ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿರುವ ಎಂಎಸ್ಸಿ ಪದವೀಧರೆ ಪತ್ನಿಯ ಬರ್ತ್ ಡೇ ದಿನವೇ ಆಕೆಯನ್ನು ಗಂಡನೇ ಕೊಲೆ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗ ನಗರದ ಐಯುಡಿಪಿ ಬಡಾವಣೆಯ ಮನೆಯಲ್ಲಿ ಕೆಳಗೋಟೆ ಬಡಾವಣೆಯ ಕಿರಣ್ ಪತ್ನಿ ಚಳ್ಳಕೆರೆ ತಾಲೂಕಿನ ಬಾಲೇನಹಳ್ಳಿಯ ವಿನುತಾರ ಮೃತದೇಹ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಡುವೆ ಪ್ರೇಮಾಂಕುರ ಆಗಿತ್ತು. ಚಿತ್ರದುರ್ಗದಲ್ಲಿ ಎಂಎಸ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿನುತಾ, ಡಿಪ್ಲೋಮಾ ಓದುತ್ತಿದ್ದ ಕಿರಣ್ ನನ್ನು ಪ್ರೀತಿಸಿ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಒಂದೂವರೆ ವರ್ಷದ ಗಂಡು ಮಗುವಿದೆ.
ಆರು ತಿಂಗಳಿಂದ ಕಿರಣ್ ಹೆಂಡತಿಗೆ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿ ಹೊಡೆದು ತವರು ಮನೆಗೆ ಕಳಿಸಿದ್ದಾನೆ. ಸೋಮವಾರ ವಿನುತಾ ಬರ್ತ್ ಡೇ ಆಗಿದ್ದು ಸಂಜೆಗೆ ದೇಗುಲಕ್ಕೆ ಹೋಗಿ ಬರೋಣವೆಂದು ಕರೆದಿದ್ದಾಳೆ.
ಗಲಾಟೆ ಮಾಡಿದ ಆಕೆಯನ್ನು ಹೊಡೆದು ಸಾಯಿಸಿ ನೇಣು ಬಿಗಿದಿದ್ದು ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾನೆ. ಒಂದೂವರೆ ವರ್ಷದ ಮಗು ವಿನುತಾ(27) ನೇಣಿಗೀಡಾದ ಸ್ಥಳದಲ್ಲಿ ಕಾಲ ಬಳಿಯಲ್ಲೇ ಇದೆ. ಕಿರಣ್ ಗೆ ಡ್ರಗ್ಸ್, ಮದ್ಯ ಸೇವನೆ, ಗಾಂಜಾ ಸೇವನೆಯ ದುಶ್ಚಟಗಳಿವೆ. ಕೆಲವು ಯುವತಿಯರಿಗೆ ಇದೇ ರೀತಿ ನಂಬಿಸಿ ಮೋಸ ಮಾಡಿದ್ದಾನೆಂದು ಮೃತಳ ತಾಯಿ ರಾಜಶ್ರೀ ಆರೋಪಿಸಿದ್ದಾರೆ.ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ಕಿರಣ್ ನನ್ನು ವಶಕ್ಕೆ ಪಡೆದಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy