2019-20ನೇ/2020-21ನೇ/2021-22ನೇ(ಜನವರಿ ಆವೃತ್ತಿ) ಶೈಕ್ಷಣಿಕ ಸಾಲಿನಲ್ಲಿ ಕರಾಮುವಿಯಲ್ಲಿ ಪ್ರವೇಶಾತಿ ಪಡೆದ ಸ್ನಾತಕ /ಸ್ನಾತಕೋತರ ಪದವಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನವೀಕರಣಕ್ಕೆ ಬೋಧನಾ ಶುಲ್ಕ ಪಾವತಿಸಲು ಅರ್ಜಿ ಆಹ್ವಾನಿಸಲಾಗಿದೆ.
2022-23ನೇ (ಜನವರಿ ಆವೃತ್ತಿ) ಸಾಲಿಗೆ ದ್ವಿತೀಯ ವರ್ಷದ B.A/B.Com/BBA/BCA/B.Sc ಹಾಗೂ ತೃತೀಯ ವರ್ಷದ B.A/B.Com ಮತ್ತು ಅಂತಿಮ ವರ್ಷದ M.A/MCJ/M.Com/M.Sc/MBA/B.Ed ತರಗತಿಯ ಪ್ರವೇಶಾತಿ ನವೀಕರಣಕ್ಕೆ ಬೋಧನಾ ಶುಲ್ಕ ಪಾವತಿಸಲು ದಂಡ ಶುಲ್ಕವಿಲ್ಲದೆ 2023ರ ಮಾರ್ಚ್ 31, 200ರೂ ದಂಡ ಶುಲ್ಕದೊಂದಿಗೆ 2023ರ ಏಪ್ರಿಲ್ 14 ಹಾಗೂ 400ರೂ ದಂಡ ಶುಲ್ಕದೊಂದಿಗೆ 2023ರ ಏಪ್ರಿಲ್ 29 ಕೊನೆಯ ದಿನಾಂಕವಾಗಿದೆ.
ವಿದ್ಯಾರ್ಥಿಗಳು ಕರಾಮುವಿ ಅಧಿಕೃತ ವೆಬ್ ಸೈಟ್ www.ksoumysuru.ac.in or http://ksouportal.com/views/StudentHome.aspx ಮುಖಾಂತರ ಬೋಧನಾ ಶುಲ್ಕ ಪಾವತಿಸಿ ನಂತರ ಅರ್ಜಿಯನ್ನು ತಾವು ಮೊದಲು ಪ್ರವೇಶಾತಿ ಪಡೆದ ಕೇಂದ್ರಕ್ಕೆ ಕಡ್ಡಾಯವಾಗಿ ಸಲ್ಲಿಸುವುದು.
ಹೆಚ್ಚಿನ ವಿವರಗಳಿಗಾಗಿ: ಕರಾಮುವಿ ತುಮಕೂರು ಪ್ರಾದೇಶಿಕ ಕೇಂದ್ರ, ಟೂಡಾ ಲೇಔಟ್, ರಾಜೀವ್‍ಗಾಂಧಿ ನಗರ, ಗಂಗಸಂದ್ರ ಮುಖ್ಯರಸ್ತೆ, ಮೆಳೆಕೋಟೆ, ತುಮಕೂರು-572105 ದೂರವಾಣಿ ಸಂಖ್ಯೆ- 0816–2955580, 9844506629, 9886112434, 7349474339 ಅನ್ನು ಸಂಪರ್ಕಿಸಬಹುದು ಎಂದು ಪ್ರಾದೇಶಿಕ ನಿರ್ದೇಶಕರಾದ ಡಾ. ಲೋಕೇಶ್ ಆರ್. ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA