ವಡಗಾವಿಯ ದತ್ತಾತ್ರೇಯ ಗಲ್ಲಿ, ಸಪ್ಪಾರ ಗಲ್ಲಿ ಪ್ರದೇಶಗಳಲ್ಲಿ ಇಂದು ಮನೆ-ಮನೆಗೆ ಹೋಗಿ ಪ್ರಚಾರ ಮಾಡಿದೆ. ಜನರು ಗೌರವಯುತವಾಗಿ ಬರಮಾಡಿಕೊಂಡು, ಈ ಚುನಾವಣೆಯಲ್ಲಿ ಬಹುಮತಗಳಿಂದ ಚುನಾಯಿಸಿ ತರುವ ಭರವಸೆ ನೀಡಿದರು.
ದತ್ತಾತ್ರೇಯ ಗಲ್ಲಿ ಹಾಗೂ ಸಪ್ಪಾರ ಬೀದಿಗಳಲ್ಲಿ ರಸ್ತೆಗಳು ಹಾಳಾಗಿ, ಮನೆಗಳೆಲ್ಲ ಧೂಳಿನಿಂದ ಆವರಿಸುತ್ತಿವೆ.
ಮೇಲಾಗಿ ನೀರಿನ ಸಮಸ್ಯೆಯನ್ನೂ ಸಹ ಸ್ಥಳೀಯರು ತಿಳಿಸಿದರು. ಯುವಕರು, ಮಹಿಳೆಯರು ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ. ಅವರೆಲ್ಲರ ಆಸೆಗಳಿಗೆ ಕಾಂಗ್ರೆಸ್ ಸರ್ಕಾರವು ಸಹಾಯ ಮಾಡಲಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಘೋಷಿಸಿರುವ 5 ಗ್ಯಾರಂಟಿಗಳ ಬಗ್ಗೆ ಕೂಡ ವಿವರಿಸಿದೆ. ಜನರು ಈ ಪಂಚ ಯೋಜನೆಗಳ ಲಾಭ ಪಡೆಯಲು ಆಸಲ್ತಿ ತೋರುತ್ತಿದ್ದಾರೆ.
ವಿಶೇವಾಗಿ ನೇಕಾರರು ಅನುಭವಿಸುತ್ತಿರುವ ಕಷ್ಟಗಳಿಗೆ ನಾನು ಶಾಸಕಿಯಾದರೆ ಪರಿಹಾರ ನೀಡುವ ಭರವಸೆ ನೀಡಿದ್ದು, ಅದನ್ನು ಜನರು ಮುಕ್ತಕಂಠದಿಂದ ಹೊಗಳುತ್ತಿದ್ದಾರೆ. ಏನೇ ಆಗಲಿ ಈ ಬಾರಿ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಈ ಬಾರಿ ಹೆಣ್ಣುಮಗಳು ಗೆದ್ದು ಬರಲಿ ಎಂದು ಹಾರೈಕೆಯ ಮಾತುಗಳನ್ನಾಡುತ್ತಿದ್ದಾರೆ. ಜನರಿಂದ ಸಿಗುತ್ತಿರುವ ಪ್ರೀತಿ, ಬೆಂಬಲಕ್ಕೆ ಅವರಿಗೆ ಎಷ್ಟು ಧನ್ಯವಾದಗಳನ್ನು ತಿಳಿಸಿದರೂ ಸಾಲದು ಎಂದು ಅವರು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


