nammatumakuru

    Subscribe to Updates

    Get the latest creative news from FooBar about art, design and business.

    What's Hot

    ಒಳಮೀಸಲಾತಿ:  ರಾಜ್ಯ ಸರ್ಕಾರ ಮಾದಿಗರ ತಾಳ್ಮೆ ಪರೀಕ್ಷಿಸುತ್ತಿದೆ: ಪಿ.ಎನ್.ರಾಮಯ್ಯ ಕಿಡಿ

    March 30, 2026

    ಸಂತಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆ

    March 30, 2026

    ವೈ.ಎನ್.ಹೊಸಕೋಟೆ ಗ್ರಾಮ ಪಂಚಾಯಿತಿಯಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ: ನಿಯಮ ಗಾಳಿಗೆ ತೂರಿದ ಸಿಬ್ಬಂದಿ

    March 30, 2026
    Facebook Twitter Instagram
    ಟ್ರೆಂಡಿಂಗ್
    • ಒಳಮೀಸಲಾತಿ:  ರಾಜ್ಯ ಸರ್ಕಾರ ಮಾದಿಗರ ತಾಳ್ಮೆ ಪರೀಕ್ಷಿಸುತ್ತಿದೆ: ಪಿ.ಎನ್.ರಾಮಯ್ಯ ಕಿಡಿ
    • ಸಂತಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆ
    • ವೈ.ಎನ್.ಹೊಸಕೋಟೆ ಗ್ರಾಮ ಪಂಚಾಯಿತಿಯಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ: ನಿಯಮ ಗಾಳಿಗೆ ತೂರಿದ ಸಿಬ್ಬಂದಿ
    • ಮುಕ್ತ ವಿವಿ ಪ್ರವೇಶಾತಿಗೆ ಆನ್‌ ಲೈನ್ ಮೂಲಕ ಅರ್ಜಿ ಆಹ್ವಾನ
    • ಮಾ.31ರಂದು ಭಗವಾನ್ 1008 ಶ್ರೀ ಮಹಾವೀರ ಸ್ವಾಮಿಯವರ ಜನ್ಮ ಜಯಂತಿ ಮಹೋತ್ಸವ
    • ಕೆಪಿಎಸ್ ಮ್ಯಾಗ್ನೆಟ್ ಯೋಜನೆಗೆ ವಿರೋಧ: ರಾಜ್ಯಮಟ್ಟದ ಸಮಾವೇಶದ ಪೋಸ್ಟರ್ ಬಿಡುಗಡೆ
    • ಏ.15ರಿಂದ 29ರವರೆಗೆ ಮಕ್ಕಳ ಬೇಸಿಗೆ ಶಿಬಿರ: 60 ಮಕ್ಕಳಿಗೆ ಅವಕಾಶ, ನೋಂದಾಯಿಸುವುದು ಹೇಗೆ?
    • ಶಾಸಕ ಅನಿಲ್ ಚಿಕ್ಕಮಾದು ಅಭಿವೃದ್ಧಿ ಕಾರ್ಯ ಸಹಿಸಲಾಗದೇ ವಿರೋಧ ಪಕ್ಷಗಳಿಂದ ಟೀಕೆ: ಪ.ಪಂ. ಸದಸ್ಯ ಶ್ರೀನಿವಾಸ ಕಿಡಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹಿರಿಯೂರು ನಗರದ  ನೂತನ ನಗರಸಭೆ ಕಟ್ಟಡ ಶೀಘ್ರವೇ ಉದ್ಘಾಟನೆ ನಡೆಸುವಂತೆ ರೈತಸಂಘ ಪ್ರತಿಭಟನೆ
    ಜಿಲ್ಲಾ ಸುದ್ದಿ July 20, 2022

    ಹಿರಿಯೂರು ನಗರದ  ನೂತನ ನಗರಸಭೆ ಕಟ್ಟಡ ಶೀಘ್ರವೇ ಉದ್ಘಾಟನೆ ನಡೆಸುವಂತೆ ರೈತಸಂಘ ಪ್ರತಿಭಟನೆ

    By adminJuly 20, 2022No Comments2 Mins Read
    heriuru

    ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ನಗರದ ಮಧ್ಯಭಾಗದಲ್ಲಿ ಸಭೆ, ಸಮಾರಂಭಗಳು, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ ಪುರಭವನವನ್ನು ಕೆಡವಿ, ಸುಮಾರು 5 ಕೋಟಿ ರೂ.ಗಳ ವೆಚ್ಚದಲ್ಲಿ ನೂತನ ನಗರಸಭೆ ಕಟ್ಟಡ ನಿರ್ಮಿಸಲಾಗಿದ್ದು, ಈ ಕೆಲಸ ಪೂರ್ಣಗೊಂಡಿದ್ದರೂ, ಈ ಕಟ್ಟಡ ಉದ್ಘಾಟನಾ ಭಾಗ್ಯ ಕಂಡಿರುವುದಿಲ್ಲ, ಇದನ್ನು ಆದಷ್ಟು ಬೇಗ ಉದ್ಘಾಟಿಸಬೇಕು ಎಂಬುದಾಗಿ ರೈತಸಂಘದ ಜಿಲ್ಲಾ ಕಾರ್ಯಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ ಮನವಿ ಮಾಡಿದರು.

