೇ ಸ್ವಾತಂತ್ರ್ಯ ದಿನಾಚರಣೆ: ಹುತಾತ್ಮರ ಕನಸಿನ ಭಾರತ ನಿರ್ಮಿಸಲು ವಿದ್ಯಾರ್ಥಿಗಳಿಂದ ಪ್ರತಿಜ್ಞೆ!
    • ಗಿರಿನಗರ ಸರ್ಕಾರಿ ಶಾಲೆ ಅಭಿವೃದ್ಧಿಗೆ ₹1 ಲಕ್ಷ ದೇಣಿಗೆ ಘೋಷಿಸಿದ ಸಮಾಜ ಸೇವಕ ಸದಾನಂದ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತಾಯಿಯ 1 ಕೆ.ಜಿ. ಚಿನ್ನ ಕದ್ದು ಮೋಜು-ಮಸ್ತಿ ಐನಾತಿ ಪುತ್ರಿ ಪ್ರಿಯಕರನ ಸೆರೆ
    ರಾಜ್ಯ ಸುದ್ದಿ May 18, 2022

    ತಾಯಿಯ 1 ಕೆ.ಜಿ. ಚಿನ್ನ ಕದ್ದು ಮೋಜು-ಮಸ್ತಿ ಐನಾತಿ ಪುತ್ರಿ ಪ್ರಿಯಕರನ ಸೆರೆ

    By adminMay 18, 2022No Comments2 Mins Read
    deepthi madan

    ಪ್ರಿಯಕರನಿಗಾಗಿ ಮನೆಯಲ್ಲಿದ್ದ ತಾಯಿಯ ಸುಮಾರು 1 ಕೆ.ಜಿ. ಚಿನ್ನಾಭರಣವನ್ನು ಕಳವು ಮಾಡಿ ರೋಲ್ಡ್ ಗೋಲ್ಡ್ ಚಿನ್ನವನ್ನು ತಂದಿಟ್ಟಿದ್ದ ಐನಾತಿ ಮಗಳು ಹಾಗೂ ಆಕೆಯ ಪ್ರಿಯತಮನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಅಮೃತಹಳ್ಳಿಯ ಜಕ್ಕೂರು ಲೇಔಟ್ ರತ್ನಮ್ಮ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿ ಮಗಳು ದೀಪ್ತಿ ಹಾಗೂ ಮದನ್‌ ನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ಡಿಸಿಪಿ ಡಾ.ಅನೂಪ್ ಶೆಟ್ಟಿ ಅವರು ತಿಳಿಸಿದ್ದಾರೆ.

    ಬಂಧಿತರಿಂದ 36  ಲಕ್ಷ ಮೌಲ್ಯದ 725 ಗ್ರಾಂ. ತೂಕದ ವಿವಿಧ ಚಿನ್ನದ ಆಭರಣಗಳು  ಹಾಗೂ ಕಳವು ಮಾಡಿದ ಆಭರಣಗಳ ಮಾರಾಟದಿಂದ ಬಂದ ಹಣದಿಂದ ಖರೀದಿಸಿದ್ದ ಸುಮಾರು 6 ಲಕ್ಷ ರೂ. ಬೆಲೆಬಾಳುವ 3 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಜಕ್ಕೂರು ಲೇಔಟ್‌ ನಲ್ಲಿ ರತ್ನಮ್ಮ ಹಾಗೂ ಪುತ್ರಿ ದೀಪ್ತಿ ವಾಸವಾಗಿದ್ದರು. ರತ್ನಮ್ಮ ಟೈಲರ್ ಕೆಲಸ ಮಾಡುತ್ತಿದ್ದರೆ, ಪುತ್ರಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಳು. ಈಗಾಗಲೇ ವಿವಾಹವಾಗಿದ್ದ ದೀಪ್ತಿಗೆ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದಳು. ಈ ನಡುವೆ ಡ್ರೈವಿಂಗ್ ಕಲಿಯಲು ಮದನ್ ನಡೆಸುತ್ತಿದ್ದ ಡೈವಿಂಗ್ ಸ್ಕೂಲ್‌ ಗೆ ದೀಪ್ತಿ ಸೇರಿಕೊಂಡಿದ್ದಳು. ಇಲ್ಲಿ ಶುರುವಾದ ಸ್ನೇಹ ಪ್ರೀತಿಗೆ ತಿರುಗಿದೆ. ಮದನ್‌ ಗೆ ಮದುವೆಯಾಗಿ ಇಬ್ಬರೂ ಮಕ್ಕಳಿದ್ದರೂ ದೀಪ್ತಿ ಪ್ರೀತಿಗೆ ಸೈ ಅಂದಿದ್ದ. ಮದನ್ ಪ್ರೀತಿಗೆ ಶರಣಾಗಿದ್ದ ದೀಪ್ತಿ, ಪ್ರಿಯಕರನ ಅಣತಿಯಂತೆ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದಾಳೆ.

    ಹಂತ-ಹಂತವಾಗಿ ಸುಮಾರು ಒಂದು ಕೆ.ಜಿ.ಚಿನ್ನ ಕಳ್ಳತನ ಮಾಡಿ ಕೊಟ್ಟಿದ್ದ ದೀಪ್ತಿ ತಾಯಿಗೆ ಅನುಮಾನ ಬಾರದಿರಲು ಕದ್ದ ಜಾಗದಲ್ಲಿ ನಕಲಿ ಚಿನ್ನಾಭರಣ ಇಟ್ಟಿದ್ದಾಳೆ. ಕೆಲ ದಿನಗಳ ಹಿಂದೆ ಮದುವೆ ಸಲುವಾಗಿ ಒಡವೆ ಧರಿಸಿಕೊಳ್ಳಲು ಬೀರುವಿನಲ್ಲಿ ನೋಡಿದಾಗ ಚಿನ್ನಾಭರಣದಲ್ಲಿ ವ್ಯತ್ಯಾಸ ಕಂಡುಬಂದಿದೆ. ಈ ಬಗ್ಗೆ ಮಗಳನ್ನು ಪ್ರಶ್ನಿಸಿದಾಗ ಗೊತ್ತಿಲ್ಲದಂತೆ ನಟಿಸಿದ್ದಾಳೆ. ಇದರಿಂದ ಅನುಮಾನಗೊಂಡು ಆಗಾಗ ಮನೆಗೆ ಬರುತ್ತಿದ್ದ ಮದನ್ ಹಾಗೂ ಮಗಳ ವಿರುದ್ಧ ತಾಯಿ ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

    ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಚಿನ್ನಾಭರಣ ಕದ್ದಿರುವುದನ್ನು ಇಬ್ಬರೂ ಒಪ್ಪಿಕೊಂಡಿದ್ದಾರೆ. ಕದ್ದ ಚಿನ್ನವನ್ನು ಮುತ್ತೂಟ್ ಗೋಲ್ಡ್ ಲೋನ್ ಹಾಗೂ ಮಣಪ್ಪುರಂ ಗೋಲ್ಡ್‌ನಲ್ಲಿ ಅಡಮಾನ ಇಟ್ಟಿದ್ದು, ಅದರಿಂದ ಬಂದ ಹಣದಲ್ಲಿ ಇಬ್ಬರು ಮೋಜು ಮಸ್ತಿ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಸಂಪಿಗೆಹಳ್ಳಿ-ಉಪವಿಭಾಗದ ಎ.ಸಿ.ಪಿ. ಟಿ.ರಂಗಪ್ಪ ನೇತೃತ್ವದ ಅಮೃತಹಳ್ಳಿ ಪೊಲೀಸ್ ಇನ್ಸ್‌ ಪೆಕ್ಟರ್ ಗುರುಪ್ರಸಾದ್ ಜಿ. ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ವರದಿ: ಆಂಟೋನಿ ಬೇಗೂರು


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

    admin
    • Website

    Related Posts

    RSS ಅಷ್ಟೊಂದು ಉತ್ತಮವಾಗಿದ್ದರೆ, ಬಿಜೆಪಿ ನಾಯಕರ ಮಕ್ಕಳು ಏಕೆ ಸ್ವಯಂ ಸೇವಕರಾಗುತ್ತಿಲ್ಲ?: ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ

    August 16, 2026

    ಪ್ರಜ್ವಲ್ ರೇವಣ್ಣ ಮೊಬೈಲ್ ಪ್ರಸಂಗ: ಶಿವ—ಪಾರ್ವತಿ ಹೆಸರಲ್ಲಿ ಅಪ್ಪ ಅಮ್ಮನ ನಂಬರ್ | 6 ಬಾರಿ ಬಚಾವಾಗಿದ್ದ ಪ್ರಜ್ವಲ್

    August 14, 2026

    ಮಹಿಳಾ ಪಿಎಸ್‌ ಐ ಮೇಲೆ ಕಪಾಳಮೋಕ್ಷ ಪ್ರಕರಣ: ಮಗಳ ವರ್ತನೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಬಿಜೆಪಿ ಶಾಸಕ ಸುರೇಶ್ ಗೌಡ

    August 14, 2026

    Leave A Reply Cancel Reply

    Our Picks

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಸಚಿನ್ ಮನೋಲ್ಕರ್ ಕಲಾಕೃತಿಗಳಿಗೆ ಕಲಾಸಕ್ತರ ಮೆಚ್ಚುಗೆ: ಕಲಾ ಕ್ಷೇತ್ರಕ್ಕೆ ಪ್ರೋತ್ಸಾಹ ಅಗತ್ಯ ಎಂದ ದತ್ತಾತ್ರಿ ಬೆಳ್ಳೂರೆ

    August 17, 2026

    ಬೀದರ್:  ನಗರದ ಮೋಹನ್ ಮಾರುಕಟ್ಟೆಯಲ್ಲಿರುವ ನಿತುರ್ಕರ್ ಕಾಂಪ್ಲೆಕ್ಸ್‌ ನ ಎರಡನೇ ಮಹಡಿಯಲ್ಲಿ ಭಾನುವಾರ ಕಲಾವಿದ ಸಚಿನ್ ಮನೋಲ್ಕರ್ ಅವರ ಏಕವ್ಯಕ್ತಿ…

    ತುಮಕೂರು–ಬೆಂಗಳೂರು ಮೆಟ್ರೋ ಸಂಪರ್ಕ ಯೋಜನೆ: ಕೇಂದ್ರದ ಅನುಮತಿಗೆ ರಾಜ್ಯ ಸರ್ಕಾರ ಪತ್ರ!

    August 16, 2026

    ಅಂಗನವಾಡಿ ಮೇಲ್ಛಾವಣಿಯ ಸಿಮೆಂಟ್ ಪ್ಲಾಸ್ಟರ್ ಕುಸಿತ: ನಾಲ್ವರು ಮಕ್ಕಳು, ಕಾರ್ಯಕರ್ತೆಗೆ ಗಾಯ

    August 16, 2026

    RSS ಅಷ್ಟೊಂದು ಉತ್ತಮವಾಗಿದ್ದರೆ, ಬಿಜೆಪಿ ನಾಯಕರ ಮಕ್ಕಳು ಏಕೆ ಸ್ವಯಂ ಸೇವಕರಾಗುತ್ತಿಲ್ಲ?: ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ

    August 16, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.