    ಹಿರಿಯೂರು ನಗರದ ನಗರಸಭೆ ಆವರಣದಲ್ಲಿ ರಾಜ್ಯ ರೈತಸಂಘದ ನೇತೃತ್ವದಲ್ಲಿ ನೂತನ ನಗರಸಭಾ ಕಾರ್ಯಾಲಯವನ್ನು ಉದ್ಘಾಟನೆ ಮಾಡುವಂತೆ ಒತ್ತಾಯಿಸಿ, ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರ ಮೂಲಕ ಪೌರಾಡಳಿತ ಸಚಿವರಾದ ಎಂ.ಟಿ.ಬಿ.ನಾಗರಾಜ್ ರವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.


    Provided by
    Provided by

    ಈ ಸಂದರ್ಭದಲ್ಲಿ ನಮ್ಮ ತುಮಕೂರು ಮಾಧ್ಯಮದ ಮೂಲಕ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷರಾದ ಕೆ ಸಿ ಹೊರಕೇರಪ್ಪ,  ಈ ನೂತನ ಕಟ್ಟಡ ಉದ್ಘಾಟನೆಗೆ ಪೀಠೋಪಕರಣಗಳು ಹಾಗೂ ಲಿಫ್ಟ್ ಅಳವಡಿಸುವ ಸಬೂಬು ಹೇಳುತ್ತಾ, ಕಾಲಹರಣ ಮಾಡುತ್ತಿರುವ ಅಧಿಕಾರಿಗಳ ನಡೆ ನಾಗರಿಕರಲ್ಲಿ ಅನುಮಾನ ಮೂಡಿಸುತ್ತಿದ್ದು, ನಗರಸಭೆ ಆಡಳಿತ ಮಂಡಳಿ ಹಾಗೂ ತಾಲ್ಲೂಕಿನ ಜನಪ್ರತಿನಿಧಿಗಳು ನಾಗರೀಕರು ಹಾಗೂ ನಗರಾಭಿವೃದ್ಧಿ ಹಿತದೃಷ್ಟಿಯಿಂದ ಇಚ್ಛಾಶಕ್ತಿ ಪ್ರದರ್ಶಿಸಿ, ನೂತನ ನಗರಸಭಾ ಕಾರ್ಯಾಲಯ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕು ಎಂದರು.

    ಇನ್ನೂ ಒಂದು ತಿಂಗಳ ಒಳಗಾಗಿ ನಗರಸಭೆ ಕಟ್ಟಡವನ್ನು ಉದ್ಘಾಟನೆ ಮಾಡಿ, ಲೋಕಾರ್ಪಣೆ ಮಾಡದೇ ವಿಳಂಬ ನೀತಿ ಅನುಸರಿಸಿದರೆ, ಕರ್ನಾಟಕರಾಜ್ಯ ರೈತಸಂಘದ ತಾಲ್ಲೂಕು ಘಟಕದ ನೇತೃತ್ವದಲ್ಲಿ ಮತ್ತು ಪುರಪಿತೃಗಳ ನೇತೃತ್ವದಲ್ಲಿ ನಗರಸಭೆ ಕಚೇರಿಗೆ ಬೀಗ ಹಾಕಿ ಕಚೇರಿಯ ಮುಂಭಾಗದಲ್ಲಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ರಾಜ್ಯದ ಪೌರಾಡಳಿತ ಸಚಿವರಿಗೆ ಅವರು ಎಚ್ಚರಿಕೆ ನೀಡಿದರು.

    ಮುಖಂಡ ಸಿದ್ದಪ್ಪ ಮಾತನಾಡಿ,  ಈ ಹಿರಿಯೂರು ನಗರಸಭೆಯ ನೂತನ ಕಟ್ಟಡವು ಐದು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು,   ಆದರೆ ಉದ್ಘಾಟನೆ ಮಾತ್ರ ಕಾಣಲು ಸಾಧ್ಯವಾಗುತ್ತಿಲ್ಲ . ರೈತ ಸಂಘದಿಂದ ನೀಡಿರುವ ಒಂದು ತಿಂಗಳ ಕಾಲಾವಧಿಯಲ್ಲಿ ಲೋಕಾರ್ಪಣೆ ಮಾಡದೇ ವಿಳಂಬ ನೀತಿ ಅನುಸರಿಸಿದ್ದಲ್ಲಿ ಕರ್ನಾಟಕ ರಾಜ್ಯ ರೈತ ಸಂಘವು ನೀಡಿದಂತಹ ಮನವಿಯಂತೆ ಹಿರಿಯೂರು ನಗರಸಭೆ ಕಛೇರಿಗೆ ಬೀಗ ಹಾಕಿ ಮುಷ್ಕರ ಮಾಡಲಾಗುತ್ತದೆ ಎಂಬುದಾಗಿ ತಿಳಿಸಿದರು.

     ಪ್ರತಿಭಟನೆ ಉದ್ದೇಶಿಸಿ ಕರ್ನಾಟಕ ರಾಜ್ಯ ರೈರ ಸಂಘದ ಮಹಿಳಾ  ಅಧ್ಯಕ್ಷರಾದ  ವಿ.ಕಲ್ಪನ  ಹಾಗೂ ಇಂದಿರಾ ಗಾಂಧಿ ಅಭಿಮಾನಿ ವೇದಿಕೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾದ ರಂಗಪ್ಪ ಯಾದವ್ ಸಹ  ನಮ್ಮ ತುಮಕೂರು ಮಾಧ್ಯಮದ ಜೊತೆಗೆ ಮಾತನಾಡಿ, ಈ ಬೃಹತ್ ಪ್ರತಿಭಟನೆಗೆ ಬೆಂಬಲ ನೀಡಿದರು.

    ಈ ಸಂದರ್ಭದಲ್ಲಿ ನಗರಸಭಾ ಸ್ಥಾಯಿಸಮಿತಿ ಅಧ್ಯಕ್ಷ ಅಜಯ್ ಕುಮಾರ್, ರೈತಸಂಘದ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀಕಾಂತ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಕಲ್ಪನಾ, ಯುವಘಟಕದ ಅಧ್ಯಕ್ಷರಾದ ಚೇತನ್ ಯಳನಾಡು, ರೈತಮುಖಂಡರುಗಳಾದ ಮೇಟಿಕುರ್ಕೆ ತಿಪ್ಪೇಸ್ವಾಮಿ, ಶ್ರೀಮತಿ ತಿಮ್ಮಕ್ಕ, ಪ್ರಭು ಯಾದವ್ ಸಿದ್ದಪ್ಪ ,ವಿ ಎಚ್ ರಾಜು , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಗುರುಪ್ರಸಾದ್ ,  ದಾದಾಪೀರ್, ಬಿ.ಪಿ.ಉಮಾಪತಿ, ಎಂ.ರಂಗಪ್ಪ ಯಾದವ್, ದೇವರಾಜ್ ಇತರರು ಉಪಸ್ಥಿತರಿದ್ದರು.

    heriuru 3

    ವರದಿ : ಮುರುಳಿಧರನ್ ಆರ್ ಚಿತ್ರದುರ್ಗ.

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

     

     

    admin
    • Website

    Related Posts

    ಸಂತಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆ

    March 30, 2026

    ಶಾಸಕ ಅನಿಲ್ ಚಿಕ್ಕಮಾದು ಅಭಿವೃದ್ಧಿ ಕಾರ್ಯ ಸಹಿಸಲಾಗದೇ ವಿರೋಧ ಪಕ್ಷಗಳಿಂದ ಟೀಕೆ: ಪ.ಪಂ. ಸದಸ್ಯ ಶ್ರೀನಿವಾಸ ಕಿಡಿ

    March 29, 2026

    ಸಾಲ ಮಾಡಿ ಮದುವೆ ಮಾಡುವುದನ್ನು ತಪ್ಪಿಸಿ: ಶಾಸಕ ಅನಿಲ್ ಚಿಕ್ಕಮಾದು ಕಿವಿಮಾತು

    March 29, 2026

    Comments are closed.

    Our Picks

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026

    ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ

    March 23, 2026

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026

    ನಮ್ಮೊಂದಿಗೆ ಪ್ರೇಮ, ಆದ್ರೆ ಮದುವೆಯಾಗಿದ್ದು ಮೋದಿಯವರನ್ನು: ದೇವೇಗೌಡರ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ

    March 18, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಒಳಮೀಸಲಾತಿ:  ರಾಜ್ಯ ಸರ್ಕಾರ ಮಾದಿಗರ ತಾಳ್ಮೆ ಪರೀಕ್ಷಿಸುತ್ತಿದೆ: ಪಿ.ಎನ್.ರಾಮಯ್ಯ ಕಿಡಿ

    March 30, 2026

    ತುಮಕೂರು: ರಾಜ್ಯ ಸರ್ಕಾರ ಮಾ.27 ರಂದು ಸಚಿವ ಸಂಪುಟದ ಸಭೆ ನಡೆಸಿ, ಒಳಮೀಸಲಾತಿಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಿ, ಜಾರಿ…

    ಸಂತಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆ

    March 30, 2026

    ವೈ.ಎನ್.ಹೊಸಕೋಟೆ ಗ್ರಾಮ ಪಂಚಾಯಿತಿಯಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ: ನಿಯಮ ಗಾಳಿಗೆ ತೂರಿದ ಸಿಬ್ಬಂದಿ

    March 30, 2026

    ಮುಕ್ತ ವಿವಿ ಪ್ರವೇಶಾತಿಗೆ ಆನ್‌ ಲೈನ್ ಮೂಲಕ ಅರ್ಜಿ ಆಹ್ವಾನ

    March 30, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.